ಹಂದಿಗುಡ್ಡ ಕಾವಲ್ ಗ್ರಾಮಸ್ಥರಿಗೆ ಜರ್ಕಿನ್ ವಿತರಣೆ

ಹಂದಿಗುಡ್ಡ ಕಾವಲು ಗ್ರಾಮಸ್ಥರಿಗೆ ಟಿಬೆಟಿಯನ್ ಓಲ್ಡ್ ಮತ್ತು ನ್ಯೂ ಸೆಟ್ಲ್‌ಮೆಂಟ್ ಸಂಸ್ಥೆ ವತಿಯಿಂದ ಜರ್ಕಿನ್ ಮತ್ತು ಸ್ವೆಟರ್ ಗಳನ್ನು ಪೆಮಾ ವಿತರಿಸಿದರು. ರಾಜೇಗೌಡ, ತೆಂಜಿನ್ ಡೊಲ್ಮಾ, ತೆಂಜಿನ್ ನುಟು ಇದ್ದರು.
ಹಂದಿಗುಡ್ಡ ಕಾವಲು ಗ್ರಾಮಸ್ಥರಿಗೆ ಟಿಬೆಟಿಯನ್ ಓಲ್ಡ್ ಮತ್ತು ನ್ಯೂ ಸೆಟ್ಲ್‌ಮೆಂಟ್ ಸಂಸ್ಥೆ ವತಿಯಿಂದ ಜರ್ಕಿನ್ ಮತ್ತು ಸ್ವೆಟರ್ ಗಳನ್ನು ಪೆಮಾ ವಿತರಿಸಿದರು. ರಾಜೇಗೌಡ, ತೆಂಜಿನ್ ಡೊಲ್ಮಾ, ತೆಂಜಿನ್ ನುಟು ಇದ್ದರು.
Published on
ಬೈಲುಕುಪ್ಪೆ: ಇಲ್ಲಿನ ಟಿಡಿಎಲ್ ಕಚೇರಿಯ ಓಲ್ಡ್ ಮತ್ತು ನ್ಯೂ ಸೆಟ್ಲ್‌ಮೆಂಟ್ ಟಿಬೇಟಿಯನ್ ಸಂಸ್ಥೆ ವತಿಯಿಂದ ಹಂದಿಗುಡ್ಡ ಕಾವಲ್ ಗ್ರಾಮಸ್ಥರಿಗೆ ಜರ್ಕಿನ್ ಮತ್ತು ಸ್ವೆಟರ್‌ಗಳನ್ನು ಮಂಗಳವಾರ ವಿತರಿಸಲಾಯಿತು.
ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಂದಿಗುಡ್ಡ ಕಾವಲ್ ಗ್ರಾಮದ ಸಮುದಾಯ ಭವನದ ಆವರಣದಲ್ಲಿ ಗಿರಿಜನರಿಗೆ ಸಂಸ್ಥೆಯ ಅಧ್ಯಕ್ಷ ಪೆಮಾ ಅವರ ಸಮ್ಮುಖದಲ್ಲಿ ಇಂಟೂ ಟಿಬೆಟಿಯನ್ ಸದಸ್ಯ ತಿರುಮಲಪುರದ ರಾಜೇಗೌಡ ವಿತರಿಸಿ ಮಾತನಾಡಿ, ಪ್ರತಿದಿನ ಮುಂಜಾನೆಯಿಂದ 10 ಗಂಟೆ ತನಕ ಹಾಗೂ ರಾತ್ರಿ ವೇಳೆ ತುಂಬ ಚಳಿ ಆವರಿಸುತ್ತಿದ್ದು ಇದನ್ನು ಗಮನಿಸಿದ ಟಿಡಿಎಲ್ ಓಲ್ಡ್ ಮತ್ತು ನ್ಯೂ ಸೆಟ್ಲ್‌ಮೆಂಟ್ ವತಿಯಿಂದ ಉಳ್ಳವರಿಂದ ಪಡೆದು ಇಲ್ಲಿಯ ಬಡವರು, ಮಹಿಳೆಯರು ಹಾಗೂ ಮಕ್ಕಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ 90ಕ್ಕೂ ಹೆಚ್ಚು ಜನರಿಗೆ ಜರ್ಕಿನ್ ಮತ್ತು ಸ್ವೆಟರ್‌ಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.
ಟಿಡಿಎಲ್ ಓಲ್ಡ್ ಮತ್ತು ನ್ಯೂ ಸೆಟ್ಲ್‌ಮೆಂಟ್ ಕಚೇರಿಯ ಅಧ್ಯಕ್ಷ ಪೆಮಾ ಮಾತನಾಡಿ, ನಮ್ಮ ದೇಶದಿಂದ ಭಾರತಕ್ಕೆ ವಲಸೆ ಬಂದಾಗ ನಮಗೆ ಆಶ್ರಯ ಕೊಟ್ಟ ಭಾರತವನ್ನು ಎಂದೂ ಮರೆಯುವುದಿಲ್ಲ. ಇಲ್ಲಿಯ ಹಿಂದು-ಮುಸ್ಲಿಂ ಎಲ್ಲ ವರ್ಗದವರ ಜತೆ ಅಣ್ಣ-ತಮ್ಮಂದಿರಂತೆ ನಾವು ಸಹಬಾಳ್ವೆಯಿಂದ ಬದುಕುತ್ತಿದ್ದೇವೆ ಎಂದು ಹೇಳಿ ಕರ್ನಾಟಕ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಣ್ಯರನ್ನು ನೆನಪಿಸಿಕೊಂಡರು.
ಟಿಡಿಎಲ್ ಕಚೇರಿ ಸಿಬ್ಬಂದಿ ತೆಂಚಿನ್ ಯಾಂಗಿ, ಸತ್ಯಂ ಟುಮ, ತೆಂಜಿನ್ ಸೋನಾಮ್, ತೆಂಜಿನ್ ನುಟು, ತೆಂಜಿನ್ ಡೋಲ್ಮಾ. ಗ್ರಾಮಸ್ಥರಾದ ಮಹದೇವ, ಕರಿಯ, ಶಿವು, ಮಣಿ, ಶಿವಮ್ಮ ಸೇರಿದಂತೆ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net