ಸಾರಿಗೆ ಬಸ್‌ಗಳ ನಿಲುಗಡೆಗೆ ಒತ್ತಾಯ

ಹೈರಿಗೆ ಮತ್ತು ಮಟಕೆರೆ ಗೇಟ್ ಬಳಿ ಬಸ್ ನಿಲುಗಡೆಗೆ ಒತ್ತಾಯಿಸಿ ವಿದ್ಯಾರ್ಥಿಗಳು, ದಸಂಸ ಅಂಬೇಡ್ಕರ್ ವಾದ ಸಂಘಟನೆ ಮುಖಂಡರು ಘಟಕದ ವ್ಯವಸ್ಥಾಪಕ ತ್ಯಾಗರಾಜು ಅವರಿಗೆ ಮನವಿ ಪತ್ರ ಸಲ್ಲಿಸಿದರು. ಅನಿಲ್ ಸಿಂಗ್, ಎಚ್.ಡಿ.ಕುಮಾರ್, ಮಹೇಶ್, ತನುಷ್, ಮದನ, ಪ್ರಜ್ವಲ್ ಇತರರಿದ್ದರು.
ಹೈರಿಗೆ ಮತ್ತು ಮಟಕೆರೆ ಗೇಟ್ ಬಳಿ ಬಸ್ ನಿಲುಗಡೆಗೆ ಒತ್ತಾಯಿಸಿ ವಿದ್ಯಾರ್ಥಿಗಳು, ದಸಂಸ ಅಂಬೇಡ್ಕರ್ ವಾದ ಸಂಘಟನೆ ಮುಖಂಡರು ಘಟಕದ ವ್ಯವಸ್ಥಾಪಕ ತ್ಯಾಗರಾಜು ಅವರಿಗೆ ಮನವಿ ಪತ್ರ ಸಲ್ಲಿಸಿದರು. ಅನಿಲ್ ಸಿಂಗ್, ಎಚ್.ಡಿ.ಕುಮಾರ್, ಮಹೇಶ್, ತನುಷ್, ಮದನ, ಪ್ರಜ್ವಲ್ ಇತರರಿದ್ದರು.
Published on

ಎಚ್.ಡಿ.ಕೋಟೆ:

ಮೈಸೂರಿಗೆ ತೆರಳುವ ಸಾರಿಗೆ ಸಂಸ್ಥೆ ಬಸ್‌ಗಳು ಗ್ರಾಮದಲ್ಲಿ ನಿಲ್ಲಿಸುತ್ತಿಲ್ಲ. ಇದರಿಂದ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಎಂದು ಆರೋಪಿಸಿ ತಾಲೂಕಿನ ಹೈರಿಗೆ ಗ್ರಾಮದಲ್ಲಿ ಸೋಮವಾರ ದಸಂಸ ಅಂಬೇಡ್ಕರ್ ವಾದ ಸಂಘಟನೆಯ ಮುಖಂಡರು, ವಿದ್ಯಾರ್ಥಿಗಳು ಮೈಸೂರು-ಮಾನಂದವಾಡಿ ಮುಖ್ಯ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.

ಹೈರಿಗೆ ಗ್ರಾಮದ ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳೊಂದಿಗೆ ಮುಖ್ಯ ರಸ್ತೆಯಲ್ಲಿ ಕುಳಿತ ಮುಖಂಡರು ಎಚ್.ಡಿ.ಕೋಟೆ ಪಟ್ಟಣದಿಂದ ಪ್ರತಿನಿತ್ಯ ಮೈಸೂರಿಗೆ ತೆರಳುವ ಸಾರಿಗೆ ಸಂಸ್ಥೆ ಬಸ್‌ಗಳು ಬೆಳಗಿನ ಸಮಯದಲ್ಲಿ ಹೈರಿಗೆ ಮತ್ತು ಎಚ್.ಮಟಕೆರೆ ಗ್ರಾಮದಲ್ಲಿ ನಿಲ್ಲಿಸುತ್ತಿಲ್ಲ. ಅಲ್ಲದೆ, 7 ರಿಂದ 10 ಗಂಟೆ ಅವಧಿಯಲ್ಲಿ ಸಂಚರಿಸುವ ತಡೆರಹಿತ ಸೇರಿದಂತೆ ಯಾವುದೇ ಬಸ್‌ಗಳನ್ನು ನಿಲುಗಡೆ ಮಾಡುವುದಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಕಾಲೇಜಿಗೆ ತೆರಳಲು ತೊಂದರೆಯಾಗುತ್ತಿದೆ ಎಂದು ದೂರಿದರು.
ಒಂದು ತಿಂಗಳಿಂದ ಹೈರಿಗೆ ಮತ್ತು ಮಟಕೆರೆ ಗ್ರಾಮದ ಗೇಟ್‌ನಲ್ಲಿ ಮೈಸೂರಿಗೆ ಸಂಚರಿಸುವ ಸಾರಿಗೆ ಬಸ್‌ಗಳನ್ನು ನಿಲ್ಲಿಸದಿರುವುದು ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಎಷ್ಟೋ ಬಾರಿ ಬಸ್‌ಗಳನ್ನು ತಡವಾಗಿ ನಿಲ್ಲಿಸುವುದರಿಂದ ಕಾಲೇಜಿಗೆ ತೆರಳಲು ಸಾಧ್ಯವಾಗದೆ ಮನೆಯಲ್ಲೇ ಉಳಿಯುವಂತಾಗಿದೆ. ಈ ಬಗ್ಗೆ ಹಲವಾರು ಬಾರಿ ಎಚ್.ಡಿ.ಕೋಟೆ ಬಸ್ ಘಟಕ ವ್ಯವಸ್ಥಾಪಕರಿಗೆ ಮೌಖಿಕವಾಗಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.
ನಂತರ ವಿದ್ಯಾರ್ಥಿಗಳು, ಮುಖಂಡರು ಎಚ್.ಡಿ.ಕೋಟೆ ಬಸ್ ಘಟಕಕ್ಕೆ ಭೇಟಿ ನೀಡಿ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿ ಸಮಸ್ಯೆಗೆ ಸ್ಪಂದಿಸುವಂತೆ ಒತ್ತಾಯಿಸಿದರು.
ಘಟಕದ ವ್ಯವಸ್ಥಾಪಕ ತ್ಯಾಗರಾಜು ಮಾತನಾಡಿ, ಮಂಗಳವಾರದಿಂದ ಹೈರಿಗೆ ಮತ್ತು ಮಟಕೆರೆ ಗೇಟ್‌ನಲ್ಲಿ ಬಸ್ ನಿಲುಗಡೆಗೆ ಅವಕಾಶ ಮಾಡಿಕೊಡಲಾಗುತ್ತದೆ. ನಿಲ್ಲಿಸದೆ ಹೋಗುವ ಬಸ್ ಸಂಖ್ಯೆಯನ್ನು ನನಗೆ ನೀಡಿದರೆ ಅಂತಹ ಚಾಲಕನ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ವಿದ್ಯಾರ್ಥಿ ಮುಖಂಡ ಅನಿಲ್ ಸಿಂಗ್, ದಸಂಸ ಅಂಬೇಡ್ಕರ್ ವಾದ ಸಂಘಟನೆಯ ಮುಖಂಡರಾದ ಎಚ್.ಡಿ.ಕುಮಾರ್, ಮಹೇಶ್, ವಿದ್ಯಾರ್ಥಿಗಳಾದ ತನುಷ್, ಮದನ, ಪ್ರಜ್ವಲ್, ನಿತಿನ್, ಮನು, ಮನೋಜ್, ಜೀವನ್, ಮದನ್ ಸಿಂಗ್, ನಿಖಿಲ್, ಮಾದೇಶ್, ಶಿವು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net