ಗ್ರಾಮೀಣರೊಂದಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉತ್ತಮ ನಂಟು

 ಹುಣಸೂರು ತಾಲೂಕು ರಾಮೇನಹಳ್ಳಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಚೇರಿಯಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಯೋಜನಾಧಿಕಾರಿ ಶುಭದೇವಿ ಮಾತನಾಡಿದರು. ರೇಖಾ, ತಾರಾನಾಥ ಇತರರು ಇದ್ದರು.
ಹುಣಸೂರು ತಾಲೂಕು ರಾಮೇನಹಳ್ಳಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಚೇರಿಯಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಯೋಜನಾಧಿಕಾರಿ ಶುಭದೇವಿ ಮಾತನಾಡಿದರು. ರೇಖಾ, ತಾರಾನಾಥ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • Dharmasthala Rural Development Project

ಹುಣಸೂರು:

ಗ್ರಾಮೀಣ ಜನರ ನಿತ್ಯ ಬದುಕಿನೊಂದಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆ ಅವಿನಾಭಾವ ಸಂಬಂಧ ಹೊಂದಿದೆ ಎಂದು ಚಿಕ್ಕಹುಣಸೂರು ಘಟಕ ಯೋಜನಾಧಿಕಾರಿ ಶುಭದೇವಿ ಅಭಿಪ್ರಾಯಪಟ್ಟರು.

ರಾಮೇನಹಳ್ಳಿ ಯೋಜನಾ ಕಚೇರಿಯಲ್ಲಿ ಸೋಮವಾರ ತಾಲೂಕಿನ ಬಿಳಿಕೆರೆ ಹೋಬಳಿ ಬೋಳನಹಳ್ಳಿ ವಲಯದ ಒಕ್ಕೂಟಗಳ ಪದಾಧಿಕಾರಿಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಹಳ್ಳಿ ಜನರ ಪ್ರತಿನಿತ್ಯ ಬದುಕಿನಲ್ಲಿ ಧರ್ಮಸ್ಥಳ ಯೋಜನೆ ಒಂದಿಂಲ್ಲೊಂದು ಕಾರ್ಯಕ್ರಮದಲ್ಲಿ ಸಹಾಯಕವಾಗಿ ನಿಲ್ಲುತ್ತಿದೆ. ಆರ್ಥಿಕ ಸಬಲೀಕರಣ, ಹೈನುಗಾರಿಕೆ, ಶಿಕ್ಷಣ ಮುಂತಾದ ಯಾವುದೇ ಯೋಜನೆಯಲ್ಲಾದರೂ ಹಳ್ಳಿಯ ಮಹಿಳೆಯರು, ಸಂಘ ಸಂಸ್ಥೆಗಳು ಪಾಲ್ಗೊಂಡಿರುತ್ತಾರೆ. ಸಾಮಾಜಿಕ ಕಾರ್ಯಗಳಾದ ಹಸಿರೀಕರಣ, ಕೆರೆಗಳ ಅಭಿವೃದ್ಧಿ, ದೇವಾಲಯಗಳ ಜೀರ್ಣೋದ್ಧಾರ, ವೃದ್ಧರಿಗೆ ಆಶ್ರಯ ಮುಂತಾದ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳು ಜನರಲ್ಲಿ ಉತ್ತಮ ಅಭಿಪ್ರಾಯ ಮೂಡಿಸಿವೆ. ತರಬೇತಿ ಕಾರ್ಯಗಾರದಲ್ಲಿ ತಿಳಿಸುವ ವಿಷಯಗಳ ಕುರಿತು ಪದಾಧಿಕಾರಿಗಳು ಅರ್ಥ ಮಾಡಿಕೊಂಡು ನಿಯಮಪಾಲನೆ, ಜವಾಬ್ದಾರಿಗಳ ನಿರ್ವಹಣೆ ಜನಸೇವೆಗೆ ಮುಂದಾಗಬೇಕೆಂದು ತಿಳಿಸಿದರು.
ಬನ್ನಿಕುಪ್ಪೆ ವಲಯದ ಮೇಲ್ವಿಚಾರಕರಾದ ರೇಖಾ ಮಾತನಾಡಿ, ನಾಯಕತ್ವ, ಒಕ್ಕೂಟ ಸಭೆಯ ಮಹತ್ವ, ಒಕ್ಕೂಟ ಪದಾಧಿಕಾರಿಗಳ ಜವಾಬ್ದಾರಿ, ಒಕ್ಕೂಟ ಸಭೆ ನಡೆಸುವ ವಿಧಾನದ ಬಗ್ಗೆ ಮಾಹಿತಿ ನೀಡಿದರು.
ತಾಲೂಕು ನೋಡಲ್ ಅಧಿಕಾರಿ ತಾರಾನಾಥ ಮಾತನಾಡಿದರು. ಕಳೆದ ವರ್ಷ ಒಲಂಪಿಯಾಡ್ ಪರೀಕ್ಷೆಯಲ್ಲಿ ಹಾಜರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ಒಕ್ಕೂಟ ಅಧ್ಯಕ್ಷರ ಸಮ್ಮುಖದಲ್ಲಿ ವಿತರಣೆ ಮಾಡಲಾಯಿತು. ಬೋಳನಹಳ್ಳಿ ಮೇಲ್ವಿಚಾರಕ ತೀರ್ಥರಾಮ ಸಂಘಗಳ ಗ್ರೇಡಿಂಗ್ ಮತ್ತು ಬಡ್ಡಿ ದರದ ಬಗ್ಗೆ ಮಾಹಿತಿ ನೀಡಿದರು. ವಲಯ ವ್ಯಾಪ್ತಿಯ ಎಲ್ಲ ಒಕ್ಕೂಟಗಳ ಅಧ್ಯಕ್ಷರು, ಪದಾಧಿಕಾರಿಗಳು, ದಾಖಲಾತಿ ಸಮಿತಿ ಪದಾಧಿಕಾರಿಗಳು, ಸೇವಾ ಪ್ರತಿನಿಧಿಗಳು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net