ಪಠ್ಯದ ಭೂತವನ್ನು ಮಕ್ಕಳಿಗೆ ತಲೆಗೆ ತುಂಬದಿರಿ

ಎಚ್.ಡಿ.ಕೋಟೆ ಪಟ್ಟಣದ ಹ್ಯಾಂಡ್ಪೋಸ್ಟ್ ನ ತಾರಕ ಫಂಕ್ಷನ್ ಹಾಲ್‌ನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನ ವಿಕಾಸ ವತಿಯಿಂದ ನಡೆದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಸುಧಾ ಮೃತ್ಯುಂಜಯಪ್ಪ ಹಾಗೂ ಶ್ರುತಿ ಅವರನ್ನು ಸನ್ಮಾನಿಸಲಾಯಿತು. ಭಾಸ್ಕರ್,್ ಕನ್ನಡ ಪ್ರಮೋದ್,  ಶಿವರಾಜಪ್ಪ, ಮೆಡಿಕಲ್ ಸಿ.ಎನ್. ನಾಗಣ್ಣ, ನಿವೃತ್ತ ಶಿಕ್ಷಕ ಸ್ವಾಮಿ ಇದ್ದರು.
ಎಚ್.ಡಿ.ಕೋಟೆ ಪಟ್ಟಣದ ಹ್ಯಾಂಡ್ಪೋಸ್ಟ್ ನ ತಾರಕ ಫಂಕ್ಷನ್ ಹಾಲ್‌ನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನ ವಿಕಾಸ ವತಿಯಿಂದ ನಡೆದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಸುಧಾ ಮೃತ್ಯುಂಜಯಪ್ಪ ಹಾಗೂ ಶ್ರುತಿ ಅವರನ್ನು ಸನ್ಮಾನಿಸಲಾಯಿತು. ಭಾಸ್ಕರ್,್ ಕನ್ನಡ ಪ್ರಮೋದ್, ಶಿವರಾಜಪ್ಪ, ಮೆಡಿಕಲ್ ಸಿ.ಎನ್. ನಾಗಣ್ಣ, ನಿವೃತ್ತ ಶಿಕ್ಷಕ ಸ್ವಾಮಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಮಾಜ ಸೇವಕಿ ಸುಧಾ ಮೃತ್ಯುಂಜಯಪ್ಪ ಮನವಿ
ಎಚ್.ಡಿ.ಕೋಟೆ:ಪಾಲಕರು ತಮ್ಮ ಮಕ್ಕಳ ಚಲನವಲನ ಬಗ್ಗೆ ಗಮನಹರಿಸದೆ ಇರುವ ಕಾರಣಕ್ಕೆ ಕೆಲ ಮಕ್ಕಳು ತಪ್ಪು ದಾರಿ ಹಿಡಿಯುವ ಸಾಧ್ಯತೆ ಇದೆ ಎಂದು ಸಮಾಜ ಸೇವಕಿ ಸುಧಾ ಮೃತ್ಯುಂಜಯಪ್ಪ ಅಭಿಪ್ರಾಯಪಟ್ಟರು.
ಪಟ್ಟಣದ ಹ್ಯಾಂಡ್ ಪೋಸ್ಟ್‌ನಲ್ಲಿರುವ ತಾರಕ ಫಂಕ್ಷನ್ ಹಾಲ್‌ನಲ್ಲಿ ಶನಿವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ಮನೆಗಳಲ್ಲಿ ಮಹಿಳೆಯರು ಧಾರಾವಾಹಿ ಮತ್ತು ಮೊಬೈಲ್ ಹೆಚ್ಚು ಬಳಕೆಯಿಂದಾಗಿ ಮಕ್ಕಳ ಜತೆ ಸಮಯ ಕಳೆಯಲು ಸಾಧ್ಯ ಆಗುತ್ತಿಲ್ಲ. ಈ ಕಾರಣದಿಂದಾಗಿ ಕೆಲ ಮಕ್ಕಳು ತಪ್ಪು ದಾರಿ ಹಿಡಿದು ಸಮಾಜಕ್ಕೆ ಮಾರಕ ಆಗುತ್ತಿದ್ದಾರೆ ಎಂದು ತಿಳಿಸಿದರು.
ಮನೆಯಲ್ಲಿ ಮಕ್ಕಳಿಗೆ ಇಂದಿನ ದಿನಗಳಲ್ಲಿ ಆಹಾರಕ್ಕಿಂತ ಪ್ರೀತಿಯನ್ನು ನೀಡಬೇಕಾದ ಅನಿವಾರ್ಯತೆ ಇದೆ. ಪಾಲಕರು ಮಕ್ಕಳಿಗೆ ಕೇವಲ ಪಠ್ಯದ ಭೂತವನ್ನು ತಲೆಯಲ್ಲಿ ತುಂಬುತ್ತಾ ಸಾಗಿದ್ದಾರೆ. ಪಠ್ಯದ ಜತೆಗೆ ಪ್ರೀತಿ, ವಾತ್ಸಲ್ಯ, ಮಮಕಾರ ಇದ್ದಲ್ಲಿ ಮಾತ್ರ ಮಕ್ಕಳು ತಮ್ಮ ಕೈ ತಪ್ಪುವುದಿಲ್ಲ ಎಂದರು.
ಒಂದು ಸರ್ಕಾರ ಜಾರಿಗೆ ತರುವ ಬಹುತೇಕ ಯೋಜನೆಗಳನ್ನು ವೀರೇಂದ್ರ ಹೆಗ್ಗಡೆ 43 ವರ್ಷಗಳ ಹಿಂದೆಯೇ ಸ್ಥಾಪಿಸಿದ್ದು, ಧರ್ಮಸ್ಥಳ ಯೋಜನೆಯು ಮಹಿಳೆಯರ ಸಬಲೀಕರಣಕ್ಕಾಗಿ ಶ್ರಮಿಸುತ್ತಿದೆ ಎಂದು ತಿಳಿಸಿದರು.
ತಾಲೂಕು ಯೋಜನಾಧಿಕಾರಿ ಭಾಸ್ಕರ್ ಮಾತನಾಡಿ, ತಾಲೂಕಿನಲ್ಲಿ 2446 ಸ್ವಸಹಾಯ ಸಂಘಗಳಿದ್ದು ಇದುವರೆಗೂ 900 ಕೋಟಿ ರೂ.ಗೂ ಹೆಚ್ಚು ಸಾಲ ಪಡೆದಿದ್ದಲ್ಲದೇ ಮರುಪಾವತಿಯನ್ನೂ ಉತ್ತಮವಾಗಿ ನಡೆಸುತ್ತಾ ಬಂದಿದ್ದು, ಶೇ.99.99 ಮರುಪಾವತಿಯಾಗಿದೆ ಎಂದರು.
ರಾಜ್ಯದಲ್ಲಿ 80930ಕ್ಕೂ ನಿರ್ಗತಿಕರಿಗೆ ವೇತನ ನೀಡಲಾಗುತ್ತಿದೆ. ಅದೇ ರೀತಿ ಪ್ರತಿ ವರ್ಷ 10,000ಕ್ಕೂ ಹೆಚ್ಚಿನ ಆಹಾರದ ಕಿಟ್‌ಗಳನ್ನು ವಾತ್ಸಲ್ಯ ಕಾರ್ಯಕ್ರಮದಡಿ ವಿತರಿಸಲಾಗಿದೆ. ಮನೆ ಇಲ್ಲದವರಿಗೆ ಸುಮಾರು 1212 ಮನೆಗಳನ್ನು ಮೂರು ವರ್ಷಗಳಿಂದ ನಿರ್ಮಿಸಿ ಹಸ್ತಾಂತರಿಸಿದ್ದು, ಇನ್ನೂ 500 ಮನೆಗಳ ನಿರ್ಮಾಣಕ್ಕೆ ಈ ವರ್ಷ ಚಾಲನೆ ನೀಡಲಾಗಿದೆ. ರಾಜ್ಯದಲ್ಲಿ 510 ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಮಾಡಲಾಗಿದೆ ಎಂದರು.
ರಾಜ್ಯದಲ್ಲಿ 1000 ಸಾವಿರ ಕೆರೆಗಳ ಹೂಳನ್ನು ತೆಗೆಯಲಾಗಿದೆ, ನಮ್ಮ ತಾಲೂಕಿನಲ್ಲೂ 4 ಕೆರೆಗಳಿಗೆ ಹೂಳನ್ನು ತೆಗೆಯಲಾಗಿದ್ದು ಕೆರೆ ಅಭಿವೃದ್ಧಿ ಮಾಡಲಾಗಿದೆ. ರಾಜ್ಯದಲ್ಲಿ ಶಿಕ್ಷಕರ ಕೊರತೆಯನ್ನು ಗಮನಿಸಿದ ವೀರೇಂದ್ರ ಹೆಗ್ಗಡೆ  1070 ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ. ಅವರಿಗೆ ಸಂಬಳದ ರೂಪದಲ್ಲಿ ಮಾಸಿಕ 9000 ರೂ. ನೀಡಲಾಗುತ್ತಿದೆ ಎಂದರು.
ವಿಶ್ವ ಭಾರತಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಶ್ರುತಿ ಮಾತನಾಡಿ, ಪಾಲಕರು ಮಕ್ಕಳು ಬೆಳವಣಿಗೆಯ ವೇಳೆ ತಿದ್ದಬೇಕು, ಶಾಲಾ ದಿನಗಳಲ್ಲಿ ಶಿಕ್ಷಕರು ತಿದ್ದಬೇಕು, ಇವೆರಡು ಆಗದಿದ್ದಾಗ ಸಮಾಜದಲ್ಲಿ ಆ ವ್ಯಕ್ತಿ ತಪ್ಪು ದಾರಿ ತುಳಿಯುತ್ತಾನೆ, ಆಗ ತಿದ್ದುವ ಕೆಲಸವನ್ನು ಈ ಸಮಾಜ ಮಾಡುತ್ತದೆ ಎಂದರು.
ಪಟ್ಟಣದ ಹ್ಯಾಂಡ್‌ಪೋಸ್ಟ್‌ನ ತಾರಕ ವಿದ್ಯಾಸಂಸ್ಥೆಗೆ ಕೊಠಡಿ ನಿರ್ಮಾಣಕ್ಕೆ 1 ಲಕ್ಷ ರೂ. ಚೆಕ್ ಅನ್ನು ಶಿಕ್ಷಕ ಆನಂದ್ ಅವರಿಗೆ ಸಂಸ್ಥೆ ವತಿಯಿಂದ ವಿತರಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಹೂಗುಚ್ಛ ಸ್ಪರ್ಧೆ ಏರ್ಪಡಿಸಲಾಗಿತ್ತು. ಜತೆಗೆ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕನ್ನಡ ಪ್ರಮೋದ್, ನಾಟಿ ವೈದ್ಯ ಶಿವರಾಜಪ್ಪ, ಮೆಡಿಕಲ್ ಸಿ.ಎನ್. ನಾಗಣ್ಣ, ನಿವೃತ್ತ ಶಿಕ್ಷಕ ಸ್ವಾಮಿ, ಸರ್ವಮಂಗಳಾ, ಗಣಪತಿ, ನಟರಾಜು, ಶಿವರಾಜು, ಬಂಗಾರಶೆಟ್ಟಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net