ಭಕ್ತವೃಂದ: ನಗರದ ವಿಶ್ವಮಾನವ ಜೋಡಿ ರಸ್ತೆಯಲ್ಲಿರುವ ಡಾ.ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಶಿವಕುಮಾರ ಸ್ವಾಮೀಜಿ ಭಕ್ತವೃಂದದಿಂದ ಶ್ರೀಗಳ 7ನೇ ವರ್ಷದ ಪುಣ್ಯಸ್ಮರಣೆ ಆಚರಿಸಲಾಯಿತು. ಕೆಪಿಸಿಸಿ ಸದಸ್ಯ ನಜರ್‌ಬಾದ್ ನಟರಾಜ್, ನಗರಪಾಲಿಕೆ ಮಾಜಿ ಸದಸ್ಯ ಜಗದೀಶ್, ಭಕ್ತವೃಂದದ ಕೆ.ಆರ್.ದೀಪು, ರಜನೀಶ್, ತ್ರಿಶೂಲ್, ಗಿರೀಶ್, ರಾಜು, ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್, ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷ ಕಡಕೋಳ ಜಗದೀಶ್, ಎಸ್.ಎನ್.ರಾಜೇಶ್, ದೂರ ರಾಜಣ್ಣ, ಸತ್ಯಾನಂದ ವಿಟ್ಟು, ರಾಕೇಶ್, ಬಸವರಾಜ್, ಅಭಿಲಾಶ್ ಇದ್ದರು.