ಚ.ಬೆಟ್ಟದ ಪರಿಸರ ರಕ್ಷಣೆಗೆ ಆಗ್ರಹ

ಪರಿಸರ ಪ್ರೇಮಿಗಳು  ಭಾನುವಾರ ಚಾಮುಂಡಿಬೆಟ್ಟದಲ್ಲಿ ಆಯೋಜಿಸಿದ್ದ ನಡಿಗೆಯಲ್ಲಿ ಪಾಲ್ಗೊಂಡು ‘ಚಾಮುಂಡಿ ಬೆಟ್ಟವನ್ನು ಉಳಿಸುವಂತೆ ಒಕ್ಕೊರಲಿನಿಂದ ಆಗ್ರಹಿಸಿದರು. ಶ್ರೀ ಶಿವಕುವಾರ ಸ್ವಾಮೀಜಿ, ಶ್ರೀ ನಿಜಲಿಂಗೇಶ್ವರ ಸ್ವಾಮೀಜಿ,  ಶ್ರೀ ಬಸವರಾಜೇಂದ್ರ ಸ್ವಾಮೀಜಿ, ಶ್ರೀ ಮಲ್ಲೇಶ ಸ್ವಾಮೀಜಿ, ಎ.ಟಿ.ರಾಮಸ್ವಾಮಿ ಇತರರು ಇದ್ದರು.
ಪರಿಸರ ಪ್ರೇಮಿಗಳು ಭಾನುವಾರ ಚಾಮುಂಡಿಬೆಟ್ಟದಲ್ಲಿ ಆಯೋಜಿಸಿದ್ದ ನಡಿಗೆಯಲ್ಲಿ ಪಾಲ್ಗೊಂಡು ‘ಚಾಮುಂಡಿ ಬೆಟ್ಟವನ್ನು ಉಳಿಸುವಂತೆ ಒಕ್ಕೊರಲಿನಿಂದ ಆಗ್ರಹಿಸಿದರು. ಶ್ರೀ ಶಿವಕುವಾರ ಸ್ವಾಮೀಜಿ, ಶ್ರೀ ನಿಜಲಿಂಗೇಶ್ವರ ಸ್ವಾಮೀಜಿ, ಶ್ರೀ ಬಸವರಾಜೇಂದ್ರ ಸ್ವಾಮೀಜಿ, ಶ್ರೀ ಮಲ್ಲೇಶ ಸ್ವಾಮೀಜಿ, ಎ.ಟಿ.ರಾಮಸ್ವಾಮಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಚಾಮುಂಡೇಶ್ವರಿ ಅರ್ಚಕರು, ಭಕ್ತರ ಘೋಷಣೆ
  • ಜಾಗೃತಿ ನಡಿಗೆಗೆ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಚಾಲನೆ
ಮೈಸೂರು: ನಾಡದೇವತೆ, ಬೆಟ್ಟದ ತಾಯಿ ಚಾಮುಂಡೇಶ್ವರಿ ದೇವಸ್ಥಾನ ಇರುವ ಚಾಮುಂಡಿ ಬೆಟ್ಟದಲ್ಲಿ ಭಾನುವಾರ ಅರ್ಚಕರ ಮಂತ್ರ, ಭಕ್ತರ ಪ್ರಾರ್ಥನೆ ಜತೆಗೆ ‘ಚಾಮುಂಡಿಬೆಟ್ಟವನ್ನು ಉಳಿಸಿ’ ಎಂಬ ಘೋಷಣೆಗಳು ಕೇಳಿ ಬಂದವು.
ಅಭಿವೃದ್ಧಿ ಹೆಸರಿನಲ್ಲಿ ಚಾಮುಂಡಿಬೆಟ್ಟವನ್ನು ಕಾಂಕ್ರಿಟೀಕರಣ ಮಾಡದಂತೆ ಹಾಗೂ ಬೆಟ್ಟದ ನೈಸರ್ಗಿಕ ಪರಿಸರ ಕಾಪಾಡುವಂತೆ ಆಗ್ರಹಿಸಿ ಭಾನುವಾರ ಪರಿಸರ ಪ್ರೇಮಿಗಳು ಚಾಮುಂಡಿಬೆಟ್ಟದ ನಡಿಗೆಯಲ್ಲಿ ಪಾಲ್ಗೊಂಡು ಚಾಮುಂಡಿ ಬೆಟ್ಟವನ್ನು ಉಳಿಸುವಂತೆ ಒಕ್ಕೊರಲಿನಿಂದ ಆಗ್ರಹಿಸಿದರು.

ಜನ ಜಾಗೃತಿಗಾಗಿ ನಡಿಗೆ

ಪರಿಸರ ಬಳಗ ಮತ್ತು ಪರಿಸರಕ್ಕಾಗಿ ನಾವು ಸಂಘಟನೆ ನೀಡಿದ್ದ ಚಾಮುಂಡಿಬೆಟ್ಟದ ನಡಿಗೆಯಲ್ಲಿ ಪರಿಸರವಾದಿಗಳು, ಪರಿಸರ ಪ್ರೇಮಿಗಳು, ಕಳಕಳಿಯುಳ್ಳ ನಾಗರಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ವಿವಿಧ ಮಠಾಧೀಶರು, ವಿವಿಧ ಪಕ್ಷಗಳ ಮುಖಂಡರು ಹಾಗೂ ಚಾಮುಂಡಿಬೆಟ್ಟದ ವಾಹುವಿಹಾರಿಗಳು ಪಾಲ್ಗೊಂಡು ಬೆಟ್ಟದ ಪಾದದಿಂದ ಮೆಟ್ಟಿಲು ಮೂಲಕ ಬೆಟ್ಟ ಹತ್ತಿ ಜನರಲ್ಲಿ ಚಾಮುಂಡಿಬೆಟ್ಟದ ರಕ್ಷಣೆಗಾಗಿ ಜನರದಲ್ಲಿ ಜಾಗೃತಿ ಮೂಡಿಸಿದರು.

ಎ.ಟಿ.ರಾಮಸ್ವಾಮಿ ಚಾಲನೆ:

‘ಪರಿಸರಕ್ಕಾಗಿ ನಾವು’ ಸೇರಿದಂತೆ ಹಲವು ಸಂಘಟನೆಗಳು ಹಮ್ಮಿಕೊಂಡಿದ್ದ ‘ಚಾಮುಂಡಿಬೆಟ್ಟ ಸಂರಕ್ಷಣೆಗಾಗಿ ನಡಿಗೆ’ ಅಭಿಯಾನದಲ್ಲಿ ನಾಗರಿಕರು ಪ್ಲೇಕಾರ್ಡ್‌ಗಳನ್ನು ಹಿಡಿದು ಜಾಗೃತಿ ಮೂಡಿಸಿದರು. ಬೆಳಗ್ಗೆ ಅಭಿಯಾನಕ್ಕೆ ಕಪತ್ತಗುಡ್ಡ ನಂದಿವೇರಿ ಮಠದ ಶ್ರೀ ಶಿವಕುವಾರ ಸ್ವಾಮೀಜಿ ಹಾಗೂ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಚಾಲನೆ ನೀಡಿದರು. 1000ಕ್ಕೂ ಹೆಚ್ಚು ಜನರು ಭಾಗಿಯಾಗಿ ನಡಿಗೆಗೆ ಹುರುಪು ತುಂಬಿದರು. ನಿಡಸೋಸಿ ಮಠದ ಶ್ರೀ ನಿಜಲಿಂಗೇಶ್ವರ ಸ್ವಾಮೀಜಿ, ಕೆಸವತ್ತೂರು ಮಠದ ಶ್ರೀ ಬಸವರಾಜೇಂದ್ರ ಸ್ವಾಮೀಜಿ, ತೊರೆನೂರು ಮಠದ ಶ್ರೀ ಮಲ್ಲೇಶ ಸ್ವಾಮೀಜಿ, ಪರಿಸರ ತಜ್ಞ ಕೃಪಾಕರ, ಕಾಂಗ್ರೆಸ್ ಮುಖಂಡ ಎಂ.ಕೆ. ಸೋಮಶೇಖರ ಸೇರಿದಂತೆ ಮುಖಂಡರು ತೋಳಿಗೆ ಹಸಿರು ಪಟ್ಟಿ ಹಾಕಿಕೊಂಡು ಬೆಟ್ಟದ ಉಳಿವಿನ ಅಗತ್ಯವನ್ನು ಸಾರಿದರು.
ಬಳಿಕ ಚಾಮುಂಡಿ ಬೆಟ್ಟದಲ್ಲಿರುವ ಟಿ.ಎಸ್. ಸುಬ್ಬಣ್ಣ ಸಾರ್ವಜನಿಕ ಬಾಲಿಕ ಪ್ರೌಢಶಾಲೆ ಆವರಣದಲ್ಲಿ ಏರ್ಪಡಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಕಪತ್ತಗುಡ್ಡ ನಂದಿವೇರಿ ಮಠದ ಶ್ರೀ ಶಿವಕುವಾರ ಸ್ವಾಮೀಜಿ ಮಾತನಾಡಿ, ನಾಡಿನ ಎಲ್ಲ ಬೆಟ್ಟ ಗುಡ್ಡಗಳನ್ನು ಉಳಿಸಿ ಕಾಪಾಡುವ ಜವಾಬ್ದಾರಿ ಕರ್ತವ್ಯ 7 ಕೋಟಿ ಕನ್ನಡಿಗರದ್ದು. ನಿರ್ಮಲವಾದ ಪರಿಸರ ನಿರ್ವಾಣದ ಜಾಗದಲ್ಲಿ ದೇವರಿರಲೂ ಸಾಧ್ಯ. ಗದುಗಿನ ಜನರು ಸಂಘಟಿತರಾಗಿ ಕಪತ್ತಗುಡ್ಡದಲ್ಲಿ ಗಣಿಗಾರಿಕೆ ಬರದಂತೆ ನೋಡಿಕೊಂಡರು ಎಂದು ಹೇಳಿದರು.
ಶ್ರೀ ನಿಜಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ದೇವರ ದರ್ಶನಕ್ಕೆ ದೇಗುಲಕ್ಕೆ ಬರುವವರು ಪವಿತ್ರ ಜಾಗವನ್ನು ಗಲೀಜು ಮಾಡಿದರೆ ಹೇಗೆ? ಸ್ವಚ್ಛ ಪರಿಸರ ಸಾಕಾರಗೊಳ್ಳಬೇಕು. ಜಾಗೃತರಾಗಿ ಕಸ ಮುಕ್ತ ಬೆಟ್ಟ ಆಗಿಸಬೇಕು ಎಂದು ಕಿವಿಮಾತು ಹೇಳಿದರು.
ಪರಿಸರಕ್ಕಾಗಿ ನಾವು ಸಂಘಟನೆ ಅಧ್ಯಕ್ಷ ಎ.ಟಿ.ರಾಮಸ್ವಾಮಿ ಮಾತನಾಡಿ, ಅಭಿವೃದ್ಧಿ ಹೆಸರಿನಲ್ಲಿ ಇವತ್ತು ಹಲವು ಲೂಟಿಗಳು ಹೆಚ್ಚುತ್ತಿವೆ. ನಮ್ಮವರೆ ನಮ್ಮನ್ನು ದೋಚುತ್ತಿದ್ದಾರೆ. ಮುಂದಿನ ಪೀಳಿಗೆಗೆ ಪ್ರಕೃತಿ ಉಳಿಸುವ ಜವಾಬ್ದಾರಿ ನಮ್ಮದಾಗಬೇಕಿದೆ. ವಿದ್ಯಾವಂತರು, ಪ್ರಜ್ಞಾವಂತರೇ ಪ್ರಕೃತಿಗೆ ಮಾರಕವಾಗಿದ್ದಾರೆ ಎಂದು ಬೇಸರ ಹೊರಹಾಕಿದರು.
ಲೇಖಕಿ ಕುಸಮಾ ಆಯರಹಳ್ಳಿ ಮತ್ತು ತಂಡದವರು ರೆಂಬೆ ಕೊಂಬೆಯ ಮ್ಯಾಲ ಮೊದಲಾದ ಗೀತೆಗಳನ್ನು ಹಾಡಿದರು. ಬಿಜೆಪಿ ಹಿಂದುಳಿವರ್ಗಗಳ ಮೋರ್ಚಾ ಅಧ್ಯಕ್ಷ ರಘು ಕೌಟಿಲ್ಯ, ಮುಡಾ ಮಾಜಿ ಅಧ್ಯಕ್ಷ ಎಚ್.ವಿ ರಾಜೀವ್, ಪರಶುರಾಮೇಗೌಡ, ಲೀಲಾ ಶಿವಕುಮಾರ್, ಒಡನಾಡಿಯ ಸ್ಟ್ಯಾನ್ಲಿ, ಕುಮುದಿನಿ ಅಚ್ಚಿ, ಗೋಕುಲ್ ಗೋವರ್ಧನ್, ಬಡಗಲಪುರ ನಾಗೇಂದ್ರ, ಅರುಣ್, ಹೊಸಕೋಟೆ ಬಸವರಾಜು, ಒಂಬತ್ಕೆರೆ, ಪ್ರೊ.ಕಾಳೇಚನ್ನೇಗೌಡ, ಭೈರಪ್ಪ, ಶೈಲಜೇಶ್, ಪ್ರಭಾ, ಲೀಲಾ ವೆಂಕಟೇಶ್, ಭಾಗ್ಯ ಶಂಕರ್, ಗೀತಾ, ಶ್ವೇತಾ, ಅಭಿಷೇಕ್, ಸುರೇಶ್ ಸುಬ್ಬರಾವ್, ರವಿ, ಪಿಯುಸಿಎಲ್‌ನ ಕಮಲ್ ಗೋಪಿನಾಥ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.

ಹಕ್ಕೊತ್ತಾಂುಗಳೇನು?:

ಚಾಮುಂಡಿ ಬೆಟ್ಟ ಪ್ಲಾಸ್ಟಿಕ್ ನಿಷೇಧ ವಲಯವಾಗಬೇಕು. ಬೆಟ್ಟಕ್ಕೆ ಎಲ್ಲ ರೀತಿಂು ಖಾಸಗಿ ವಾಹನಗಳ ಓಡಾಟಕ್ಕೆ ನಿಷೇಧ ಹೇರಬೇಕು, ಗೋಪಾಲಸ್ವಾಮಿ ಬೆಟ್ಟದ ರೀತಿಯಲ್ಲಿ ಸಾರ್ವಜನಿಕ ಬಸ್ ವ್ಯವಸ್ಥೆ ರೂಪಿಸಬೇಕು. ಧಾರಣಾ ಸಾಮರ್ಥ್ಯದ ಮೌಲ್ಯವಾಪನ ವಾಡಬೇಕು. ಚಾಮುಂಡಿ ಪ್ರಾಧಿಕಾರ ಪುನರ್ ರಚನೆಂಾಗಬೇಕು. ಬೆಟ್ಟದ ಸರ್ವತೋಮುಖ ಸಂರಕ್ಷಣೆಗಾಗಿ ಪ್ರಾಧಿಕಾರದಲ್ಲಿ ಪರಿಸರ ತಜ್ಞರು, ವನ್ಯಜೀವಿ ತಜ್ಞರು, ಭೂವಿಜ್ಞಾನಿ, ಜಲ ತಜ್ಞರು, ಪರಂಪರೆ ತಜ್ಞರು ಸೇರ್ಪಡೆಯಾಗಬೇಕು. ಖಾಲಿಯಿರುವ 400ಕ್ಕೂ ಹೆಚ್ಚು ಮಳಿಗೆಗಳನ್ನು ದುರಸ್ಥಿ ಮಾಡಿ ರಸ್ತೆ ಬದಿಂು ವಾರಾಟಗಾರ ಸ್ಥಳಾಂತರಿಸಬೇಕು. ಪ್ರಸಾದ್ ಂೋಜನೆ ಅಡಿಂುಲ್ಲಿ ಂಾವುದೇ ಹೊಸ ಕಟ್ಟಡ ನಿರ್ವಾಣವಾಗಬಾರದು. ಬೆಟ್ಟದ ಮೇಲೆ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು. ಭಕ್ತರು ಮೆಟ್ಟಲಿಗೂ ಕುಂಕುಮ ಚ್ಚುವುದಕ್ಕೆ ನಿರ್ಬಂಧ ವಿಧಿಸಬೇಕು ಎಂಬ ಹಕ್ಕೊತ್ತಾಯ ಮಾಡಲಾಯಿತು.
"

ಮೈಸೂರು ನಗರಕ್ಕೆ ಹೊಂದಿಕೊಂಡಂತೆ ಚಾಮುಂಡಿಬೆಟ್ಟವಿದ್ದು, ಮೈಸೂರಿಗರಿಗೆ ಸುಂದರ ಪರಿಸರ ಆಸ್ವಾದಿಸುವ ಅವಕಾಶ ಒದಗಿಸಿದೆ. ಚಾಮುಂಡಿಬೆಟ್ಟದ ಪರಿಸರ ಸಂರಕ್ಷಣೆ ಮಾಡಬೇಕಾದ ಜವಾಬ್ದಾರಿ ನಮ್ಮೆಲರದ್ದಾಗಿದೆ. ಬೆಟ್ಟದ ಮೆಟ್ಟಿಲುಗಳಿಗೆ ಹರಿಶಿನ-ಕುಂಕುಮ ಹಚ್ಚುವುದರಿಂದ ಅದರಲ್ಲಿರುವ ರಾಸಾಯನಿಕ ಅಂಶ ಬೆಟ್ಟದದ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಪರಿಸರವಾದಿಗಳು ಈಗಾಗಲೇ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ರಾಸಾಯನಿಕದಿಂದ ತಯಾರಿಸಿರುವ ಹರಿಶಿನ-ಕುಂಕುಮವನ್ನು ಮೆಟ್ಟಿಲುಗಳಿಗೆ ಹಚ್ಚಬಾರದು. ಪ್ಲಾಸ್ಟಿಕ್ ಸಂಪೂರ್ಣವಾಗಿ ನಿಷೇಧಿಸಬೇಕು.

"

ಕೋಟ್ಮನುಷ್ಯ ಹುಟ್ಟುವುದಕ್ಕಿಂತಲೂ ಮೊದಲು ಚಾಮುಂಡಿ ಬೆಟ್ಟವಿತ್ತು. ದಖನ್ ಪ್ರಸ್ಥಭೂಮಿಯ ದಕ್ಷಿಣದ ತುದಿಯಲ್ಲಿರುವ ಇದು, ಗುಲಾಬಿ ಗ್ರಾನೈಟ್ ಕಲ್ಲುಗಳಿಂದ ಕೂಡಿದೆ. ಬೆಟ್ಟದ ಕೆಳಗಿದ್ದ ಹುಲ್ಲುಗಾವಲು, ಕೆರೆಗಳು ಒತ್ತುವರಿಯಾಗಿವೆ. ಅಭಿವೃದ್ಧಿ ಹೆಸರಿನಲ್ಲಿ ಪರಿಸರಕ್ಕೆ ಮಾರಕವಾದ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net