ಸಮಾಜ ಪರಿವರ್ತನೆಗೆ ನಾಟಕಗಳು ಅಗತ್ಯ

ದೊಡ್ಡ ಜಾತ್ರೆ ಅಂಗವಾಗಿ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ನಡೆದ ನಾಟಕ ಪ್ರದರ್ಶನವನ್ನು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಹಾಡ್ಯ ಕೆ.ರಂಗಸ್ವಾಮಿ ಉದ್ಘಾಟಿಸಿದರು. ಶಿವಮಲ್ಲಯ್ಯ, ಸಂದೀಪ್,  ಚಿಕ್ಕಸ್ವಾಮಿ, ಪ್ರಕಾಶ್, ಸಂಪತ್ತು ಇದ್ದರು.
ದೊಡ್ಡ ಜಾತ್ರೆ ಅಂಗವಾಗಿ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ನಡೆದ ನಾಟಕ ಪ್ರದರ್ಶನವನ್ನು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಹಾಡ್ಯ ಕೆ.ರಂಗಸ್ವಾಮಿ ಉದ್ಘಾಟಿಸಿದರು. ಶಿವಮಲ್ಲಯ್ಯ, ಸಂದೀಪ್, ಚಿಕ್ಕಸ್ವಾಮಿ, ಪ್ರಕಾಶ್, ಸಂಪತ್ತು ಇದ್ದರು.
Published on
ನಂಜನಗೂಡು: ಸಮಾಜದ ಪರಿವರ್ತನೆಗೆ ನಾಟಕಗಳು ಅಗತ್ಯವಾಗಿವೆ ಎಂದು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಹಾಡ್ಯ ಕೆ.ರಂಗಸ್ವಾಮಿ ಅಭಿಪ್ರಾಯಪಟ್ಟರು.
ದಕ್ಷಿಣ ಕಾಶಿ ನಂಜನಗೂಡು ಶ್ರೀ ನಂಜುಂಡೇಶ್ವರ ಸ್ವಾಮಿ ದೊಡ್ಡ ಜಾತ್ರಾ ಮಹೋತ್ಸವದ ಗೌತಮ ಪಂಚ ಮಹಾ ರಥೋತ್ಸವದ ಅಂಗವಾಗಿ ಹಿನ್ನೆಲೆಯಲ್ಲಿ ನಗರದಲ್ಲಿ ಇಂಪು ಇಂಚರ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸೋಮವಾರ ರಾತ್ರಿ ನಡೆದ ಅಣ್ಣನ ಅರಮನೆ ಎಂಬ ಸಾಮಾಜಿಕ ನಾಟಕ ಉದ್ಘಾಟಿಸಿ ಮಾತನಾಡಿದರು.
ಇಂಪು ಇಂಚರ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಕಿರುಗುಂದ ವತಿಯಿಂದ ಸಾಂಸ್ಕೃತಿಕ ಚಟುವಟಿಕೆ, ವರುಣಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಿರಂತರವಾಗಿ ಜಾನಪದ, ರಂಗಭೂಮಿ ಹಾಗೂ ಇತರ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸದಾ ಚಟುವಟಿಯಿಂದ ಇದ್ದು ಅತ್ಯುತ್ತಮ ಸಂಸ್ಥೆಯಾಗಿದೆ. ದಶಕಗಳ ಹಿಂದೆ ನಾಟಕ ಪ್ರದರ್ಶನಗಳು ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿದ್ದವು. ಸಾಮಾಜಿಕ ನಾಟಕಗಳಿಂದ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಉದ್ದೇಶ ಇರುತ್ತಿತ್ತು. ಇತ್ತೀಚಿನ ದಿನಗಳಲ್ಲಿ ನಾಟಕಗಳು ಕ್ಷೀಣಿಸುತ್ತಿವೆ. ಕಲಾವಿದರಿಗೆ ವೇದಿಕೆಗಳು ಸಿಗುತ್ತಿಲ್ಲ. ಸಮಾಜದ ಜನರಿಗೆ ಒಳ್ಳೆಯ ಸಂದೇಶವನ್ನು ನೀಡಲು ಇಂತಹ ನಾಟಕಗಳು ಪ್ರದರ್ಶನವಾಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿವಮಲ್ಲಯ್ಯ, ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ನಿರ್ದೇಶಕ ಸಂದೀಪ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಚಿಕ್ಕಸ್ವಾಮಿ, ಪ್ರಕಾಶ್, ಸಂಪತ್ತು, ಸಿದ್ದರಾಜು, ಶಿವನಾಗ, ಶೇಷಣ್ಣ, ಚಿನ್ನಸ್ವಾಮಿ, ಮುಖಂಡರಾದ ವೆಂಕಟೇಶ್, ಮಹದೇವ, ಕೆ.ಶಿವಕುಮಾರ್, ಟ್ರಸ್ಟ್ ಸದಸ್ಯ ಶ್ರೀನಿವಾಸಮೂರ್ತಿ, ಶಿವಯ್ಯ, ಮಣಿಕಂಠಸ್ವಾಮಿ , ಸಿಂಧುವಳ್ಳಿಪುರ ಲೋಕೇಶ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net