ಡಿಜಿಟಲ್ ಅರೆಸ್ಟ್ ಪ್ರಕರಣಗಳ ತನಿಖೆ ನಡೆಸಲು ಆಗ್ರಹ

ಡಿಜಿಟಲ್ ಅರೆಸ್ಟ್ ಪ್ರಕರಣ
ಡಿಜಿಟಲ್ ಅರೆಸ್ಟ್ ಪ್ರಕರಣ
Published on

ಪ್ರಮುಖ ಮುಖ್ಯಾಂಶಗಳು

  • ನಗರ ಪೊಲೀಸ್ ಇಲಾಖೆಯಲ್ಲಿ ಡಿಜಿಟಲ್ ಅರೆಸ್ಟ್ ಎಂಬ ವ್ಯವಸ್ಥೆ ಇಲ್ಲ, ಹೀಗಾಗಿ, ಅಮಾಯಕರು ಬಲಿಯಾಗಬಾರದು
  • ಆಮಿಷವೊಡ್ಡಿ ಅಮಾಯಕ ಯುವಕರ ಬಳಕೆ
  • ನಗರದ ಅಮಾಯಕ ಯುವಕರನ್ನು ಸೈಬರ್ ವಂಚನೆಗೆ ಪ್ರತ್ಯೇಕವಾಗಿ ಬಳಕೆ
ಮೈಸೂರು: ನಗರದಲ್ಲಿ ನಡೆದಿರುವ ಡಿಜಿಟಲ್ ಅರೆಸ್ಟ್ ಪ್ರಕರಣಗಳ ಕುರಿತು ಸಮಗ್ರ ತನಿಖೆಯನ್ನು ಪೊಲೀಸರು ನಡೆಸಬೇಕು ಎಂದು  ಎಸ್‌ಡಿಪಿಐ ಅಧ್ಯಕ್ಷ ಅಬ್ದುಲ್ ಮಜೀದ್ ಒತ್ತಾಯಿಸಿದರು.
ಡಿಜಿಟಲ್ ಅರೆಸ್ಟ್ ಎಂಬುದು ಭಾರತೀಯ ಪೊಲೀಸ್ ವ್ಯವಸ್ಥೆಯಲ್ಲೇ ಇಲ್ಲ. ಆದರೆ, ಇದರ ಹೆಸರಿನಲ್ಲಿ ವಂಚಿಸುವವರು ಸಂಖ್ಯೆ ಅಧಿಕವಾಗಿದೆ. ಆಮಿಷವೊಡ್ಡಿ ಅಮಾಯಕ ಯುವಕರನ್ನು ಹಲವರು ಬಳಸಿಕೊಳ್ಳುತ್ತಿದ್ದಾರೆ. ಹೀಗಾಗಿ ಎಲ್ಲ ಆಯಾಮಗಳಿಂದ ನಗರ ಪೊಲೀಸರು ತನಿಖೆ ನಡೆಸಿ ಅಮಾಯಕರನ್ನು ರಕ್ಷಿಸಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಪೂನಾ, ಚೆನ್ನೈನ ಪ್ರಕರಣ ಸೇರಿದಂತೆ ಮೂರು ಸೈಬರ್ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ನಗರದ 9 ಯುವಕರನ್ನು ಬಂಧಿಸಲಾಗಿದೆ. ಇವರ‌್ಯಾರೂ ನೇರವಾಗಿ ಡಿಜಿಟಲ್ ಅರೆಸ್ಟ್ ಪ್ರಕರಣದಲ್ಲಿ ಭಾಗಿಯಾಗಿಲ್ಲ.
 ಯಾರದೋ ಆಮಿಷಕ್ಕೆ ಒಳಗಾಗಿ ಹತ್ತು ಸಾವಿರ ರೂ. ಬರುತ್ತದೆ ಎಂದು ತಮ್ಮ ಬ್ಯಾಂಕ್ ಅಕೌಂಟ್ ಮೂಲಕ ವಂಚಕರಿಗೆ ಹಣ ವಿತ್ ಡ್ರಾ ಮಾಡಿಕೊಟ್ಟವರಾಗಿದ್ದಾರೆ. ಈ ರೀತಿಯಾಗಿ ನಗರದ ಅಮಾಯಕ ಯುವಕರನ್ನು ಸೈಬರ್ ವಂಚನೆಗೆ ಪ್ರತ್ಯೇಕವಾಗಿ ಬಳಸಿಕೊಳ್ಳಲಾಗುತ್ತಿದೆ. 
ಹೀಗಾಗಿ ಈ ರೀತಿಯ ಅಮಾಯಕ ಯುವಕರಿಗೆ ಆಮಿಷವೊಡ್ಡುತ್ತಿರುವವರು ಯಾರು? ಎಂಬುದನ್ನು ನಗರ ಪೊಲೀಸರು ಪತ್ತೆ ಹಚ್ಚಬೇಕೆಂದು ಆಗ್ರಹಿಸಿದರು.
ನಗರ ಪೊಲೀಸ್ ಇಲಾಖೆಯಲ್ಲಿ ಡಿಜಿಟಲ್ ಅರೆಸ್ಟ್ ಎಂಬ ವ್ಯವಸ್ಥೆ ಇಲ್ಲ, ಹೀಗಾಗಿ, ಅಮಾಯಕರು ಬಲಿಯಾಗಬಾರದು ಎಂದು ಎಲ್ಲೆಡೆ ಜಾಗೃತಿ ಮೂಡಿಸಬೇಕೆಂದು ಕೋರಿದರು. ಪಕ್ಷದ ಮುಖಂಡರಾದ ದೇವನೂರು ಪುಟ್ಟನಂಜಯ್ಯ, ರಫತ್‌ಖಾನ್, ಎಸ್. ಸ್ವಾಮಿ, ಅಮ್ಜದ್ ಖಾನ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net