ವೈದ್ಯರ ಸಲಹಾ ಚೀಟಿ ಇಲ್ಲದೆ ಔಷಧ ನೀಡಬೇಡಿ

ನಗರದ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ವಿಶ್ವ ಓವರ್‌ಡೋಸ್ ಜಾಗೃತಿ ಕಾರ್ಯಕ್ರಮವನ್ನು ಜೆಎಸ್‌ಎಸ್ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಪಿ.ಮಧು ಉದ್ಘಾಟಿಸಿದರು. ಡಾ. ಶಿಲ್ಪಾ ಪಾಲಾಕ್ಷ, ಡಾ. ಸುಮನಾ, ಡಾ. ಎಂ.ರಮೇಶ್, ಡಾ. ಕೆ.ಮೃತ್ಯುಂಜಯ ಇದ್ದರು.
ನಗರದ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ವಿಶ್ವ ಓವರ್‌ಡೋಸ್ ಜಾಗೃತಿ ಕಾರ್ಯಕ್ರಮವನ್ನು ಜೆಎಸ್‌ಎಸ್ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಪಿ.ಮಧು ಉದ್ಘಾಟಿಸಿದರು. ಡಾ. ಶಿಲ್ಪಾ ಪಾಲಾಕ್ಷ, ಡಾ. ಸುಮನಾ, ಡಾ. ಎಂ.ರಮೇಶ್, ಡಾ. ಕೆ.ಮೃತ್ಯುಂಜಯ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜೆಎಸ್‌ಎಸ್ ಆಸ್ಪತ್ರೆಯ ನಿರ್ದೇಶಕ ಡಾ. ಸಿ.ಪಿ.ಮಧು ಸಲಹೆ
ಮೈಸೂರು: ವೈದ್ಯರ ಸಲಹಾ ಚೀಟಿ ಇಲ್ಲದೆ  ಔಷಧ ನೀಡಬೇಡಿ ಎಂದು ಜೆಎಸ್‌ಎಸ್ ಆಸ್ಪತ್ರೆಯ ನಿರ್ದೇಶಕ ಡಾ. ಸಿ.ಪಿ.ಮಧು ತಿಳಿಸಿದರು.
ಜೆಎಸ್‌ಎಸ್ ಆಸ್ಪತ್ರೆಯ ಕ್ಲಿನಿಕಲ್ ಫಾರ್ಮಸಿ (ಡಿಪಾರ್ಟ್‌ಮೆಂಟ್ ಆಫ್ ಫಾರ್ಮಸಿ ಪ್ರಾಕ್ಟೀಸ್) ಮತ್ತು ಜೆಎಸ್‌ಎಸ್ ಕಾಲೇಜ್ ಆಫ್ ಫಾರ್ಮಸಿ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ವಿಶ್ವ ಓವರ್‌ಡೋಸ್ ಜಾಗೃತಿ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಔಷಧ ಅಗತ್ಯಕ್ಕಿಂತ ಹೆಚ್ಚಾಗಿ ತೆಗೆದುಕೊಳ್ಳಬಾರದು. ಇದರಿಂದ ಅಂಗಾಂಗಗಳು ತೊಂದರೆಗೆ ಒಳಗಾಗುತ್ತವೆ. ಅಡ್ಡಪರಿಣಾಮಗಳು ಜಾಸ್ತಿ. ಹೀಗಾಗಿ ಸಾರ್ವಜನಿಕರಲ್ಲಿ ಇದರ ಬಗ್ಗೆ ಜಾಗೃತಿ ಮತ್ತು ತಿಳಿವಳಿಕೆ ಅಗತ್ಯ ಎಂದರು. 
ಜೆಎಸ್‌ಎಸ್ ಆಸ್ಪತ್ರೆಯ ಉಪನಿರ್ದೇಶಕಿ ಡಾ.ಸುಮನಾ ಮಾತನಾಡಿ, ಔಷಧಗಳ ಅತಿಯಾದ ಸೇವನೆಯು ದೇಹದ ವಿವಿಧ ಅಂಗಗಳ ಮೇಲೆ ಪರಿಣಾಮ ಬೀರಬಹುದು. ಮೆದುಳು, ಕಿಡ್ನಿ ಹಾಗೂ ಎಲ್ಲ ಅಂಗಾಂಗಗಳು ಸಹ ತೊಂದರೆಗೆ ಒಳಗಾಗುತ್ತವೆ. ಆದ್ದರಿಂದ ವೈದ್ಯರ ಸಲಹೆ ಪಡೆದು ನಂತರ ಔಷಧ  ತೆಗೆದುಕೊಳ್ಳಬೇಕು ಎಂದರು.
ಕ್ಲಿನಿಕಲ್ ಫಾರ್ಮಸಿ ವಿಭಾಗದ ಮುಖ್ಯಸ್ಥೆ ಡಾ. ಶಿಲ್ಪಾ ಪಾಲಾಕ್ಷ ಮಾತನಾಡಿ, ದೇಹಕ್ಕೆ ಎಷ್ಟು ಪ್ರಮಾಣದಲ್ಲಿ ಔಷಧ ಕೊಡಬೇಕು ಎಂಬುದು ವೈದ್ಯರಿಗೆ ತಿಳಿದಿರುತ್ತದೆ. ಆದ್ದರಿಂದ ವೈದ್ಯರ ಸಲಹೆ ಮುಖ್ಯ ಎಂದರು.
ಓವರ್‌ಡೋಸ್ ಕಾರಣಗಳು, ಅಪಾಯಗಳು, ಪರಿಣಾಮಗಳು ಹಾಗೂ ತಡೆಗಟ್ಟುವ ಕ್ರಮಗಳ ಕುರಿತು ಸಮಗ್ರವಾಗಿ ವಿವರಿಸಿದರು. 
ಔಷಧವನ್ನು ಯಾವ ಸಮಯದಲ್ಲಿ ಯಾವ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಸಲಹೆ ಮತ್ತು ಮಾಹಿತಿಯನ್ನು ಕ್ಲಿನಿಕಲ್ ಫಾರ್ಮಸಿ ವಿಭಾಗದಲ್ಲಿ ಲಭ್ಯವಿದ್ದು, ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬಹುದು ಎಂದು ಮನವಿ ಮಾಡಿದರು. 
ಕ್ಲಿನಿಕಲ್ ಫಾರ್ಮಸಿ ವಿಭಾಗದ ಪ್ರಾಧ್ಯಾಪಕ ಡಾ. ಎಂ.ರಮೇಶ್, ಜೆಎಸ್‌ಎಸ್ ಆಸ್ಪತ್ರೆಯ ಔಷಧ ಕೇಂದ್ರದ ಪ್ರಭಾರಿ ಅಧಿಕಾರಿ ಡಾ. ಕೆ.ಮೃತ್ಯುಂಜಯ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net