ಪ್ರಮುಖ ಮುಖ್ಯಾಂಶಗಳು.ಮಗಳ ವಿದ್ಯಾಭ್ಯಾಸಕ್ಕಾಗಿ ಕೂಡಿಟ್ಟ ಹಣಹ್ಯಾಕ್ ಮಾಡಿ ವಂಚಕರು ಹಣವನ್ನು ಇನ್ನೊಂದು ಖಾತೆ ವರ್ಗಾವಣೆಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.ಮೈಸೂರು: ಮಗಳ ಶಿಕ್ಷಣಕ್ಕಾಗಿ ಕೂಡಿಟ್ಟ ಎರಡು ಲಕ್ಷ ರೂ. ಹಣವನ್ನು ಖದೀಮರು ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಿ ದೋಚಿದ್ದಾರೆ..ನಜರ್‌ಬಾದ್ ನಿವಾಸಿ ಸಂತೋಷ್ ಕುಮಾರ್ ಹಣ ಕಳೆದುಕೊಂಡವರು. .ಇವರು ತಮ್ಮ ಮಗಳ ವಿದ್ಯಾಭ್ಯಾಸಕ್ಕಾಗಿ 2 ಲಕ್ಷ ರೂ. ಹಣವನ್ನು ಖಾಸಗಿ ಬ್ಯಾಂಕ್‌ನಲ್ಲಿರುವ ತಮ್ಮ ಖಾತೆಯಲ್ಲಿ ಬಹಳ ದಿನಗಳಿಂದ ಇಟ್ಟಿದ್ದರು. .ಈ ಸಂದರ್ಭದಲ್ಲಿ ಇವರ ಮೊಬೈಲ್‌ಗೆ 2 ಲಕ್ಷ ರೂ. ಕಡಿತಗೊಂಡಿರುವ ಸಂದೇಶ ಬಂದಿದೆ. ಗಾಬರಿಗೊಂಡ ಇವರು ತಕ್ಷಣ ಬ್ಯಾಂಕ್‌ಗೆ ಹೋಗಿ ಪರಿಶೀಲನೆ ನಡೆಸಿದ್ದಾರೆ.. ಆಗಲೇ ಬ್ಯಾಂಕ್ ಖಾತೆ ಹ್ಯಾಕ್ ಮಾಡಿ ವಂಚಕರು ಹಣವನ್ನು ಇನ್ನೊಂದು ಖಾತೆ ವರ್ಗಾವಣೆ ಮಾಡಿಕೊಂಡಿರುವುದು ಗೊತ್ತಾಗಿದೆ. ಈ ಸಂಬಂಧ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.