ದಸರಾ ಆಹಾರ ಮೇಳ: ಖಾದ್ಯ ಸಿದ್ಧಪಡಿಸುವ ಯಾರೂ ಬೇಕಾದರೂ ಭಾಗಿಯಾಗಿ
ದಸರಾ ಆಹಾರ ಮೇಳ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಅರ್ಜಿ ಆಹ್ವಾನ
ಮಳಿಗೆ ತೆರೆದು ಉತ್ಪನ್ನ ಹಾಗೂ ಅಡುಗೆಗಳನ್ನು ಸಾರ್ವಜನಿಕರಿಗೆ ಪರಿಚಯಿಸಲು ಅವಕಾಶ
ಮೈಸೂರು: ದಸರಾ ಮಹೋತ್ಸವ ಅಂಗವಾಗಿ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಅಕ್ಟೋಬರ್ 11ರಿಂದ 25ರವರೆಗೆ ಆಯೋಜಿಸುವ ಆಹಾರ ಮೇಳದಲ್ಲಿ ಭಾಗವಹಿಸಲು ಅರ್ಹ ವ್ಯಕ್ತಿಗಳು, ರೆಸ್ಟೋರೆಂಟ್‌ಗಳು, ಸಾವಯವ ಕೃಷಿಕರು, ಸಂಘ-ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ದಕ್ಷಿಣ ಮತ್ತು ಉತ್ತರ ಕರ್ನಾಟಕದ ಸಾಂಪ್ರದಾಯಿಕ ಶೈಲಿ, ಭಾರತದ ವಿವಿಧ ರಾಜ್ಯಗಳ ಖಾದ್ಯಗಳು ಹಾಗೂ ಅಂತಾರಾಷ್ಟ್ರೀಯ ಮಟ್ಟದ ಚೈನೀಸ್, ಇಟಾಲಿಯನ್, ಫ್ರೆಂಚ್, ಟಿಬೆಟಿಯನ್ ಮತ್ತು ಆಫ್ರಿಕನ್ ಆಹಾರ ಪದ್ಧತಿ ಒಂದೇ ಸೂರಿನಡಿ ಉಣಬಡಿಸುವ ವೈವಿಧ್ಯಮಯ ಉದ್ದೇಶ ಹೊಂದಿದೆ.
ಮಳಿಗೆ ತೆರೆದು ಉತ್ಪನ್ನ ಹಾಗೂ ಅಡುಗೆಗಳನ್ನು ಸಾರ್ವಜನಿಕರಿಗೆ ಪರಿಚಯಿಸಲು ಅವಕಾಶ ಕಲ್ಪಿಸಲಾಗಿದೆ.
ಪಾರಂಪರಿಕ ಹಾಗೂ ವಿಶೇಷ ರುಚಿಯ ಖಾದ್ಯ ಸಿದ್ಧಪಡಿಸುವ ಗೃಹಿಣಿಯರು, ಅಡುಗೆಯವರು, ಹೋಟೆಲ್‌ಗಳು, ಸಂಸ್ಥೆಗಳು ಭಾಗವಹಿಸಬಹುದು. ಆಸಕ್ತರು ಸೆಪ್ಟೆಂಬರ್ 1ರಿಂದ 16ರವರೆಗೆ ಮೈಸೂರು ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತರ ಕಚೇರಿಯಲ್ಲಿ ಅರ್ಜಿ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಯನ್ನು ಸೆಪ್ಟೆಂಬರ್ 19ರೊಳಗೆ ಸಲ್ಲಿಸಬೇಕು.
ಸೆ.22ರಂದು ಬೆಳಗ್ಗೆ 11ಕ್ಕೆ ಪುರಭವನದಲ್ಲಿ ಲಾಟರಿ ಮುಖಾಂತರ ಮಳಿಗೆದಾರರನ್ನು ಆಯ್ಕೆ ಮಾಡಲಾಗುವುದು ಎಂದು ಪಾಲಿಕೆಯ ಹೆಚ್ಚುವರಿ ಆಯುಕ್ತರು ಹಾಗೂ ಆಹಾರ ಮೇಳ ಉಪಸಮಿತಿಯ ಉಪ ವಿಶೇಷಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.