ಬೀರೂರು-ಶಿವಮೊಗ್ಗ ನಿಲ್ದಾಣಗಳ ಮಧ್ಯೆ ಲೈನ್‌ಬ್ಲಾಕ್ ಮತ್ತು ಪವರ್ ಬ್ಲಾಕ್ ಕಾಮಗಾರಿ
ಮೈಸೂರು: ಬೀರೂರು-ಶಿವಮೊಗ್ಗ ನಿಲ್ದಾಣಗಳ ಮಧ್ಯೆ ಲೈನ್‌ಬ್ಲಾಕ್ ಮತ್ತು ಪವರ್ ಬ್ಲಾಕ್ ಕಾಮಗಾರಿ ಕೈಗೊಳ್ಳಲಾಗಿದ್ದು, ಈ ಹಿನ್ನೆಲೆಯಲ್ಲಿ ಕೆಳಕಂಡ ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ
ರೈಲುಗಳ ನಿಯಂತ್ರಣ:
ರೈಲು ಸಂಖ್ಯೆ 16225 ಮೈಸೂರು-ಶಿವಮೊಗ್ಗ ಎಕ್ಸ್‌ಪ್ರೆಸ್ ರೈಲು ಜೂ.12, 13ರಂದು 35 ನಿಮಿಷಗಳ ಕಾಲ ಮಾರ್ಗ ಮಧ್ಯೆ ನಿಯಂತ್ರಣಕ್ಕೆ ಒಳಪಡಲಿದೆ. ಜೂ.14ರಿಂದ 30ರ ವರೆಗೆ ಮಾರ್ಗ ಮಧ್ಯೆ 55 ನಿಮಿಷಗಳ ಕಾಲ ಹಾಗೂ ಜುಲೈ 1ರಿಂದ 5ರವರೆಗೆ ಮಾರ್ಗ ಮಧ್ಯೆ 30 ನಿಮಿಷಗಳ ಕಾಲ ನಿಯಂತ್ರಣಕ್ಕೆ ಒಳಪಡಲಿದೆ.
ರೈಲು ಸಂಖ್ಯೆ 20690 ಶಿವಮೊಗ್ಗ-ಯಶವಂತಪುರ ಎಕ್ಸ್‌ಪ್ರೆಸ್ ರೈಲು ಜುಲೈ 7ರಿಂದ 11ರವರೆಗೆ 30 ನಿಮಿಷಗಳ ಕಾಲ ಮಾರ್ಗ ಮಧ್ಯೆ ನಿಯಂತ್ರಣಕ್ಕೆ ಒಳಪಡಲಿದೆ.
ರೈಲು ಮರುನಿಗದಿಪಡಿಕೆ:
ರೈಲು ಸಂಖ್ಯೆ 20690 ಶಿವಮೊಗ್ಗ -ಯಶವಂತಪುರ ಎಕ್ಸ್‌ಪ್ರೆಸ್ ರೈಲು ಜುಲೈ 1ರಿಂದ 5ರವರೆಗೆ ಶಿವಮೊಗ್ಗದಿಂದ 20 ನಿಮಿಷಗಳ ಕಾಲ ತಡವಾಗಿ ಹೊರಡಲಿದೆ ಎಂದು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಗಿರೀಶ ಧರ್ಮರಾಜ ಕಲಗೊಂಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.