ನಂಜನಗೂಡಿ ನಲ್ಲಿ ಡಿ.ವಿ.ಜಿ. ಯವರ ಜನ್ಮದಿನ ಆಚರಣೆ

ನಗರದ ವಿದ್ಯಾನಗರದಲ್ಲಿರುವ ಶಂಕರ ಸದನದಲ್ಲಿ  ಬುಧವಾರ ಡಿ.ವಿ.ಜಿ ಯವರ ಜನ್ಮದಿನವನ್ನು ಆಚರಿಸಲಾಯಿತುತಗಡೂರು ಗೋಪಿನಾಥ್,  ಶ್ರೀನಿವಾಸ ರಾವ್ ,  ಬಾಲಸುಬ್ರಹ್ಮಣ್ಯ,   ರಮೇಶ್, ಲಕ್ಷ್ಮೀಶ್,   ಭಕ್ತವತ್ಸಲ,   ಸುಮಾ ವಿ ಎನ್, ಮತ್ತಿತರರನ್ನು ಕಾಣಬಹುದು.
ನಗರದ ವಿದ್ಯಾನಗರದಲ್ಲಿರುವ ಶಂಕರ ಸದನದಲ್ಲಿ ಬುಧವಾರ ಡಿ.ವಿ.ಜಿ ಯವರ ಜನ್ಮದಿನವನ್ನು ಆಚರಿಸಲಾಯಿತುತಗಡೂರು ಗೋಪಿನಾಥ್, ಶ್ರೀನಿವಾಸ ರಾವ್ , ಬಾಲಸುಬ್ರಹ್ಮಣ್ಯ, ರಮೇಶ್, ಲಕ್ಷ್ಮೀಶ್, ಭಕ್ತವತ್ಸಲ, ಸುಮಾ ವಿ ಎನ್, ಮತ್ತಿತರರನ್ನು ಕಾಣಬಹುದು.
Published on
ನಂಜನಗೂಡು:ನಗರದ ವಿದ್ಯಾನಗರದಲ್ಲಿರುವ ಶಂಕರ ಸದನದಲ್ಲಿ ಬುಧವಾರ ಡಿ.ವಿ.ಜಿ ಯವರ ಜನ್ಮದಿನವನ್ನು ಆಚರಿಸಲಾಯಿತು. ಗಾಯಕ ಶ್ರೀನಿವಾಸ್ ರಾವ್ ಡಿ.ವಿ.ಜಿ ಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಡಿ.ವಿ.ಜಿ ಯವರ ಬದುಕಿನ ಸರಳತೆ, ವಿಶಾಲ ಮನೋಭಾವ, ಹಾಗೂ ಅವರ ವಿದ್ವತ್ ಕುರಿತು ಮಾತನಾಡಿ ಅವರನ್ನು 'ಗೀತಾಚಾರ್ಯರು ' ಎಂದರು.
ನಂತರ ಭಾರತ್ ವಿಕಾಸ ಪರಿಷತ್ತಿನ ಕಾರ್ಯದರ್ಶಿ ಕೆ.ಎಸ್. ಶ್ರೀಧರ್ ಮಾತನಾಡಿ ಡಿ.ವಿ.ಜಿ ಯವರ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ನಡೆದರೆ ಸಮಾಜದ ಸ್ವಾಸ್ಥ್ಯ ಸುಧಾರಿಸುತ್ತದೆ ಎಂದರು ಹಾಗೂ ಅವರು ಮುಳಬಾಗಿಲಿನಲ್ಲಿದ್ದ ದಿನಗಳನ್ನು ನೆನಪು ಮಾಡಿಕೊಂಡರು
ಕಾರ್ಯಕ್ರಮದಲ್ಲಿ ತಗಡೂರು ಗೋಪಿನಾಥ್, ಶ್ರೀನಿವಾಸ ರಾವ್ , ಬಾಲಸುಬ್ರಹ್ಮಣ್ಯ, ರಮೇಶ್, ಲಕ್ಷ್ಮೀಶ್, ಭಕ್ತವತ್ಸಲ, ಸುಮಾ ವಿ ಎನ್, ಸೌಮ್ಯಶ್ರೀ ಇಂದಿರೇಶ್, ನಂಜನಗೂಡು ಸತ್ಯನಾರಾಯಣ, ರಂಜನಾ ಲಕ್ಷ್ಮೀಶ್, ಶೋಭ ನಾಗಶಯನ, ಶೈಲಜಾ ಗೋಪಿನಾಥ್ , ಮಾಸ್ಟರ್ ಸಾತ್ವಿಕ್, ಕುಮಾರಿ ಸಾನ್ವಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net