ಸಂತ ಜೋಸೆಫರ ಕಾಲೇಜಿಗೆ ಸಮಗ್ರ ಪ್ರಸಸ್ತಿ

ಹುಣಸೂರು ನಗರದ ಸಂತ ಜೋಸೆಫರ ಪಿಯು ಕಾಲೇಜಿನ ವಿದ್ಯಾರ್ಥಿಗಳು ತಾಲೂಕು ಮಟ್ಟದ ಪಿಯು ಕಾಲೇಜು ವಿಭಾಗದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗಿದ್ದಾರೆ.
ಹುಣಸೂರು ನಗರದ ಸಂತ ಜೋಸೆಫರ ಪಿಯು ಕಾಲೇಜಿನ ವಿದ್ಯಾರ್ಥಿಗಳು ತಾಲೂಕು ಮಟ್ಟದ ಪಿಯು ಕಾಲೇಜು ವಿಭಾಗದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗಿದ್ದಾರೆ.
Published on
ಹುಣಸೂರು: ಇತ್ತೀಚೆಗೆ ನಗರದ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಪದವಿಪೂರ್ವ ಕಾಲೇಜು ಮಟ್ಟದ ಕ್ರೀಡಾಕೂಟದಲ್ಲಿ ನಗರದ ಸಂತ ಜೋಸೆಫರ ಪಿಯು ಕಾಲೇಜು ಬಾಲಕಿಯರ ವಿಭಾಗ ಸಮಗ್ರ ಪ್ರಶಸ್ತಿಗೆ ಭಾಜನವಾಗಿದೆ.
ಬಾಲಕಿಯರ ಅಥ್ಲೆಟಿಕ್ಸ್ ವಿಭಾಗಲ್ಲಿ 100 ಮೀ.ಮತ್ತು 200 ಮೀ.ಓಟದಲ್ಲಿ ಹಂಸಪ್ರಿಯ ಪ್ರಥಮ ಸ್ಥಾನ ಗಳಿಸಿದ್ದಾರೆ. 1500 ಮೀ.ಓಟದಲ್ಲಿ ಅಶ್ವಿನಿ ದ್ವಿತೀಯ, 800 ಮೀ.ಓಟದಲ್ಲಿ ಆಶಾ ತೃತೀಯ ಸ್ಥಾನ ಹಾಗೂ 400 ಮೀ.ಓಟದಲ್ಲಿ ಸಿಂಚನಾ ದ್ವಿತೀಯ ಸ್ಥಾನ ಗಳಿಸಿದ್ದಾರೆ. 3000 ಮೀ.ಓಟದಲ್ಲಿ ಧನುಜಾ ಪ್ರಥಮ, ನಳಿನಿ ದ್ವಿತೀಯ, ಉದ್ದ ಜಿಗಿತ ಮತ್ತು ಎತ್ತರ ಜಿಗಿತದಲ್ಲಿ ಡಿ.ಅನನ್ಯಾ ತೃತೀಯಸ್ಥಾನ, ಗುಂಡು ಎಸೆತದಲ್ಲಿ ತನುಶ್ರೀ ತೃತೀಯ, ಡಿಸ್ಕಸ್ ಥ್ರೋನಲ್ಲಿ ತನುಶ್ರೀ ತೃತೀಯ, ಗುಂಪು ಆಟದಲ್ಲಿ 4ಗಿ100 ರಿಲೆಯಲ್ಲಿ ಪ್ರಥಮ, 4ಗಿ400 ರಿಲೇಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. 
ಇದಲ್ಲದೆ ಬಾಲಕಿಯರ ವಿಭಾಗದ ಥ್ರೋಬಾಲ್ ಪಂದ್ಯದಲ್ಲಿ ಪ್ರಥಮ, ವಾಲಿಬಾಲ್ ಪಂದ್ಯದಲ್ಲಿ ದ್ವಿತೀಯ ಸ್ಥಾನ ಗಳಿಸುವ ಮೂಲಕ ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. 
ಬಾಲಕರ ವಿಭಾಗ: ಬಾಲಕರ 300ಮೀ. ಓಟದಲ್ಲಿ ಶ್ರೇಯಸ್ ದ್ವಿತೀಯ ಸ್ಥಾನ, ಗುಂಡು ಎಸೆತದಲ್ಲಿ ಸೈಯದ್ರಿಯನ್ ತೃತೀಯ, ಡಿಸ್ಕಸ್ ಥ್ರೋನಲ್ಲಿ ಪ್ರಭಾಸ್ ದ್ವಿತೀಯ, ಜಾವಲಿನ್ ಎಸೆತದಲ್ಲಿ ದರ್ಶನ್ ದ್ವಿತೀಯ, ಉದ್ದ ಜಿಗಿತದಲ್ಲಿ ಅಜಿತ್ ದ್ವಿತೀಯ, 100 ಮೀ. ಓಟದಲ್ಲಿ ಅಕ್ಷಯ್ ತೃತೀಯ, 200 ಮೀ.ಓಟದಲ್ಲಿ ಅಜಿತ್ ದ್ವಿತೀಯ, ಟ್ರಿಪಲ್ ಜಂಪ್‌ನಲ್ಲಿ ಅಕ್ಷಯ್ ತೃತೀಯ, 4ಗಿ100 ರಿಲೇಯಲ್ಲಿ ದ್ವಿತೀಯ ಸ್ಥಾ 4ಗಿ400 ರಿಲೇಯಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ. ಬಾಲಕರ ಥ್ರೋಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. 
ಸಾಂಸ್ಕೃತಿಕ ಸ್ಫರ್ಧೆಯಲ್ಲೂ ಸಾಧನೆ: ಮೈಸೂರಿನ ಬಿಜಿಎಸ್ ಪಿಯು ಕಾಲೇಜಿನಲ್ಲಿ ಆಯೋಜನೆಗೊಂಡಿದ್ದ ಪಿಯು ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ. 
ಆಂಗ್ಲ ವಿಭಾಗದ ಪ್ರಬಂಧ ಸ್ಪರ್ಧೆಯಲ್ಲಿ ಧರಣಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಸಿಂಚನಾ ದ್ವಿತೀಯ ಸ್ಥಾನ, ಜಾನಪದ ಗೀತಗಾಯನ ಸ್ಪರ್ಧೆಯಲ್ಲಿ ಅದಿತಿ ಪ್ರಥಮ, ಚಿತ್ರಕಲೆಯಲ್ಲಿ ಎಂ.ಜೀವನ್ ಪ್ರಥಮ, ವಿಜ್ಞಾನ ಮಾದರಿ ತಯಾರಿಕೆಯಲ್ಲಿ ಮುಹಮದ್ ಬಲ್ಲಾಲ್ ಪ್ರಥಮ, ಕನ್ನಡ ಭಾಷಾ ಪ್ರಬಂಧದಲ್ಲಿ ಎಸ್.ಲಕ್ಷ್ಮೀ ಪ್ರಥಮ, ಕೃಪಾ ತೃತೀಯ ಸ್ಥಾನ ಗಳಿಸಿದ್ದಾರೆ. ಆಂಗ್ಲ ಭಾಷೆ ಚರ್ಚಾ ಸ್ಪರ್ಧೆಯಲ್ಲಿ ಧನಲಕ್ಷ್ಮೀ ದ್ವಿತೀಯ, ಕನ್ನಡ ವಿಭಾಗದಲ್ಲಿ ಹರ್ಷಿತಾ ದ್ವಿತೀಯ ಸ್ಥಾನ ಹಾಗೂ ಏಕಪಾತ್ರ ಅಭಿನಯದಲ್ಲಿ ವಿಶಾಲ್ ತೃತೀಯ ಸ್ಥಾನ ಗಳಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಯನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ತರಬೇತುದಾರರು ಅಭಿನಂದಿಸಿದ್ದಾರೆ.
.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net