ಮೈಸೂರಿನಲ್ಲಿ ಜೀರ್ಣಾಂಗ ಆರೋಗ್ಯ ಜಾಗೃತಿ ಅಭಿಯಾನ

ವಿಶ್ವ ಜೀರ್ಣಾಂಗ ಆರೋಗ್ಯ ದಿನಾಚರಣೆ ಅಂಗವಾಗಿ ನಗರದಲ್ಲಿ ಆಯೋಜಿಸಿದ್ದ ‘ಜೀರ್ಣಾಂಗ ಆರೋಗ್ಯ ಜಾಗೃತಿ ಅಭಿಯಾನ’ ಕಾರ್ಯಕ್ರಮದಲ್ಲಿ  ಡಾ.ಪಿ.ಸಿ.ಕುಮಾರಸ್ವಾಮಿ, ಡಾ.ಎಚ್.ಪಿ.ನಂದೀಶ್, ಡಾ.ಎ.ಕೆ.ಸತೀಶ್ ರಾವ್, ಬಿ.ಜೆ.ಸಂದೀಪ್‌ಪಟೇಲ್, ಪ್ರಮೋದ್ ಕುಂದರ್, ಡಾ.ರಾಮಕೃಷ್ಣ, ಡಾ.ಆರ್.ನಿಶ್ಚಯ್ ಇತರರಿದ್ದರು.
ವಿಶ್ವ ಜೀರ್ಣಾಂಗ ಆರೋಗ್ಯ ದಿನಾಚರಣೆ ಅಂಗವಾಗಿ ನಗರದಲ್ಲಿ ಆಯೋಜಿಸಿದ್ದ ‘ಜೀರ್ಣಾಂಗ ಆರೋಗ್ಯ ಜಾಗೃತಿ ಅಭಿಯಾನ’ ಕಾರ್ಯಕ್ರಮದಲ್ಲಿ ಡಾ.ಪಿ.ಸಿ.ಕುಮಾರಸ್ವಾಮಿ, ಡಾ.ಎಚ್.ಪಿ.ನಂದೀಶ್, ಡಾ.ಎ.ಕೆ.ಸತೀಶ್ ರಾವ್, ಬಿ.ಜೆ.ಸಂದೀಪ್‌ಪಟೇಲ್, ಪ್ರಮೋದ್ ಕುಂದರ್, ಡಾ.ರಾಮಕೃಷ್ಣ, ಡಾ.ಆರ್.ನಿಶ್ಚಯ್ ಇತರರಿದ್ದರು.
Published on
ಮೈಸೂರು:ವಿಶ್ವ ಜೀರ್ಣಾಂಗ ಆರೋಗ್ಯ ದಿನಾಚರಣೆ ಅಂಗವಾಗಿ ಭಾರತೀಯ ಗ್ಯಾಸ್ಟ್ರೋಎಂಟರಾಲಜಿ ಸಂಸ್ಥೆಯ (ಐಎಸ್‌ಜಿ), ನಗರದ ಮಣಿಪಾಲ್ ಹಾಸ್ಪಿಟಲ್ ಸಹಯೋಗದೊಂದಿಗೆ ‘ಜೀರ್ಣಾಂಗ ಆರೋಗ್ಯ ಜಾಗೃತಿ ಅಭಿಯಾನ’ ಆಯೋಜಿಸಲಾಗಿತ್ತು.
ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಆಯೋಜಿಸಿದ್ದ ಚಾಮುಂಡಿ ಹಿಲ್ಸ್ ಕ್ಲೈಂಬಥಾನ್ ಮತ್ತು ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ವೈದ್ಯರು, ಆರೋಗ್ಯ ವೃತ್ತಿಪರರು, ಫಿಟ್ನೆಸ್ ಆಸಕ್ತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿದ್ದರು.
ನಿಮ್ಮ ಜೀರ್ಣಾಂಗದ ಆರೋಗ್ಯಕ್ಕೆ ಒಂದು ಸಣ್ಣ ಯತ್ನ, ನಿಮ್ಮ ಉತ್ತಮ ಆರೋಗ್ಯದತ್ತ ಒಂದು ದೊಡ್ಡ ಹೆಜ್ಜೆ ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜೀರ್ಣಾಂಗ ಆರೋಗ್ಯದ ಮಹತ್ವ, ಆರೋಗ್ಯಕರ ಜೀವನಶೈಲಿ ಹಾಗೂ ಆರೋಗ್ಯದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಅರಿವು ಮೂಡಿಸಲಾಯಿತು.
ಚಾಮುಂಡಿ ಬೆಟ್ಟದ ಮೆಟ್ಟಿಲುಗಳ ಉದ್ದಕ್ಕೂ ವಿಶೇಷ ಸ್ವಚ್ಛತಾ ಅಭಿಯಾನ ನಡೆಸುವ ಮೂಲಕ ಸಾರ್ವಜನಿಕರಲ್ಲಿ ಪರಿಸರ ಸಂರಕ್ಷಣೆಯ ಸಂದೇಶ ನೀಡಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ (ಡಿಎಚ್‌ಒ) ಡಾ.ಪಿ.ಸಿ.ಕುಮಾರಸ್ವಾಮಿ ಮಾತನಾಡಿ, ಆರೋಗ್ಯಕರ ಜೀರ್ಣಾಂಗ ಮತ್ತು ಸ್ವಚ್ಛ ಪರಿಸರವೇ ನಮ್ಮ ಉತ್ತಮ ಆರೋಗ್ಯದ ಅಡಿಪಾಯ. ಚಾಮುಂಡಿ ಬೆಟ್ಟವನ್ನು ಹತ್ತುವ ಮತ್ತು ಸ್ವಚ್ಛಗೊಳಿಸುವ ಈ ವಿಶಿಷ್ಟ ’ಕ್ಲೈಂಬಥಾನ್’ ಮೂಲಕ ಸಾರ್ವಜನಿಕರಲ್ಲಿ ಆರೋಗ್ಯಕರ ಜೀವನಶೈಲಿ ಹಾಗೂ ಮುನ್ನೆಚ್ಚರಿಕೆಯ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಭಾರತೀಯ ಗ್ಯಾಸ್ಟ್ರೋಎಂಟರಾಲಜಿ ಸಂಸ್ಥೆಯ (ಐಖಎ) ಕರ್ನಾಟಕ ವಿಭಾಗದ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂದು ತಿಳಿಸಿದರು.
ಕರ್ನಾಟಕ ಗ್ಯಾಸ್ಟ್ರೋಎಂಟರಾಲಜಿ ಅಸೋಸಿಯೇಷನ್ ಕಾರ್ಯದರ್ಶಿಯಾದ ಮಣಿಪಾಲ್ ಆಸ್ಪತ್ರೆಯ ಸೀನಿಯರ್ ಕನ್ಸಲ್ಟೆಂಟ್ ಡಾ.ಎ.ಕೆ.ಸತೀಶ್ ರಾವ್ ಮಾತನಾಡಿ, ಮಾನವ ದೇಹದಲ್ಲಿ ಹೃದಯದಷ್ಟೇ ನಮ್ಮ ಜೀರ್ಣಾಂಗ ವ್ಯವಸ್ಥೆಯೂ ಸಹ ಅತ್ಯಂತ ಪ್ರಮುಖವಾದ್ದದ್ದು. ಈ ವರ್ಷದ ವಿಶ್ವ ಜೀರ್ಣಾಂಗ ಆರೋಗ್ಯ ದಿನದ ಅಂಗವಾಗಿ ’ದೀರ್ಘಕಾಲದ ಭೇದಿ: ರೋಗದ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ’ ಎಂಬ ಪರಿಕಲ್ಪನೆಯನ್ನು ನೀಡಲಾಗಿದ್ದು, ಸಾರ್ವಜನಿಕರು ಹೊಟ್ಟೆಗೆ ಸಂಬಂಧಿಸಿದ ಯಾವುದೇ ದೀರ್ಘಕಾಲದ ಲಕ್ಷಣಗಳನ್ನು ಸಾಮಾನ್ಯ ಎಂದು ಕಡೆಗಣಿಸದೆ ತಕ್ಷಣವೇ ವೈದ್ಯಕೀಯ ಸಲಹೆ ಪಡೆಯುವುದು ಅತ್ಯಗತ್ಯ ಎಂದು ಸಲಹೆ ನೀಡಿದರು.
ಮಣಿಪಾಲ್ ಆಸ್ಪತ್ರೆ ನಿರ್ದೇಶಕ ಬಿ.ಜೆ.ಸಂದೀಪ್‌ಪಟೇಲ್ ಮಾತನಾಡಿ, ಉತ್ತಮ ಜೀವನಶೈಲಿಯಿಂದ ಉತ್ತಮ ಆರೋಗ್ಯ ಆರಂಭವಾಗುತ್ತದೆ. ಈ ಕ್ಲೈಂಬಥಾನ್ ಮೂಲಕ ಕರುಳಿನ ಆರೋಗ್ಯದ ಮಹತ್ವದ ಬಗ್ಗೆ ಅರಿವು ಮೂಡಿಸಿ, ಜನರನ್ನು ಸಕ್ರಿಯ ಜೀವನಶೈಲಿಯತ್ತ ಪ್ರೇರೇಪಿಸುವುದು ನಮ್ಮ ಉದ್ದೇಶವಾಗಿದೆ ಎಂದರು.
ಕೆಎಂಸಿಎಸಿ ಹಾಗೂ ಮಣಿಪಾಲ್ ಆಸ್ಪತ್ರೆ, ಮೈಸೂರಿನ ಕ್ಲಸ್ಟರ್ ನಿರ್ದೇಶಕ ಪ್ರಮೋದ್ ಕುಂದರ್ ಮಾತನಾಡಿದರು. ಕರ್ನಾಟಕ ಗ್ಯಾಸ್ಟ್ರೋಎಂಟರಾಲಜಿ ಅಸೋಸಿಯೇಷನ್ ಅಧ್ಯಕ್ಷ ಡಾ.ಎಚ್.ಪಿ. ನಂದೀಶ್, ಮೈಸೂರು ಗ್ಯಾಸ್ಟ್ರೋ ಕ್ಲಬ್ ಸಂಚಾಲಕ ಡಾ.ರಾಮಕೃಷ್ಣ, ಮಣಿಪಾಲ್ ಆಸ್ಪತ್ರೆಯ ಡಾ.ಆರ್.ನಿಶ್ಚಯ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net