ಗುಣಮಟ್ಟದ ಪೈಪ್ ಹಾಕದೆ ಕಳಪೆ ಪೈಪ್ ಅಳವಡಿಸಿದ್ದಾರೆ. ಕೆಲ ನಲ್ಲಿಗಳು ಹಾಳಾಗಿವೆ. ನಲ್ಲಿಯ ಸಣ್ಣ ಪೈಪ್ ಕೂಡ ಗುಣಮಟ್ಟದಲ್ಲ. ಕೆಲವೆಡೆ ಮನೆಯ ಗೋಡೆ, ಚರಂಡಿ ಪಕ್ಕ ಎಲ್ಲೆಂದರಲ್ಲಿ ಸಿಮೆಂಟ್ ಸ್ಲ್ಯಾಬ್‌ಗಳನ್ನು ಹಾಕಿ ನಲ್ಲಿ ಅಳವಡಿಸಿದ್ದಾರೆ. ಸಿಸಿ ರಸ್ತೆಗಳನ್ನು ಯದ್ವಾತದ್ವಾ ಕಿತ್ತು ಹಾಕಲಾಗಿದೆ. ರಸ್ತೆಯನ್ನು ಪೈಪ್ ಹಾಕುವ ಜಾಗಕ್ಕೆ ಅನುಗುಣವಾಗಿ ಕತ್ತರಿಸದೆ ಜೆಸಿಬಿ ಬಳಸಿ ಅಗೆಯಲಾಗಿದೆ... ಹೀಗೆ ಹತ್ತಾರ ಆರೋಪಗಳನ್ನು ಜನರು ಥಟಥಟನೆ ಹೇಳುತ್ತಾರೆ.ಗ್ರಾಮದಲ್ಲಿ ಸುಮಾರು 60 ಕುಟುಂಬಗಳು ಇದ್ದು, ಭೋವಿ