ಆಸ್ಪತ್ರೆಯ ಆವರಣವನ್ನು ದಾಟಿ ಸಾರ್ವಜನಿಕರಿಗೆ ನೇರವಾಗಿ ಸಂದೇಶ ತಲುಪಿಸುವುದು ನಮ್ಮ ಉದ್ದೇಶವಾಗಿತ್ತು. ಈ ದೃಶ್ಯ ಕಲಾಕೃತಿಗಳು ಮತ್ತು ಜಾಗೃತಿ ಕಾರ್ಯಕ್ರಮಗಳ ಮೂಲಕ, ಜನರು, ವಿಶೇಷವಾಗಿ ಯುವ ಪೀಳಿಗೆ ಇಂತಹ ಹಾನಿಕಾರಕ ಅಭ್ಯಾಸಗಳಿಂದ ದೂರವಿದ್ದು, ಆರೋಗ್ಯಕರ ಆಯ್ಕೆ ಅಳವಡಿಸಿಕೊಳ್ಳಲು ಪ್ರೇರಿತರಾಗುತ್ತಾರೆ ಎಂದು ನಾವು ಭಾವಿಸಿದ್ದು, ಗೋಡೆ ಚಿತ್ರಗಳ ಹೊರತಾಗಿ ನಾವು ಮೈಸೂರು ಮತ್ತು ನೆರೆಯ ಜಿಲ್ಲೆಗಳ ವಿವಿಧ ಸಂಸ್ಥೆಗಳಲ್ಲಿ ಉಪನ್ಯಾಸಗಳು ಮತ್ತು ಶಿಬಿರ ಸಹ ಆಯೋಜಿಸಲಾಗಿದೆ ಎಂದು ವಿವರಿಸಿದರು.