ನ್ಯಾಯಾಲಯದಲ್ಲಿ ದಂಪತಿ ಮರುಮದುವೆ

 ನಂಜನಗೂಡು ತಾಲೂಕಿನ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ಒಂದಾದ ದಂಪತಿ. ನ್ಯಾಯಾಧೀಶೆ ಶ್ರುತಿ, ಎಂ.ಎ.ಷಣ್ಮುಖ, ಮುತ್ತುರಾಜು, ಎಸ್.ಶೇಖರ್ ಇದ್ದರು.
ನಂಜನಗೂಡು ತಾಲೂಕಿನ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ಒಂದಾದ ದಂಪತಿ. ನ್ಯಾಯಾಧೀಶೆ ಶ್ರುತಿ, ಎಂ.ಎ.ಷಣ್ಮುಖ, ಮುತ್ತುರಾಜು, ಎಸ್.ಶೇಖರ್ ಇದ್ದರು.
Published on
ನಂಜನಗೂಡು: ಕೌಟುಂಬಿಕ ಕಲಹದಿಂದ ದೂರವಾಗಲು ತೀರ್ಮಾನಿಸಿ ನಂಜನಗೂಡು ತಾಲೂಕಿನ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದ ದಂಪತಿ ಒಂದಾಗಿದ್ದಾರೆ.
ಹಾಗಿನವಾಳು ಗ್ರಾಮದ ಮನೋಜ್ ಹಾಗೂ ರಂಜಿತಾ ದಂಪತಿ 3 ವರ್ಷಗಳ ಹಿಂದೆ ದಾಂಪತ್ಯಕ್ಕೆ ಕಾಲಿಟ್ಟಿದ್ದರು. ಕೌಟುಂಬಿಕ ಕಲಹದಿಂದ ಒಂದು ವರ್ಷದಿಂದ ದಂಪತಿ ಮತ್ತು ಕುಟುಂಬದಲ್ಲಿ ಭಿನ್ನಾಭಿಪ್ರಾಯ ಉಂಟಾಗಿತ್ತು. ಹೀಗಾಗಿ ವಿಚ್ಛೇದನಕ್ಕೆ ನ್ಯಾಯಾಲಯದ ಮೆಟ್ಟಿಲೇರಿದ್ದ್ದರು.
ನ್ಯಾಯಾಧೀಶೆ ಸಿ.ಎಸ್.ಶ್ರುತಿ ಅವರು ವಿಚಾರಣೆ ನಡೆಸಿ ಪತ್ನಿ ರಂಜಿತಾಗೆ ಜೀವನಾಂಶ ನೀಡಲು ಅದೇಶ ನೀಡಿದ್ದರು. ಸರಿಯಾದ ಸಮಯಕ್ಕೆ ಪತಿ ಮನೋಜ್ ಜೀವನಾಂಶ ನೀಡದ ಹಿನ್ನೆಲೆಯಲ್ಲಿ ಮನೋಜ್‌ನನ್ನು ಪೋಲಿಸರ ವಶಕ್ಕೆ ನೀಡಲಾಯಿತು. ಕೆಲ ದಿನಗಳ ನಂತರ ನ್ಯಾಯಾಧೀಶರು ಸ್ವ ಇಚ್ಛೆಯಿಂದ ದಂಪತಿಯೊಂದಿಗೆ ಸಮಾಲೋಚನೆ ನಡೆಸಿ. ವಿಚ್ಛೇದನದ ನಿರ್ಧಾರದಿಂದ ಹಿಂದೆ ಸರಿದು ಒಂದಾಗುವಂತೆ ಮನವೊಲಿಸಿದರು. ನ್ಯಾಯಾಧೀಶರ ಸಲಹೆಗೆ ಒಪ್ಪಿದ ದಂಪತಿಗೆ ನ್ಯಾಯಲಯದ ಆವರಣದಲ್ಲಿ ಶನಿವಾರ ನ್ಯಾಯಾಧೀಶೆ ಶ್ರುತಿ ಮತ್ತು ವಕೀಲರ ಸಮ್ಮುಖದಲ್ಲಿ ಮರುಮದುವೆಯಾದರು.
ವಕೀಲರಾದ ಎಂ.ಎ.ಷಣ್ಮುಖ, ಮುತ್ತುರಾಜು, ಎಸ್.ಶೇಖರ್ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಸಿಬ್ಬಂದಿ ರಾಮಣ್ಣ ಅಕ್ಕಸಾಲಿ, ಎಚ್.ಕೆ.ಶಿವಪ್ಪ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net