ನಗರದ ಎಂ.ಜಿ.ರಸ್ತೆಯಲ್ಲಿ ಜೆಎಸ್‌ಎಸ್ ಆಸ್ಪತ್ರೆಯ ಮುಂಭಾಗ ಬಳಿಯಿಂದ ಪಾಲಿಕೆ ಅಧಿಕಾರಿಗಳು ಮತ್ತು ‘ಅಭಯ’ ತಂಡವು ಕಾರ್ಯಾಚರಣೆ ಆರಂಭಿಸಿತು. ಪಾದಚಾರಿ ಮಾರ್ಗದಲ್ಲಿ ಹೋಟೆಲ್, ಅಂಗಡಿ ಮಳಿಗೆಗಳ ಮುಂಭಾಗ ಇರಿಸಲಾಗಿದ್ದ ವಸ್ತುಗಳನ್ನು ತೆಗೆದು ಹಾಕಲಾಯಿತು. ನಾಮಫಲಕಗಳು, ಫ್ಲೆಕ್ಸ್, ಪೋಸ್ಟರ್, ಶಿಟ್‌ಗಳನ್ನೂ ಜಪ್ತಿ ಮಾಡಲಾಯಿತು. ಈ ವೇಳೆ ಪಾಲಿಕೆಯ ಅಧಿಕಾರಿಗಳೊಂದಿಗೆ ಕೆಲ ವರ್ತಕರು ವಾಗ್ವಾದ ನಡೆಸಿದರು.