ಹುಲಿ ದಾಳಿಗೆ ಹಸು ಬಲಿ

ಹನಗೋಡು ಹೋಬಳಿಯ ಗುರುಪುರ ಟಿಬೆಟ್ ಕ್ಯಾಂಪಿನ ಜಮೀನಿನಲ್ಲಿ ಹುಲಿ ದಾಳಿಗೆ ಹಸು ಬಲಿಯಾದ ಸ್ಥಳವನ್ನು ಡಿಆರ್‌ಎಫ್‌ಒ ಸಹನಾ, ಸಿಬ್ಬಂದಿ ಪರಿಶೀಲಿಸಿದರು.
ಹನಗೋಡು ಹೋಬಳಿಯ ಗುರುಪುರ ಟಿಬೆಟ್ ಕ್ಯಾಂಪಿನ ಜಮೀನಿನಲ್ಲಿ ಹುಲಿ ದಾಳಿಗೆ ಹಸು ಬಲಿಯಾದ ಸ್ಥಳವನ್ನು ಡಿಆರ್‌ಎಫ್‌ಒ ಸಹನಾ, ಸಿಬ್ಬಂದಿ ಪರಿಶೀಲಿಸಿದರು.
Published on
ಹನಗೋಡು: ಹೋಬಳಿಯ ಗುರುಪುರದ ಹುಣಸೆಕಟ್ಟೆ ಬಳಿಯ ಟಿಬೆಟ್ ಕ್ಯಾಂಪ್‌ನ ಬಿ.ವಿಲೇಜ್‌ನ ಜಮೀನಿನಲ್ಲಿ ಬುಧವಾರ ಹುಲಿ ದಾಳಿಗೆ ಹಸು ಬಲಿಯಾಗಿದೆ.
ಗುರುಪುರ ಬಿ.ವಿಲೇಜ್‌ನ ಟಿಬೆಟ್ ಕ್ಯಾಂಪಿನ ಪೆರಿಡಾನ್‌ರಿಗೆ ಸೇರಿದ ಜರ್ಸಿ ಹಸುವನ್ನು ಮೇಯಲು ಬಿಟ್ಟಿದ್ದಾಗ ಹುಲಿ ದಾಳಿ ನಡೆಸಿದೆ. ದಾಳಿ ವೇಳೆ ಟಿಬೆಟಿಯನ್ನರ ಕಿರುಚಾಟ ಕೇಳಿ ಹುಲಿ ಪರಾರಿಯಾಗಿದೆ. ಸ್ಥಳಕ್ಕೆ ವೀರನಹೊಸಳ್ಳಿ ವನ್ಯಜೀವಿ ವಲಯದ ಆರ್‌ಎಫ್‌ಒ ವಿನೋದ್‌ಗೌಡ, ಡಿಆರ್‌ಎಫ್‌ಒ ಸಹನಾ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.
ವರ್ಷದ ಹಿಂದಷ್ಟೆ ಹುಣಸೆಕಟ್ಟೆ ಹಳ್ಳದ ಕುರುಚಲು ಕಾಡಿನಲ್ಲಿ ನಾಗಾಪುರ ಪುನರ್ವಸತಿ ಕೇಂದ್ರದ ಆದಿವಾಸಿ ಯುವಕನನ್ನು ಕೊಂದಿದ್ದ ಸ್ಥಳದ ಹತ್ತಿರದ ಟಿಬೆಟ್ ಕ್ಯಾಂಪಿನಲ್ಲಿ ಮತ್ತೆ ಹುಲಿ ಕಾಣಿಸಿಕೊಂಡು, ಹಸುವನ್ನು ಭೇಟೆಯಾಡಿದೆ. ಇದೀಗ ಹೊಸೂರು ಕೊಡಗು ಕಾಲನಿ, ಗುರುಪುರ ಹಾಗೂ ನಾಗಾಪುರ ಪುನರ್ವಸತಿ ಕೇಂದ್ರದ ಜನರು ಹಾಗೂ ಟಿಬೆಟ್ಟಿಯನ್ನರು ಮತ್ತೆ ಹುಲಿ ಭೀತಿಯಿಂದ ಆತಂಕಗೊಂಡಿದ್ದಾರೆ. ಈ ಹುಲಿಯನ್ನು ಸೆರೆ ಹಿಡಿದು ಗ್ರಾಮಸ್ಥರ ಆತಂಕವನ್ನು ದೂರ ಮಾಡುವಂತೆ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net