4ರಂದು ನಾಟಕ ದೃಶ್ಯಗಳ ಕಾರ್ಯಕ್ರಮ

Drama
Drama
Published on
ನಜರ್‌ಬಾದ್ ಮುಖ್ಯ ರಸ್ತೆಯಲ್ಲಿನ ನಾಟ್ಯ ಸಂಸ್ಥೆ ವತಿಯಿಂದ ವಿಶ್ವ ರಂಗಭೂಮಿ ದಿನದ ಅಂಗವಾಗಿ ಏ.4ರ ಸಂಜೆ 6.30ಕ್ಕೆ ರಂಗಾಯಣ ಆವರಣದ ಶ್ರೀರಂಗ ವೇದಿಕೆಯಲ್ಲಿ ಬಸವಣ್ಣ ಮತ್ತು ಕ್ರಾಂತಿ ಕಲ್ಯಾಣ ಎಂಬ ನಾಟಕ ದೃಶ್ಯಗಳ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಸ್ಥೆ ಕಾರ್ಯದರ್ಶಿ ಎನ್.ಸಂತೋಷ್ ತಿಳಿಸಿದರು.
ಬಿ.ಪುಟ್ಟಸ್ವಾಮಿ ಅವರ ರಚನೆಯ ನಾಟಕ ಇದಾಗಿದ್ದು, ಇವುಗಳಲ್ಲಿನ ಆಯ್ದ ಭಾಗ ಪ್ರದರ್ಶಿಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಏ.5ರಿಂದ ನಜರ್‌ಬಾದ್ ಹಾಗೂ ಕುವೆಂಪುನಗರದ ಒಂದೊಂದು ಸ್ಥಳದಲ್ಲಿ ಮಕ್ಕಳಿಗೆ ಬೇಸಿಗೆ ಶಿಬಿರ ಆಯೋಜಿಸಲಾಗಿದೆ. ಮಕ್ಕಳಿಗೆ ನೃತ್ಯ, ನಾಟಕ, ಭಗವದ್ಗೀತೆ, ಹಾಡುಗಾರಿಕೆ, ಯೋಗಾಸನ ಮೊದಲಾದವನ್ನು ಕಲಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಎನ್.ಪವಿತ್ರಾ, ಲಕ್ಷ್ಮೀರಾಮ್, ಶ್ರುತಿ ಹಾಗೂ ನಾಗಸುಂದರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net