ನೀರು, ಒಳಚರಂಡಿ ಶುಲ್ಕ ಏರಿಕೆಗೆ ಖಂಡನೆ:ಸಿಪಿಐಎಂನಿಂದ ಪ್ರತಿಭಟನೆ

ಮೈಸೂರು ನಗರಪಾಲಿಕೆಯಿಂದ ನೀರಿನ ಶುಲ್ಕ ಮತ್ತು ಒಳಚರಂಡಿ ಶುಲ್ಕಗಳ ಏರಿಕೆ ನಿರ್ಧಾರ ಹಿಂಪಡೆಯಲು ಆಗ್ರಹಿಸಿ ಭಾರತೀಯ ಕಮ್ಯುನಿಸ್ಟ್ ಪಕ್ಷ -ಮಾರ್ಕ್ಸ್‌ವಾದಿ (ಸಿಪಿಐ-ಎಂ)ನಿಂದ ಪ್ರತಿಭಟನೆ ನಡೆಯಿತು. ಜಗದೀಶ್ ಸೂರ್ಯ, ಜಿ.ಜಯರಾಂ, ಕೆ.ಬಸವರಾಜ್, ಎನ್.ವಿಜಯ್ ಕುಮಾರ್,  ಎನ್.ಸುಬ್ರಹ್ಮಣ್ಯ ಇತರರು ಇದ್ದರು.
ಮೈಸೂರು ನಗರಪಾಲಿಕೆಯಿಂದ ನೀರಿನ ಶುಲ್ಕ ಮತ್ತು ಒಳಚರಂಡಿ ಶುಲ್ಕಗಳ ಏರಿಕೆ ನಿರ್ಧಾರ ಹಿಂಪಡೆಯಲು ಆಗ್ರಹಿಸಿ ಭಾರತೀಯ ಕಮ್ಯುನಿಸ್ಟ್ ಪಕ್ಷ -ಮಾರ್ಕ್ಸ್‌ವಾದಿ (ಸಿಪಿಐ-ಎಂ)ನಿಂದ ಪ್ರತಿಭಟನೆ ನಡೆಯಿತು. ಜಗದೀಶ್ ಸೂರ್ಯ, ಜಿ.ಜಯರಾಂ, ಕೆ.ಬಸವರಾಜ್, ಎನ್.ವಿಜಯ್ ಕುಮಾರ್, ಎನ್.ಸುಬ್ರಹ್ಮಣ್ಯ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನೀರಿನ ಶುಲ್ಕ ಮತ್ತು ಒಳಚರಂಡಿ ಶುಲ್ಕಗಳ ಏರಿಕೆ ನಿರ್ಧಾರ ಹಿಂಪಡೆಯಬೇಕು
  • ಬಡ ಹಾಗೂ ಮಧ್ಯಮ ವರ್ಗದ ಜನರ ಮೇಲೆ ಶುಲ್ಕದ ಹೊರೆ
ಮೈಸೂರು: ಮೈಸೂರು ಮಹಾನಗರಪಾಲಿಕೆಯಿಂದ ನೀರಿನ ಶುಲ್ಕ ಮತ್ತು ಒಳಚರಂಡಿ ಶುಲ್ಕಗಳ ಏರಿಕೆ ನಿರ್ಧಾರ ಹಿಂಪಡೆಯಲು ಆಗ್ರಹಿಸಿ ಭಾರತೀಯ ಕಮ್ಯುನಿಸ್ಟ್ ಪಕ್ಷ-ಮಾರ್ಕ್ಸ್‌ವಾದಿ(ಸಿಪಿಐ-ಎಂ)ನಿಂದ ಪ್ರತಿಭಟನೆ ನಡೆಯಿತು.
ನಗರಪಾಲಿಕೆಯ ಮುಖ್ಯದ್ವಾರದ ಮುಂದೆ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಏ.1ರಿಂದ ಜಾರಿಗೆ ಬರುವಂತೆ ನೀರಿನ ದರ ಪರಿಷ್ಕೃತ ಮಾಡಿರುವುದರಿಂದ ಪಾಲಿಕೆ ವ್ಯಾಪ್ತಿಯ ನಿವಾಸಿಗಳು ಅನವಶ್ಯಕ ಶುಲ್ಕ ಹೆಚ್ಚಳದ ಸಮಸ್ಯೆ ಎದುರಿಸಬೇಕಾಗಿದೆ ಎಂದು ದೂರಿದರು.
ಗೃಹಬಳಕೆಯ ನೀರಿನ ಶುಲ್ಕಗಳನ್ನು ಬಳಕೆಯ ಮಟ್ಟ ಆಧರಿಸಿ ದರ ನಿಗದಿಗೆ ಸ್ಟ್ರಾಟ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಬಳಕೆ ಆಧಾರಿತ ಬಿಲ್ಲಿಂಗ್ ಜತೆಗೆ ಕನಿಷ್ಠ ಅಥವಾ ಬಳಕೆ ಇಲ್ಲದ ಮನೆಗಳಿಗೂ ಪಾಲಿಕೆಯು ಕನಿಷ್ಠ ಮಾಸಿಕ ಶುಲ್ಕ 163 ರೂ.ವನ್ನು ಕಡ್ಡಾಯಗೊಳಿಸಿರುವುದು ಸಮರ್ಥನೀಯವಲ್ಲ ಎಂದರು.
ಪರಿಷ್ಕೃತ ನೀರಿನ ದರದ ಜತೆಗೆ ಮಹಾನಗರ ಪಾಲಿಕೆಯು ಒಳಚರಂಡಿ ಶುಲ್ಕಗಳನ್ನು ಸಹ ನವೀಕರಿಸಿದೆ. ಇವುಗಳನ್ನು ಈಗ ಒಟ್ಟು ನೀರಿನ ಬಿಲ್ಲಿನ ಶೇ. 40ರಷ್ಟು ಲೆಕ್ಕ ಹಾಕಲಾಗುತ್ತದೆ. ಪಾಲಿಕೆ ವ್ಯಾಪ್ತಿಯಲ್ಲಿ ನಿವಾಸಿಗಳು ಈಗಾಗಲೇ ಆಸ್ತಿ ತೆರಿಗೆಯಲ್ಲಿ ಹೆಚ್ಚಳವನ್ನು ಎದುರಿಸುತ್ತಿರುವ ಈ ಸಮಯದಲ್ಲಿ ನೀರು ಮತ್ತು ಒಳಚರಂಡಿ ಶುಲ್ಕಗಳ ಅವೈಜ್ಞಾನಿಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಡ ಹಾಗೂ ಮಧ್ಯಮ ವರ್ಗದ ಜನರ ಮೇಲೆ ಶುಲ್ಕದ ಹೊರೆ ಹೊರಿಸಿ ಪ್ರಾಕೃತಿಕ ಸಂಪನ್ಮೂಲ(ನೀರು ಒಳಗೊಂಡಂತೆ)ಗಳನ್ನು ಆರ್ಥಿಕ ಲಾಭಕ್ಕಾಗಿ ಲೂಟಿ ಹೊಡೆಯುವ ಇನ್ನೊಂದು ವರ್ಗವನ್ನು ಓಲೈಸುವ ಈ ಪೃವೃತ್ತಿ ಬದಲಾಗಬೇಕು. ಇಲ್ಲವಾದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಸಿಪಿಐ-ಎಂ ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ, ಜಿಲ್ಲಾ ಸಮಿತಿ ಸದಸ್ಯರಾದ ಜಿ.ಜಯರಾಂ, ಕೆ.ಬಸವರಾಜ್, ಎನ್.ವಿಜಯ್ ಕುಮಾರ್, ಸ್ಥಳೀಯ ಸಮಿತಿ ಕಾರ್ಯದರ್ಶಿ ಎನ್.ಸುಬ್ರಹ್ಮಣ್ಯ, ಸದಸ್ಯರಾದ ರಾಜೇಂದ್ರ, ಬಸವಯ್ಯ, ಅಣ್ಣಪ್ಪ, ಬಲರಾಂ, ಈಶ್ವರ್, ಬೀರೇಶ್ವರ್, ಪುಟ್ಟಮಲ್ಲಯ್ಯ, ಅಭಿ, ಶ್ರೀಧರ್, ಚನ್ನಪ್ಪ ಇತರರು ಇದ್ದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net