ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಜನ್ಮ ದಿನಾಚರಣೆ ಪ್ರಯುಕ್ತ ಮೈಸೂರಿನಲ್ಲಿ ಗೋಪೂಜೆ

ಮೈಸೂರು ನಗರದ ಶ್ರೀ ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ಜನ್ಮ ದಿನಾಚರಣೆ ಪ್ರಯುಕ್ತ  ನಂಜುಮಳಿಗೆಯಲ್ಲಿ ಗೋಪೂಜೆ ಸಲ್ಲಿಸಿ ಗೋವುಗಳಿಗೆ ಮೇವು ವಿತರಿಸಲಾಯಿತು. ಎಂ.ಡಿ. ಪಾರ್ಥಸಾರಥಿ, ಮ.ವಿ. ರಾಮಪ್ರಸಾದ್, ಜಗದೀಶ್, ಗಿರೀಶ್, ಬಸವರಾಜ್ ಬಸಪ್ಪ, ವಿಕ್ರಂ ಅಯ್ಯಂಗಾರ್ ಹಾಗೂ ಇತರರು ಇದ್ದರು.

Published on
ಮೈಸೂರು: ಅಪೂರ್ವ ಸ್ನೇಹ ಬಳಗ ಹಾಗೂ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಭಕ್ತವೃಂದ ವತಿಯಿಂದ ಶ್ರೀ ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ಜನ್ಮ ದಿನಾಚರಣೆ ಪ್ರಯುಕ್ತ ನಂಜುಮಳಿಗೆಯಲ್ಲಿ ಗೋಪೂಜೆ ಸಲ್ಲಿಸಿ ಗೋವುಗಳಿಗೆ ಮೇವು ವಿತರಿಸಲಾಯಿತು.
ನಗರ ಪಾಲಿಕೆ ಮಾಜಿ ಸದಸ್ಯ ಎಂ.ಡಿ. ಪಾರ್ಥಸಾರಥಿ ಮಾತನಾಡಿ, ನಮ್ಮ ಧಾರ್ಮಿಕ ಪರಂಪರೆಯನ್ನು ಮುನ್ನಡೆಸಿಕೊಂಡು ಹೋಗುವ ಮೂಲಕ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮ ಸಮಾಜಕ್ಕೆ ಅಪಾರ ಕೊಡುಗೆ ನೀಡಿದೆ ಎಂದರು.
ನಗರ ಪಾಲಿಕೆ ಮಾಜಿ ಸದಸ್ಯ ಮ.ವಿ. ರಾಮಪ್ರಸಾದ್ ಮಾತನಾಡಿ, ಮೈಸೂರಿನ ಹೆಮ್ಮೆಯ ಧಾರ್ಮಿಕ ಆಸ್ತಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಎಂದು ಬಣ್ಣಿಸಿದರು.
ಈ ಸಂದರ್ಭ ವಿವಿಧ ಸಂಘ ಸಂಸ್ಥೆಗಳ ಪ್ರಮುಖರಾದ ಜಗದೀಶ್, ಗಿರೀಶ್, ಬಸವರಾಜ್ ಬಸಪ್ಪ, ವಿಕ್ರಂ ಅಯ್ಯಂಗಾರ್, ವಿಕಾಶ್‌ ಶಾಸ್ತ್ರಿ, ಅಜಯ್ ಶಾಸ್ತ್ರಿ, ಅಪೂರ್ವ ಸುರೇಶ್, ದೂರ ರಾಜಣ್ಣ ಹಾಗೂ ಇತರರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net