ಡಿ.ಕೆ.ಶಿವಕುಮಾರ್ ಸ್ಟೇಟಸ್ ಹೇಳಿಕೆ ಸರಿಯಲ್ಲ

ಎಂ.ಜೆ.ರವಿಕುಮಾರ್
ಎಂ.ಜೆ.ರವಿಕುಮಾರ್
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಮೇಯರ್ ಎಂ.ಜೆ.ರವಿಕುಮಾರ್ ತಿರುಗೇಟು
ಮೈಸೂರು: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಜಕೀಯ ಎಂಬುದನ್ನು ಭೂಮಿಗೆ ಬಂದ ಮೇಲೆ ಕಲಿತಿದ್ದು, ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಹುಟ್ಟಿನಿಂದಲೇ ರಾಜಕೀಯವನ್ನು ಕರಗತವನ್ನಾಗಿಸಿಕೊಂಡಿದ್ದಾರೆ ಎಂದು ಮಾಜಿ ಮೇಯರ್ ಎಂ.ಜೆ.ರವಿಕುಮಾರ್ ಹೇಳಿದರು.
ತಾತ ಎಚ್.ಡಿ.ದೇವೇಗೌಡರಂತೆ ಹಾಗೂ ತಂದೆ ಎಚ್.ಡಿ.ಕುಮಾರಸ್ವಾಮಿ ಅವರಂತೆ ರಾಜಕೀಯ ಚಾಣಾಕ್ಷತವನ್ನು ಬೆಳೆಸಿಕೊಳ್ಳುವ ಮೂಲಕ ರಾಜ್ಯದಲ್ಲಿ ಮನೆ ಮಾತಾಗಿರುವ ಜೆಡಿಎಸ್‌ನ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಚಕ್ರವ್ಯೆಹ ಭೇದಿಸುವ ಆಧುನಿಕ ಅಭಿಮನ್ಯು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಿಮ್ಮ ಸ್ಟೇಟಸ್‌ನಾ ಮುಖ್ಯಮಂತ್ರಿಗಳ ಮುಂದೆ ತೋರಿಸಿ ಎಂಬ ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ಸರಿಯಲ್ಲ. ನಿಖಿಲ್ ಕುಮಾರಸ್ವಾಮಿ ಮುಂದೆ ಸ್ಟೇಟಸ್ ತೋರಿಸುವ ಅಗತ್ಯವಿಲ್ಲ. ಅವರೊಬ್ಬ ಜನಸೇವಕ. ಜನರ ಹಿತಕ್ಕಾಗಿ ಬೆಂಗಳೂರಿನಿಂದ ಮೈಸೂರಿನವರೆಗೂ ಪಾದಯಾತ್ರೆ ಮಾಡಿ ಎಲ್ಲರನ್ನು ನಡುಗಿಸುವಂತೆ ಮಾಡಿದ ನಿಖಿಲ್ ಕುಮಾರಸ್ವಾಮಿ ಸ್ಟೇಟಸ್ ಬಗ್ಗೆ ತಿಳಿದಿಲ್ಲ. ನೊಂದ ನೂರಾರು ಜನರು ದಿನ ನಿತ್ಯ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ನಿವಾಸದ ಬಳಿ ಬಂದು ತಮ್ಮ ಕಷ್ಟಗಳಿಗೆ ಪರಿಹಾರ ಕೊಂಡುಕೊಳ್ಳುತ್ತಿರುವುದು ಸ್ಟೇಟಸ್ ಯಾರಿಗಿದೆ ಎಂಬುದನ್ನು ತಿಳಿಸುತ್ತದೆ ಎಂದು ತಿರುಗೇಟು ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net