ಯುವರಾಜ ಕಾಲೇಜಿನಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಮೈಸೂರು ವಿವಿ ಕುಲಸಚಿವೆ ಎಂ.ಕೆ.ಸವಿತಾ ಉದ್ಘಾಟಿಸಿದರು. ಪ್ರೊ.ಡಿ.ಆನಂದ್, ಪ್ರೊ.ಎಸ್.ಮಹದೇವ ಮೂರ್ತಿ, ಪ್ರೊ.ಎಚ್.ಎಸ್. ಜಯಂತ್, ಡಾ. ಸಿ.ಡಿ. ಪರಶುರಾಮ ಇದ್ದರು.
ಶಿಕ್ಷಣವೇ ಶೋಷಣೆಯ ಸರಪಳಿಗಳನ್ನು ಮುರಿಯುವ ಶಕ್ತಿಯುತ ಆಯುಧ.
ಮೈಸೂರು: ದಲಿತ ಹಾಗೂ ಶೋಷಿತ ಸಮುದಾಂುದ ಮನಸ್ಸುಗಳನ್ನು ನಿಯಂತ್ರಣದಲ್ಲಿಡುವ ಪ್ರಯತ್ನಗಳಿಗೆ ಅವಕಾಶ ಕೊಡಬಾರದು. ಅಂತಹ ಬಂಧನಗಳಿಂದ ಹೊರಬರಲು ಶಿಕ್ಷಣವೇ ವಾರ್ಗವಾಗಿದ್ದು, ಜ್ಞಾನವೃದ್ಧಿ ಮೂಲಕ ಸ್ವಾತಂತ್ರ್ಯ ಸಾಧಿಸಬೇಕು ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ಡಿ.ಆನಂದ್ ಅಭಿಪ್ರಾಯಪಟ್ಟರು.
ನಗರದ ಯುವರಾಜ ಕಾಲೇಜು ಅಮೃತ ಮಹೋತ್ಸವ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಶಿಕ್ಷಣವೇ ಶೋಷಣೆಯ ಸರಪಳಿಗಳನ್ನು ಮುರಿಯುವ ಶಕ್ತಿಯುತ ಆಯುಧ. ಶಿಕ್ಷಣ ಇಲ್ಲದ ಜೀವನವೇ ಶೋಷಣೆಯ ಮೂಲ ಎಂದು ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಪಾದಿಸಿದ್ದರು ಎಂದು ಹೇಳಿದರು.
ಶಿಕ್ಷಣವನ್ನು ಕೇವಲ ಪದವಿ ಅಥವಾ ಉದ್ಯೋಗದ ಸಾಧನವಾಗಿ ನೋಡುವ ಮನೋಭಾವದಿಂದ ದೂರವಿರಬೇಕು. ಉದ್ಯೋಗ ಸಿಗಲಿ, ಸಿಗದಿರಲಿ ಪ್ರತಿಯೊಬ್ಬರೂ ವಿದ್ಯಾವಂತರಾಗಬೇಕು. ಶಿಕ್ಷಣದ ನಿಜವಾದ ಉದ್ದೇಶ ಜ್ಞಾನವೃದ್ಧಿ ಮತ್ತು ಚಿಂತನಾ ಶಕ್ತಿಯ ಬೆಳವಣಿಗೆ ಎಂದರು.
ಸರ್ಕಾರದ ಸೌಲಭ್ಯಗಳನ್ನು ದಲಿತ ಹಾಗೂ ಹಿಂದುಳಿದ ಸಮುದಾಯಗಳು ಸದುಪಯೋಗಪಡಿಸಿಕೊಂಡು ಶೈಕ್ಷಣಿಕ, ಸಾವಾಜಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ತಮ್ಮ ಸ್ಥಾನವಾನ ಬಲಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಂಬೇಡ್ಕರ್ ದಿನಕ್ಕೆ ಸುವಾರು 18 ಗಂಟೆಗಳ ಕಾಲ ಓದು ಮತ್ತು ಸಂಶೋಧನೆಗೆ ಸಮಯ ಮೀಸಲಿಟ್ಟಿದ್ದರು. ವೈಯಕ್ತಿಕ ವೈಭವಕ್ಕಿಂತ ಪುಸ್ತಕಗಳಿಗೆ ಹೆಚ್ಚಿನ ಮಹತ್ವ ನೀಡಿದ್ದರು.
ತಮ್ಮ ಮನೆಯನ್ನು ನಿರ್ಮಿಸುವಾಗಲೂ ಅಂಬೇಡ್ಕರ್ ವಿಶೇಷ ಗ್ರಂಥಾಲಯ ರೂಪಿಸಿದ್ದು, ಕೊಲಂಬಿಯಾ ವಿಶ್ವವಿದ್ಯಾಲಯ ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ವಾದರಿಯ ಗ್ರಂಥಾಲಯವಿರಬೇಕು ಎಂದು ಸೂಚಿಸಿದ್ದರು. ಸುವಾರು 50 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಿಕೊಂಡಿದ್ದರು. ಜ್ಞಾನಸಂಪತ್ತಿಗೆ ಆದ್ಯತೆ ನೀಡಿದ ಮಹಾನ್ ವ್ಯಕ್ತಿತ್ವ ಎಂದು ಬಣ್ಣಿಸಿದರು.
ವಿದ್ಯಾರ್ಥಿಗಳು ಕುತೂಹಲ ಮನೋಭಾವ ಬೆಳೆಸಿಕೊಂಡು, ಪ್ರಶ್ನಿಸುವ ಗುಣ ರೂಢಿಸಿಕೊಳ್ಳಬೇಕು. ಜೀವನದ ಬದಲಾವಣೆಗಳಿಗೆ ಪರಿಸ್ಥಿತಿ ಕಾರಣ ಮಾಡದೇ ಪರಿಶ್ರಮ ಮತ್ತು ಜ್ಞಾನದಿಂದಲೇ ಯಶಸ್ಸು ಸಾಧಿಸುವ ಮನೋಭಾವ ಹೊಂದಬೇಕು ಎಂದರು.
ಮೈಸೂರು ವಿವಿ ಕುಲಸಚಿವೆ ಎಂ.ಕೆ.ಸವಿತಾ, ಪ್ರಾಂಶುಪಾಲ ಪ್ರೊ.ಎಸ್.ಮಹದೇವ ಮೂರ್ತಿ, ಆಡಳಿತಾಧಿಕಾರಿ ಪ್ರೊ.ಎಚ್.ಎಸ್. ಜಯಂತ್ ಹಾಗೂ ಜ್ಞಾನವಾಹಿನಿ ಸಂಚಾಲಕ ಡಾ.ಸಿ.ಡಿ.ಪರಶುರಾಮ ಇದ್ದರು.