ಪ್ರಸ್ತುತ ಮಹಿಳೆಯರಿಗೆ ಶಿಕ್ಷಣ, ಆರ್ಥಿಕ ಭದ್ರತೆ ಲಭ್ಯ: ಪ್ರಾಧ್ಯಾಪಕಿ ಡಾ.ವಿನೋದಾ ಅಭಿಮತ

ಮೈಸೂರಿನ ನೇಗಿಲಯೋಗಿ ಮಹಿಳೆಯರ ಹಿತೈಷಿಗಳ ಸೇವಾ ಬಳಗದಿಂದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಬೆಂಕಿರಹಿತ ಅಡುಗೆ ಸ್ಪರ್ಧೆಯನ್ನು  ಡಾ.ವಿನೋದಾ ಉದ್ಘಾಟಿಸಿದರು. ಜೆ.ಶೋಭಾ, ರಾಣಿ ಮಹೇಶ್, ಸುನಂದಾ, ಯೋಗಾವತಿ, ಸೀತಮ್ಮ, ಶೋಭಾ ಧನಂಜಯ್, ಅನಿತಾ,  ವಿಜಯಲಕ್ಷ್ಮೀ, ಲಾವಣ್ಯಾ , ಚಂದ್ರಕಲಾ ಇತರರು ಇದ್ದರು.
ಮೈಸೂರಿನ ನೇಗಿಲಯೋಗಿ ಮಹಿಳೆಯರ ಹಿತೈಷಿಗಳ ಸೇವಾ ಬಳಗದಿಂದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಬೆಂಕಿರಹಿತ ಅಡುಗೆ ಸ್ಪರ್ಧೆಯನ್ನು ಡಾ.ವಿನೋದಾ ಉದ್ಘಾಟಿಸಿದರು. ಜೆ.ಶೋಭಾ, ರಾಣಿ ಮಹೇಶ್, ಸುನಂದಾ, ಯೋಗಾವತಿ, ಸೀತಮ್ಮ, ಶೋಭಾ ಧನಂಜಯ್, ಅನಿತಾ, ವಿಜಯಲಕ್ಷ್ಮೀ, ಲಾವಣ್ಯಾ , ಚಂದ್ರಕಲಾ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕುಟುಂಬದ ಸದಸ್ಯರನ್ನು ಬೆಸೆಯುವ ಅಡುಗೆಮನೆ ಮಹಿಳೆಯ ಪ್ರೀತಿಯ ಹೆಗ್ಗುರುತು
  • ಆದರೆ ಇತ್ತೀಚೆಗೆ ಹೊರಗೆ ಊಟ, ತಿಂಡಿ ತಿನ್ನುವ ಪ್ರವೃತ್ತಿ ಹೆಚ್ಚಾಗಿದೆ
ಮೈಸೂರು:ನಗರದ ನೇಗಿಲಯೋಗಿ ಮಹಿಳೆಯರ ಹಿತೈಷಿಗಳ ಸೇವಾ ಬಳಗದಿಂದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಬೆಂಕಿರಹಿತ ಅಡುಗೆ ಸ್ಪರ್ಧೆ ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಎಸ್‌ಡಿಎಂ ಮಹಿಳಾ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ವಿನೋದಾ ಮಾತನಾಡಿ, ಕುಟುಂಬದ ಸದಸ್ಯರನ್ನು ಬೆಸೆಯುವ ಅಡುಗೆಮನೆ ಅವಳ ಪ್ರೀತಿಯ ಹೆಗ್ಗುರುತು. ಆದರೆ ಇತ್ತೀಚಿನ ದಿನಗಳಲ್ಲಿ ಅದರ ಮೇಲಿನ ಪ್ರೀತಿ ಕಡಿಮೆ ಅಗುತ್ತಿದೆ ಎಂದು ಹೇಳಿದರು.
ಪ್ರಸ್ತುತ ಮಹಿಳೆಯರಿಗೆ ಶಿಕ್ಷಣ, ಉದ್ಯೋಗ, ಆರ್ಥಿಕ ಭದ್ರತೆ ಸಿಗುತ್ತಿದೆ. ಆದರೂ ಅಡುಗೆ ಮನೆಯಲ್ಲಿ ರುಚಿ ಶುಚಿಯಾದ ತಿಂಡಿ ಹೊಸ ತರದ ಅಡುಗೆಗಳನ್ನು ಮಾಡುತ್ತಾ ಹೆಚ್ಚು ಆರೋಗ್ಯಕರ ತಿಂಡಿಗಳ ಬಗ್ಗೆ ಒಲವು ತೋರುತ್ತಿದ್ದಾಳೆ. ಆದರೂ ಹೊರಗಡೆ ನಮಗೆ ಆರ್ಡರ್ ಮಾಡಿದರೆ ಯಾವ ಕಷ್ಟವೂ ಇಲ್ಲದೆ ಕೆಲವೇ ಕ್ಷಣಗಳಲ್ಲಿ ಮನೆಗೆ ಬರುತ್ತದೆ ಎಂದು ಈಗಿನವರು ಆಲೋಚಿಸುವುದು ಆತಂಕಕಾರಿಯಾದ ವಿಷಯವಾಗಿದೆ ಎಂದರು.
ತೀರ್ಪುಗಾರರಾಗಿ ವಿದ್ವಾನ್ ರಘು ಮತ್ತು ಡಾ.ವಿನೋದಾ ಅವರು ಭಾಗವಹಿಸಿದ್ದರು. ನೇಗಿಲಯೋಗಿ ಮಹಿಳೆಯರ ಹಿತೈಷಿಗಳ ಸೇವಾ ಬಳಗದ ಅಧ್ಯಕ್ಷೆ ಜೆ.ಶೋಭಾ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿಗಳಾದ ರಾಣಿ ಮಹೇಶ್, ಪದಾಧಿಕಾರಿಗಳಾದ ಸುನಂದಾ, ಯೋಗಾವತಿ, ಸೀತಮ್ಮ, ಶೋಭಾ ಧನಂಜಯ್, ಅನಿತಾ, ವಿಜಯಲಕ್ಷ್ಮೀ, ಲಾವಣ್ಯಾ, ಚಂದ್ರಕಲಾ ಇತರರು ಇದ್ದರು.
ಸ್ಪರ್ಧೆಯಲ್ಲಿ ಭಾಗವಹಿಸಿದ್ದ 25ಕ್ಕೂ ಹೆಚ್ಚು ಮಹಿಳೆಯರು ಸುಮಾರು 40 ವಿವಿಧ ರೀತಿಯ ವೈವಿಧ್ಯಮಯ ಅಡುಗೆ ತಯಾರಿಸಿ ಎಲ್ಲರ ಗಮನ ಸೆಳೆದರು. ಸ್ಪರ್ಧೆಯ ನಂತರ ಸದಸ್ಯರಿಗೆ ವಿವಿಧ ಆಟಗಳನ್ನು ಆಯೋಜಿಸಲಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net