ರಾಮಾಯಣದ ಸ್ವಾರಸ್ಯಕರ ಪ್ರಸಂಗವೊಂದನ್ನು ಉಲ್ಲೇಖಿಸಿದ ಶ್ರೀಗಳು, ರಾಮ ವನವಾಸಕ್ಕೆ ಹೋದಾಗ ಮೊದಲು ಭೇಟಿ ನೀಡಿದ್ದು ಅತ್ರಿ ಮಹರ್ಷಿಗಳ ಆಶ್ರಮಕ್ಕೆ. ಅಲ್ಲಿ ಅತಿಥಿ ಸತ್ಕಾರದ ನಂತರ ಅನಸೂಯೆ ಸೀತೆಗೆ ದಿವ್ಯವಾದ ಆಭರಣ ಮತ್ತು ಬಾಡದ ಹೂವುಗಳನ್ನು ನೀಡುತ್ತಾಳೆ. ಆಗ ರಾಮ ‘ಎಲ್ಲವನ್ನೂ ತ್ಯಜಿಸಿ ಬಂದು ನಮಗೆ ಈ ಒಡವೆಗಳು ಏಕೆ?’ ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಉತ್ತರಿಸಿದ ಅನಸೂಯೆ, ‘ಇವು ಸಾಮಾನ್ಯ ಒಡವೆಗಳಲ್ಲ, ಅರಣ್ಯದಲ್ಲಿ ಸಂಚರಿಸುವಾಗ ಇವುಗಳ ಅವಶ್ಯಕತೆ ಇದೆ’ ಎಂದು ಹೇಳುತ್ತಾಳೆ.