ಆಕಾಶ್ ಸಂಸ್ಥೆ ಮೈಸೂರು ಶಾಖೆಯ ಧನ್ಯಾ ಮಿತ್ತಲ್ ಮೈಸೂರು ನಗರಕ್ಕೆ ಟಾಪರ್

ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್-ಯುಜಿ) ಫಲಿತಾಂಶದಲ್ಲಿ ಉತ್ತಮ ರ‌್ಯಾಂಕ್ ಪಡೆದಿರುವ ಆಕಾಶ್ ಸಂಸ್ಥೆಯ ಮೈಸೂರು ಶಾಖೆಯ ವಿದ್ಯಾರ್ಥಿಗಳನ್ನು ಶನಿವಾರ ಅಭಿನಂದಿಸಲಾಯಿತು. ಡಾ.ವಿಕ್ರಮ್ ಚಕ್ರವರ್ತಿ, ಡಾ.ಶ್ರೀನಿವಾಸ ರೆಡ್ಡಿ, ಸಂಜೀವ್ ಕುಮಾರ್ ಝಾ, ಕೆ.ಹರಿಕೃಷ್ಣ, ಶ್ರಾವಣಿ, ಮುಬಾರಕ್ ಪಾಷಾ, ಡಿ.ಸುರಜ್ ಇದ್ದರು.
ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್-ಯುಜಿ) ಫಲಿತಾಂಶದಲ್ಲಿ ಉತ್ತಮ ರ‌್ಯಾಂಕ್ ಪಡೆದಿರುವ ಆಕಾಶ್ ಸಂಸ್ಥೆಯ ಮೈಸೂರು ಶಾಖೆಯ ವಿದ್ಯಾರ್ಥಿಗಳನ್ನು ಶನಿವಾರ ಅಭಿನಂದಿಸಲಾಯಿತು. ಡಾ.ವಿಕ್ರಮ್ ಚಕ್ರವರ್ತಿ, ಡಾ.ಶ್ರೀನಿವಾಸ ರೆಡ್ಡಿ, ಸಂಜೀವ್ ಕುಮಾರ್ ಝಾ, ಕೆ.ಹರಿಕೃಷ್ಣ, ಶ್ರಾವಣಿ, ಮುಬಾರಕ್ ಪಾಷಾ, ಡಿ.ಸುರಜ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರಾಷ್ಟ್ರಮಟ್ಟದಲ್ಲೂ ಆಕಾಶ್ ಸಂಸ್ಥೆಯ ವಿದ್ಯಾರ್ಥಿಗಳು ಅಭೂತಪೂರ್ವ ಯಶಸ್ಸು ದಾಖಲಿಸಿದ್ದಾರೆ
  • ಉತ್ತಮ ರ್ಯಾಂಕ್ ಪಡೆದಿರುವ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಮೈಸೂರು: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್-ಯುಜಿ) ಫಲಿತಾಂಶದಲ್ಲಿ ಆಕಾಶ್ ಸಂಸ್ಥೆಯ ಮೈಸೂರು ಶಾಖೆಯ ಧನ್ಯಾ ಮಿತ್ತಲ್ ಆಲ್ ಇಂಡಿಯಾ ರ‌್ಯಾಂಕ್ 4,416 ಗಳಿಸುವ ಮೂಲಕ ಮೈಸೂರು ನಗರಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ ಎಂದು ಸಂಸ್ಥೆಯ ಹಿರಿಯ ಅಕಾಡೆಮಿಕ್ ನಿರ್ದೇಶಕ ಡಾ.ವಿಕ್ರಮ್ ಚಕ್ರವರ್ತಿ ತಿಳಿಸಿದರು.
ಧನ್ಯಾ ಅವರ ಸಾಧನೆಗೆ ಸಂಸ್ಥೆ ಹಾರ್ದಿಕ ಅಭಿನಂದನೆ ಸಲ್ಲಿಸಿದೆ. ಧನ್ಯಾ ಅವರ ನಿರಂತರ ಪರಿಶ್ರಮ, ಶಿಸ್ತುಬದ್ಧ ಅಧ್ಯಯನ ಕ್ರಮ, ಅನುಭವಿ ಬೋಧಕರ ಸೂಕ್ತ ಮಾರ್ಗದರ್ಶನ ಹಾಗೂ ಸಂಸ್ಥೆಯ ವೈಜ್ಞಾನಿಕ ತರಬೇತಿಯೇ ಈ ಯಶಸ್ಸಿನ ಹಿಂದಿನ ಪ್ರಮುಖ ಚಾಲನಾ ಶಕ್ತಿ ಎಂದು ಕುವೆಂಪುನಗರದ ಆಕಾಶ್ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪರಿಣಿತ ಬೋಧಕ ವೃಂದ, ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಕಾರ್ಯಕ್ಷಮತೆ ವಿಶ್ಲೇಷಣೆ ಹಾಗೂ ವೈಯಕ್ತಿಕ ಮಾರ್ಗದರ್ಶನದಂತಹ ಅತ್ಯಾಧುನಿಕ ತರಬೇತಿ ವ್ಯವಸ್ಥೆಯಿಂದಾಗಿ ದೇಶಾದ್ಯಂತ ಸಾವಿರಾರು ವಿದ್ಯಾರ್ಥಿಗಳು ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಯಶಸ್ಸು ಕಾಣುತ್ತಿದ್ದಾರೆ ಎಂದು ತಿಳಿಸಿದರು.
ರಾಷ್ಟ್ರಮಟ್ಟದಲ್ಲೂ ಆಕಾಶ್ ಸಂಸ್ಥೆಯ ವಿದ್ಯಾರ್ಥಿಗಳು ಅಭೂತಪೂರ್ವ ಯಶಸ್ಸು ದಾಖಲಿಸಿದ್ದಾರೆ. ಈ ಬಾರಿಯ ನೀಟ್ ಫಲಿತಾಂಶದಲ್ಲಿ ಟಾಪ್-10ರಲ್ಲಿ ನಾಲ್ವರು, ಟಾಪ್-50ರಲ್ಲಿ 18 ಮಂದಿ ಹಾಗೂ ಟಾಪ್-100ರಲ್ಲಿ 41 ಅಭ್ಯರ್ಥಿಗಳು ಆಕಾಶ್ ಸಂಸ್ಥೆಯಿಂದ ಸ್ಥಾನ ಪಡೆದಿದ್ದಾರೆ. ಇನ್ನು ಕರ್ನಾಟಕ ಮಟ್ಟದಲ್ಲಿ ಜೋಹಾನ್ ಜಾಬ್, ಕೆವಿನ್, ಸಿಧಾಂತ್ ವಿನಯ್ ಹಾಗೂ ಅಭಿರಾಮ್ ಅತ್ಯುತ್ತಮ ರ‌್ಯಾಂಕ್ ಗಳಿಸಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ ಎಂದರು.
ಧನ್ಯಾ ಮಿತ್ತಲ್ ಮಾತನಾಡಿ, ಮೈಸೂರು ನಗರಕ್ಕೆ ಮೊದಲ ಸ್ಥಾನ ಪಡೆದಿರುವುದು ನನ್ನ ಜೀವನದ ಅತ್ಯಂತ ಸಂತಸದ ಕ್ಷಣ. ನನ್ನ ಹೆತ್ತವರ ಸದಾಕಾಲದ ಬೆಂಬಲ ಹಾಗೂ ಆಕಾಶ್ ಸಂಸ್ಥೆಯ ಶಿಕ್ಷಕ ವೃಂದದ ನಿರಂತರ ಮಾರ್ಗದರ್ಶನದಿಂದಾಗಿ ಈ ಮೈಲಿಗಲ್ಲು ತಲುಪಲು ಸಾಧ್ಯವಾಯಿತು. ಸಂಸ್ಥೆಯು ನಿಯಮಿತವಾಗಿ ನಡೆಸುತ್ತಿದ್ದ ಮಾಕ್ ಪರೀಕ್ಷೆಗಳು, ಕಾರ್ಯಕ್ಷಮತೆ ವಿಶ್ಲೇಷಣೆ, ಸಂದೇಹ ನಿವಾರಣಾ ತರಗತಿಗಳು ಹಾಗೂ ಶಿಸ್ತುಬದ್ಧ ಬೋಧನಾ ವಿಧಾನವು ಕಠಿಣ ಪರಿಕಲ್ಪನೆಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ನೆರವಾದವು. ಭವಿಷ್ಯದಲ್ಲಿ ಅತ್ಯುತ್ತಮ ವೈದ್ಯೆಯಾಗಬೇಕೆಂಬ ನನ್ನ ಗುರಿಗೆ ಈ ಫಲಿತಾಂಶ ಮತ್ತಷ್ಟು ಆತ್ಮವಿಶ್ವಾಸ ತುಂಬಿದೆ, ಎಂದು ಹೆಮ್ಮೆಯಿಂದ ನುಡಿದರು.

ಎಲ್ಲ ಸಾಧಕರಿಗೆ ಅಭಿನಂದನೆ:

ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ರ‌್ಯಾಂಕ್ ಪಡೆದಿರುವ ಆಕಾಶ್ ಸಂಸ್ಥೆಯ ಮೈಸೂರು ಶಾಖೆಯ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಧನ್ಯಾ ಮಿತ್ತಲ್ ಸಮೃದ್ಧಿ ಸುಪ್ರೀಮ್ (8,088 ಆಲ್ ಇಂಡಿಯಾ ರ‌್ಯಾಂಕ್), ಎನ್.ಮೊಹಮ್ಮದ್ ಮುಸದ್ದಿಕ್ (10,421), ಜೆ.ಕುಶಾಲ(10,630), ಎಸ್.ಸಮರ್ಥ್(11,368) ಸೇರಿ ಇತರರನ್ನು ಅಭಿನಂದಿಸಲಾಯಿತು. ಸಂಸ್ಥೆಯ ಎಎಚ್‌ಎಂಗಳಾದ ಡಾ.ಶ್ರೀನಿವಾಸ ರೆಡ್ಡಿ, ಸಂಜೀವ್ ಕುಮಾರ್ ಝಾ, ಎಎಚ್‌ಇ ಕೆ.ಹರಿಕೃಷ್ಣ, ಎಎಚ್‌ಎಫ್ ಶ್ರಾವಣಿ, ಭುವನೇಶ್ವರಿ ನಗರ ಶಾಖೆಯ ಮುಖ್ಯಸ್ಥ ಮುಬಾರಕ್ ಪಾಷಾ, ಡಿ.ಸುರಜ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net