ಓದುವ ಸಮಯದಲ್ಲಿ ಅನುಕೂಲಕರ ವಾತಾವರಣ ನಿರ್ಮಿಸಿ

ನಂಜನಗೂಡಿನ ಸಮೀಪದ ದೇಬೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ದೇಬೂರು ಕ್ಲಸ್ಟರ್ ಹಂತದ ಎಫ್‌ಎಲ್‌ಎನ್ ಚಟುವಟಿಕೆ ಆಧಾರಿತ ಕಲಿಕಾ ಹಬ್ಬ ನೆರವೇರಿತು.  ಮಹೇಶ್, ಎನ್.ಚೇತನ್ ಶರ್ಮ, ಚೆಲುವರಾಜು, ಪ್ರಸನ್ನ, ಲೀಲಾವತಿ, ಶಿವಮ್ಮ, ಸುಮಾ, ರತ್ನಾ, ನಸೀಂ ಅರಾ, ಪುಟ್ಟ ಗೌರಮ್ಮ, ಪದ್ಮಾ ಇದ್ದರು.
ನಂಜನಗೂಡಿನ ಸಮೀಪದ ದೇಬೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ದೇಬೂರು ಕ್ಲಸ್ಟರ್ ಹಂತದ ಎಫ್‌ಎಲ್‌ಎನ್ ಚಟುವಟಿಕೆ ಆಧಾರಿತ ಕಲಿಕಾ ಹಬ್ಬ ನೆರವೇರಿತು. ಮಹೇಶ್, ಎನ್.ಚೇತನ್ ಶರ್ಮ, ಚೆಲುವರಾಜು, ಪ್ರಸನ್ನ, ಲೀಲಾವತಿ, ಶಿವಮ್ಮ, ಸುಮಾ, ರತ್ನಾ, ನಸೀಂ ಅರಾ, ಪುಟ್ಟ ಗೌರಮ್ಮ, ಪದ್ಮಾ ಇದ್ದರು.
Published on
ಸಮೀಪದ ದೇಬೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ದೇಬೂರು ಕ್ಲಸ್ಟರ್ ಹಂತದ ಎಫ್‌ಎಲ್‌ಎನ್ ಚಟುವಟಿಕೆ ಆಧಾರಿತ ಕಲಿಕಾ ಹಬ್ಬ ನೆರವೇರಿತು.
ನಂಜನಗೂಡಿನ ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ ಮತ್ತು ಟಿವಿ ಯಿಂದ ದೂರವಿರಬೇಕು ಎಂದು ಸಂದೇಶ ಕೊಟ್ಟರು. ಹಾಗೆಯೇ ಮನೆಯಲ್ಲಿ ಪಾಲಕರು ಸಹ ಮಕ್ಕಳು ಓದುವ ಸಮಯದಲ್ಲಿ ಅವರಿಗೆ ಅನುಕೂಲಕರ ವಾತಾವರಣವನ್ನು ಒದಗಿಸಿ ಕೊಡಬೇಕೆಂದು ಕರೆ ನೀಡಿದರು.
ಓದಿನ ಜತೆಗೆ ಇಂತಹ ಚಟುವಟಿಕೆಗಳಲ್ಲೂ ಸಹ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುವ ಉದ್ದೇಶದಿಂದ ಇಲಾಖೆಯು ಕಲಿಕಾ ಹಬ್ಬ ಎಂಬ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಹೀಗಾಗಿ ಪಾಲಕರು ಇದರ ಸದುದ್ದೇಶವನ್ನು ಅರ್ಥ ಮಾಡಿಕೊಂಡು ಮಕ್ಕಳ ಕಲಿಕೆಗೆ ಸಹಕರಿಸಬೇಕೆಂದು ತಮ್ಮ ಮಾತುಗಳಲ್ಲಿ ತಿಳಿಸಿಕೊಟ್ಟರು.
ಕಲಿಕಾ ಹಬ್ಬದಲ್ಲಿ ಕೈಬರಹ ಸ್ಪರ್ಧೆ, ಕಥೆ ಹೇಳುವುದು ರಸಪ್ರಶ್ನೆ ಮೆಮೊರಿ ಪೋಷಕಾಂಶ ರಂಗೋಲಿ ಸಂತಸದಾಯಕ ಗಣಿತ ವಿದ್ಯಾರ್ಥಿ ಪಾಲಕರ ಸಹ ಸಂಬಂಧದ ಆಟಗಳು ಇಂತಹ ಸ್ಪರ್ಧೆಗಳಲ್ಲಿ ಸುಮಾರು 11 ಶಾಲೆಗಳಿಂದ 110ಕ್ಕೂ ಹೆಚ್ಚು ವಿದ್ಯಾರ್ಥಿಗಳು 30ಕ್ಕೂ ಹೆಚ್ಚು ಪಾಲಕರು, ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗಿಯಾಗಿ, ಉತ್ತಮ ಪ್ರದರ್ಶನ ತೋರಿದವರು ಬಹುಮಾನಕ್ಕೆ ಪಾತ್ರರಾದರು. ಉಳಿದವರು ಪ್ರೋತ್ಸಾಹಕ ಪ್ರಮಾಣಪತ್ರಗಳನ್ನು , ನೆನಪಿನ ಉಡುಗೊರೆಗಳನ್ನು ಪಡೆದುಕೊಂಡರು.
ಇದಕ್ಕೂ ಮುನ್ನ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರಾಜು ಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿಗಳಲ್ಲಿ ಕಲಿಕೆಯನ್ನು ಹೆಚ್ಚಿಸಲು ಸರ್ಕಾರಿ ಶಾಲೆಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಮಕ್ಕಳಿಗೆ ಉಪಯೋಗ ಆಗುತ್ತಿದೆ. ಸರ್ಕಾರಿ ಶಾಲೆಗಳು ಸಹ ಇತ್ತೀಚಿನ ದಿನಗಳಲ್ಲಿ ಉತ್ತಮ ಸೌಲಭ್ಯಗಳನ್ನು ಹೊಂದಿವೆ. ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಕೂಡ ಚೆನ್ನಾಗಿ ಕಲಿಯುತ್ತಿದ್ದಾರೆ ಎಂದರು.
ಕ್ಲಸ್ಟರ್ ಸಂಪನ್ಮೂಲ ಸಮನ್ವಯ ಅಧಿಕಾರಿ ಎನ್.ಚೇತನ್ ಶರ್ಮ, ಶಾಲೆಯ ಮುಖ್ಯ ಶಿಕ್ಷಕ ಚೆಲುವರಾಜು, ಸರ್ಕಾರಿ ನೌಕರ ಸಂಘದ ನಿರ್ದೇಶಕ ಪ್ರಸನ್ನ, ಶಿಕ್ಷಕ ಪ್ರತಿನಿಧಿಗಳಾದ ಲೀಲಾವತಿ, ಮಹದೇವ ಮೂರ್ತಿ, ಶಿಕ್ಷಕರಾದ ಶಿವಮ್ಮ, ಸುಮಾ, ರತ್ನಾ, ನಸೀಂ ಅರಾ, ಪುಟ್ಟ ಗೌರಮ್ಮ, ಪದ್ಮಾ, ಸುಜಯ, ಕ್ಲಸ್ಟರ್ನನ ಎಲ್ಲ ಶಾಲೆಯ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ವಿದ್ಯಾರ್ಥಿ ಮತ್ತು ಪಾಲಕರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net