ಬಡ ಹಾಗೂ ಹಲ್ಲುಗಳಿಲ್ಲದ ಫಲಾನುಭವಿಗಳಿಗೆ ಉಚಿತ ದಂತಪಂಕ್ತಿಗಳ ವಿತರಣೆ

 ಜಿಲ್ಲಾ ಆಸ್ಪತ್ರೆ ಮತ್ತು ಸಾಂಕ್ರಾಮಿಕ ಆಸ್ಪತ್ರೆಯ ದಂತ ವೈದ್ಯ ವಿಭಾಗದ ವತಿಯಿಂದ ಗುರುವಾರ ಉಚಿತ ದಂತಪಂಕ್ತಿಗಳನ್ನು ವಿತರಿಸಲಾಯಿತು. ಡಾ.ಎಸ್.ಚಿದಂಬರ, ಡಾ. ಸತ್ಯಪ್ರಕಾಶ್, ಡಾ.ಮೀನಾ ಕುಮಾರಿ, ದಂತ ತಂತ್ರಜ್ಞ ಜಗದೀಶ್, ದಂತ ನೈರ್ಮಲ್ಯ ತಜ್ಞ ಲಕ್ಷ್ಮೀಕಾಂತ್, ಶುಶ್ರೂಷಾಧಿಕಾರಿ ಆಶಾ ವಿಕ್ಟೋರಿಯಾ, ಸಿಬ್ಬಂದಿ ನೀಲಾ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ಸರ್ಕಾರದ ದಂತಭಾಗ್ಯ ಯೋಜನೆಯಡಿ ಕಾರ್ಯಕ್ರಮ ಆಯೋಜನೆ
  • ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎಸ್.ಚಿದಂಬರ ಅವರಿಂದ ವಿತರಣೆ
ಮೈಸೂರು: ರಾಜ್ಯ ಸರ್ಕಾರದ ದಂತಭಾಗ್ಯ ಯೋಜನೆಯಡಿ ಬಡ ಹಾಗೂ ಹಲ್ಲುಗಳಿಲ್ಲದ ಫಲಾನುಭವಿಗಳಿಗೆ ಉಚಿತ ದಂತಪಂಕ್ತಿಗಳನ್ನು ವಿತರಿಸುವ ಕಾರ್ಯಕ್ರಮವನ್ನು ಜಿಲ್ಲಾ ಆಸ್ಪತ್ರೆ ಮತ್ತು ಸಾಂಕ್ರಾಮಿಕ ಆಸ್ಪತ್ರೆಯ ದಂತ ವೈದ್ಯ ವಿಭಾಗದ ವತಿಯಿಂದ ಗುರುವಾರ ದಂತ ಹೊರರೋಗಿಗಳ ವಿಭಾಗದಲ್ಲಿ ಆಯೋಜಿಸಲಾಯಿತು.
ಜಿಲ್ಲಾ ಆಸ್ಪತ್ರೆಯ ದಂತ ಪ್ರಯೋಗಾಲಯದಲ್ಲಿ ಸಿದ್ಧಪಡಿಸಲಾದ ದಂತಪಂಕ್ತಿಗಳನ್ನು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎಸ್.ಚಿದಂಬರ ಫಲಾನುಭವಿಗಳಿಗೆ ವಿತರಿಸಿದರು.
ಬಳಿಕ ಮಾತನಾಡಿದ ಅವರು, ಹಲ್ಲುಗಳ ಕೊರತೆಯಿಂದ ಆಹಾರ ಸೇವನೆ ಸೇರಿದಂತೆ ದೈನಂದಿನ ಚಟುವಟಿಕೆಗಳಲ್ಲಿ ತೊಂದರೆ ಅನುಭವಿಸುವ ಬಡ ರೋಗಿಗಳಿಗೆ ಉಚಿತವಾಗಿ ದಂತಪಂಕ್ತಿ ಒದಗಿಸುವ ಮೂಲಕ ಮತ್ತೆ ಅಗಿಯುವ ಸಾಮರ್ಥ್ಯ ಹಾಗೂ ಆತ್ಮವಿಶ್ವಾಸವನ್ನು ಕಲ್ಪಿಸುವುದು ದಂತಭಾಗ್ಯ ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದರು.
ಆರೋಗ್ಯಾಧಿಕಾರಿಗಳಾದ ಡಾ. ಸತ್ಯಪ್ರಕಾಶ್, ಡಾ.ಮೀನಾ ಕುಮಾರಿ, ದಂತ ತಂತ್ರಜ್ಞ ಜಗದೀಶ್, ದಂತ ನೈರ್ಮಲ್ಯ ತಜ್ಞ ಲಕ್ಷ್ಮೀಕಾಂತ್, ಶುಶ್ರೂಷಾಧಿಕಾರಿ ಆಶಾ ವಿಕ್ಟೋರಿಯಾ, ಸಿಬ್ಬಂದಿ ನೀಲಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net