ಮಾಜಿ ಪ್ರಧಾನಿ ದೇವೇಗೌಡ ಜನ್ಮದಿನಾಚರಣೆ

ಬನ್ನೂರಿನ ಸಂತೇಮಾಳದ ಜೆಡಿಎಸ್ ಕಾರ್ಯಕರ್ತರಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹುಟ್ಟುಹಬ್ಬ ಆಚರಿಸಲಾಯಿತು. ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ವೈ.ಎಸ್.ರಾಮಸ್ವಾಮಿ, ಜಯರಾಮೇಗೌಡ ಇತರರು ಇದ್ದರು.
ಬನ್ನೂರಿನ ಸಂತೇಮಾಳದ ಜೆಡಿಎಸ್ ಕಾರ್ಯಕರ್ತರಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹುಟ್ಟುಹಬ್ಬ ಆಚರಿಸಲಾಯಿತು. ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ವೈ.ಎಸ್.ರಾಮಸ್ವಾಮಿ, ಜಯರಾಮೇಗೌಡ ಇತರರು ಇದ್ದರು.
Published on
ಬನ್ನೂರು: ಪಟ್ಟಣದ ಸಂತೇಮಾಳದ ಜೆಡಿಎಸ್ ಕಾರ್ಯಕರ್ತರಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ 94ನೇ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು.
ಸಂತೇಮಾಳದ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಟಾಕಿ ಸಿಡಿಸಿ, ದೇವೇಗೌಡರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಸಂಭ್ರಮಿಸಿದರು.
ಕುಂತನಹಳ್ಳಿ ಎಲ್‌ಐಸಿ ದೇವರಾಜು ಮಾತನಾಡಿ, ದೇವೇಗೌಡರು ದೇಶ ಕಂಡ ಅಪರೂಪದ ರಾಜಕಾರಣಿ, ಹಳ್ಳಿಯ ಸೊಗಡನ್ನು ದಿಲ್ಲಿಯವರೆಗೆ ಕೊಂಡೊಯ್ದ ಮಹಾನ್ ನಾಯಕ ಎಂದು ತಿಳಿಸಿದರು.
ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ವೈ.ಎಸ್.ರಾಮಸ್ವಾಮಿ, ಕುಂತನಹಳ್ಳಿ ಚಲುವರಾಜು, ಮೇಗಳಕೊಪ್ಪಲು ಜಯರಾಮೇಗೌಡ ಮಾತನಾಡಿದರು. ನಂತರ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.
ಬೀಡನಹಳ್ಳಿ ದೇವರಾಜು, ಕೋಳಿ ಅಂಗಡಿ ದೇವರಾಜು, ಬಸವನಹಳ್ಳಿ ಸಿ.ರಾಜು, ಬನ್ನೂರು ಚಂದ್ರು, ಶ್ರೀನಿವಾಸಮೂರ್ತಿ, ಅತ್ತಳ್ಳಿ ಸತೀಶ್, ಚಿಕ್ಕೀರೇಗೌಡ, ಮೈಸೂರು ರವಿಕುಮಾರ್, ಬಾಣಗವಾಡಿ ನಾರಾಯಣಸ್ವಾಮಿ, ಮಹದೇವು, ಚಾಮನಹಳ್ಳಿ ರಂಗಸ್ವಾಮಿ, ಚನ್ನೇಗೌಡ, ತುರಗನೂರು ರವಿಕುಮಾರ್, ಹೊಂಬೇಗೌಡ, ಶಬರೀಶ್, ಬಸವನಹಳ್ಳಿ ವೆಂಕಟೇಶ್, ಕೊಡಗಳ್ಳಿ ಶಿವಕುಮಾರ್, ತುರಗನೂರು ಮಾದೇಗೌಡ, ಹೊಂಬೇಗೌಡ, ಸಿ.ಲಿಂಗಣ್ಣ, ಅರುಣ್‌ಕುಮಾರ್ ಸೇರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net