ವಿಜಯನಗರದ ಎರಡನೇ ಹಂತದ ಸದ್ವಿದ್ಯಾ ಸೆಮಿ ರೆಸಿಡೆನ್ಸಿಯಲ್ ಪಿಯು ಕಾಲೇಜಿನ ಡಿ.ಎಸ್.ಧನ್ವಿ ವಿಜ್ಞಾನ ವಿಷಯದಲ್ಲಿ 597 ಅಂಕ ಪಡೆದು ರಾಜ್ಯಕ್ಕೆ ಮೂರನೇ ರ‌್ಯಾಂಕ್ ಗಳಿಸಿದ್ದಾರಲ್ಲದೆ, ಜಿಲ್ಲೆಗೆ ಟಾಪರ್ ಆಗಿದ್ದಾರೆ.
ಭೌತಶಾಸ, ಗಣಿತ, ಸಂಸ್ಕೃತ, ಕಂಪ್ಯೂಟರ್ ಸೈನ್ಸ್‌ನಲ್ಲಿ 100ಕ್ಕೆ 100 ಅಂಕ ಪಡೆದುಕೊಂಡಿದ್ದು, ರಾಸಾಯನಿಕ ಶಾಸದಲ್ಲಿ 99 ಹಾಗೂ ಇಂಗ್ಲಿಷ್‌ನಲ್ಲಿ 98 ಅಂಕ ಗಳಿಸಿದ್ದಾಳೆ. ಇವರು ಸದ್ವಿದ್ಯಾ ಸೆಮಿ ರೆಸಿಡೆನ್ಸಿಯಲ್ ಪಿಯು ಕಾಲೇಜಿನ ಭೌತಶಾಸ ಉಪನ್ಯಾಸಕ ಸುಧನ್ವಾ ಹಾಗೂ ಕುಸುಮಾ ದಂಪತಿ ಪುತ್ರಿ.
ರಾಜ್ಯಕ್ಕೆ ಮೂರನೇ ರ‌್ಯಾಂಕ್, ಜಿಲ್ಲೆಗೆ ಟಾಪರ್ ಆಗಿರುವುದಕ್ಕೆ ತುಂಬಾ ಸಂತೋಷವಾಗಿದೆ. ಕಾಲೇಜಿನಲ್ಲಿ ಉಪನ್ಯಾಸಕರು ಹಾಗೂ ಮನೆಯಲ್ಲಿ ಪಾಲಕರ ಮಾರ್ಗದರ್ಶನದಿಂದ ಇದು ಸಾಧ್ಯವಾಯಿತು. ಪ್ರಥಮ ಪಿಯುಸಿಯಿಂದಲೇ ಸಿಇಟಿ, ಜೆಇಇ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೆ. ದ್ವಿತೀಯ ಪಿಯುಸಿಗೆ ಬಂದಾಗ ಬೋರ್ಡ್ ಎಕ್ಸಾಂಗೆ ಹೆಚ್ಚು ಗಮನ ಹರಿಸಿದೆ. ಬೋರ್ಡ್ ಪ್ರಶ್ನೆ ಪತ್ರಿಕೆಯನ್ನು ಹೆಚ್ಚು ಅಧ್ಯಯನ ಮಾಡಿದ್ದು ಸಹಕಾರಿಯಾಯಿತು. ಪ್ರತಿದಿನ ಅಭ್ಯಾಸ ಮಾಡುತ್ತಿದ್ದೆ. ಟ್ಯೂಷನ್‌ಗೆ ಹೋಗಲಿಲ್ಲ. ಚಿತ್ರಕಲೆಯಲ್ಲಿ ಆಸಕ್ತಿ ಇದೆ. ಹೆಚ್ಚು ಸಂಗೀತ ಕೇಳುತ್ತಿದ್ದೆ. ಮನೆಯಲ್ಲಿ 4 ಗಂಟೆ ಓದುತ್ತಿದ್ದೆ. ಏರೋನಾಟಿಕಲ್‌ನಲ್ಲಿ ಇಂಜಿನಿಯರಿಂಗ್ ಮಾಡಿ ಸ್ನಾತಕೋತ್ತರ ಪದವಿ ಪಡೆಯುವ ಆಸೆ ಇದೆ ಎನ್ನುತ್ತಾರೆ ಧನ್ವಿ.