ಜನ್ಮದಿನಕ್ಕೆ ಫ್ಲೆಕ್ಸ್, ಬ್ಯಾನರ್ ಅಳವಡಿಸಬೇಡಿ: ಸಂಸದ ಯದುವೀರ್

ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
Published on

ಪ್ರಮುಖ ಮುಖ್ಯಾಂಶಗಳು

  • ಜನ್ಮದಿನದ ನೆಪದಲ್ಲಿ ನಗರದ ಅಂದಗೆಡಿಸುವ ಮತ್ತು ಪರಿಸರಕ್ಕೆ ಹಾನಿಯಾಗುವ ಫ್ಲೆಕ್ಸ್ ಹಾಕಬಾರದು
  • ಜನ್ಮದಿನವನ್ನು ಯಾವುದೇ ರೀತಿಯ ಆಡಂಬರ, ಅದ್ದೂರಿತನ ಅಥವಾ ದುಬಾರಿ ವೆಚ್ಚದ ಮೂಲಕ ಆಚರಿಸಬಾರದು.
 ಮೈಸೂರು: ಮಾ.24ರಂದು ನಮ್ಮ ಜನ್ಮದಿನದ ಅಂಗವಾಗಿ ನಗರದಲ್ಲಿ ಫ್ಲೆಕ್ಸ್, ಬ್ಯಾನರ್ ಅಳವಡಿಸಬಾರದು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕೋರಿದ್ದಾರೆ.
 ಜನ್ಮದಿನವನ್ನು ಯಾವುದೇ ರೀತಿಯ ಆಡಂಬರ, ಅದ್ದೂರಿತನ ಅಥವಾ ದುಬಾರಿ ವೆಚ್ಚದ ಮೂಲಕ ಆಚರಿಸಬಾರದು. ಬದಲಾಗಿ, ಈ ದಿನವನ್ನು ಸಮಾಜಮುಖಿ ಕಾರ್ಯಗಳ ಮೂಲಕ ಅರ್ಥಪೂರ್ಣವಾಗಿ ಆಚರಿಸೋಣ. 
ಈ ಸಂದರ್ಭದಲ್ಲಿ ರಕ್ತದಾನ ಶಿಬಿರ, ಅನ್ನದಾನ, ಸಸಿ ನೆಡುವುದು ಹಾಗೂ ಜನೋಪಕಾರಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಂಭ್ರಮಿಸುವುದು ಹೆಚ್ಚು ಸೂಕ್ತ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾಂಸ್ಕೃತಿಕ ನಗರಿ ಮೈಸೂರಿನ ಸೌಂದರ್ಯವನ್ನು ಕಾಪಾಡುವುದು ನಮ್ಮೆಲ್ಲರ ಹೊಣೆ. ಈ ಹಿನ್ನೆಲೆಯಲ್ಲಿ ಜನ್ಮದಿನದ ನೆಪದಲ್ಲಿ ನಗರದ ಅಂದಗೆಡಿಸುವ ಮತ್ತು ಪರಿಸರಕ್ಕೆ ಹಾನಿಯಾಗುವ ಫ್ಲೆಕ್ಸ್ ಹಾಕಬಾರದು ಎಂದು ಹೇಳಿದ್ದಾರೆ
‘ಫ್ಲೆಕ್ಸ್‌ಮುಕ್ತ ಮೈಸೂರು’ ನನ್ನ ಕನಸುಗಳಲ್ಲಿ ಒಂದು.  ಈ ಕನಸನ್ನು ನನ್ನ ಜನ್ಮದಿನದಿಂದಲೇ ಸಾಕಾರಗೊಳಿಸಲು ಎಲ್ಲರೂ ಕೈಜೋಡಿಸಬೇಕು. ಈ ರೀತಿ ಸಹಕಾರವೇ ನನ್ನ ಜನ್ಮದಿನದ ನಿಜವಾದ ಉಡುಗೊರೆ ಎಂದು ಹೇಳಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net