ವಿಧಾನಸಭೆಯ ಜಂಟಿ ಅಧಿವೇಶನದಲ್ಲಿ ಗದ್ದಲ ವಿಚಾರ ಕುರಿತು ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ತಮ್ಮ ಶಾಸಕರಿಗೆ ಚಿತಾವಣೆ ಕೊಟ್ಟು ಸುಮ್ಮನೆ ನೋಡುತ್ತಿದ್ದಾರೆ. ಸಂಖ್ಯಾಬಲದ ಮದದಲ್ಲಿ ಕಾಂಗ್ರೆಸ್ ಈ ರೀತಿ ವರ್ತಿಸಿದೆ. ಪುಂಡ, ಪೋಕರಿ ತರಹ ಕಾಂಗ್ರೆಸ್ ಶಾಸಕರು ವರ್ತಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.