ಮಾದಕದ್ರವ್ಯ ಮುಕ್ತಗೊಳಿಸಲು ಸಾಮೂಹಿಕ ಶ್ರಮ ಅಗತ್ಯ

ಬಿಎಚ್‌ಐಒ ಆವರಣದಲ್ಲಿ  ಆಯೋಜಿಸಿದ್ದ ’ಡ್ರಗ್ಸ್ ಫ್ರೀ ಮೈಸೂರು’ ಜಾಗೃತಿ ಕಾರ್ಯಕ್ರಮಕ್ಕೆ ಡಿಸಿಪಿ ಸುಂದರ್ ರಾಜ್ ಚಾಲನೆ ನೀಡಿದರು. ಡಾ. ಅವಿನಾಶ್, ಡಾ. ವಿನಯ್ಕುಮಾರ್ ಮುಟ್ಟಗಿ, ಡಾ. ನಾಗೇಶ್ ಆರಾಧ್ಯ ಇನ್ನಿತರರಿದ್ದರು.
ಬಿಎಚ್‌ಐಒ ಆವರಣದಲ್ಲಿ ಆಯೋಜಿಸಿದ್ದ ’ಡ್ರಗ್ಸ್ ಫ್ರೀ ಮೈಸೂರು’ ಜಾಗೃತಿ ಕಾರ್ಯಕ್ರಮಕ್ಕೆ ಡಿಸಿಪಿ ಸುಂದರ್ ರಾಜ್ ಚಾಲನೆ ನೀಡಿದರು. ಡಾ. ಅವಿನಾಶ್, ಡಾ. ವಿನಯ್ಕುಮಾರ್ ಮುಟ್ಟಗಿ, ಡಾ. ನಾಗೇಶ್ ಆರಾಧ್ಯ ಇನ್ನಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಿಸಿಪಿ ಸುಂದರ್‌ರಾಜ್ ಅಭಿಮತ *
  • ಡ್ರಗ್ಸ್ ಫ್ರೀ ಮೈಸೂರು’ ಜಾಗೃತಿ ಕಾರ್ಯಕ್ರಮ

ಮೈಸೂರು: ನಗರವನ್ನು ಮಾದಕದ್ರವ್ಯ ಮುಕ್ತಗೊಳಿಸಲು ಪೊಲೀಸ್, ಆರೋಗ್ಯ, ಶಿಕ್ಷಣ ಇಲಾಖೆಗಳು ಹಾಗೂ ನಾಗರಿಕ ಸಮಾಜದ ಸಾಮೂಹಿಕ ಶ್ರಮ ಅಗತ್ಯವಾಗಿದೆ ಎಂದು ಡಿಸಿಪಿ ಸುಂದರ್‌ರಾಜ್ ತಿಳಿಸಿದರು.

ಹೆಬ್ಬಾಳದ ಭಾರತ್ ಹಾಸ್ಪಿಟಲ್ ಆ್ಯಂಡ್ ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿ (ಬಿಎಚ್‌ಐಒ), ಹಾಗೂ ಸೂಪರ್ ಹಿಟ್ಸ್ 93.5 ರೆಡ್ ಎಫ್‌ಎಂ ವತಿಯಿಂದ ಸೇಂಟ್ ಫಿಲೋಮಿನಾ ಕಾಲೇಜು, ಚಿರಾಗ್ ಆ್ಯಡ್ಸ್ ಆ್ಯಂಡ್ ಇವೆಂಟ್ಸ್ ಹಾಗೂ ’ಆಸ್ಕ್ ಮೈಸೂರು’ ಸಹಯೋಗದೊಂದಿಗೆ ಬಿಎಚ್‌ಐಒ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ’ಡ್ರಗ್ಸ್ ಫ್ರೀ ಮೈಸೂರು’ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. 
ಮಾದಕವಸ್ತುಗಳ ಸೇವನೆಯು ಗಂಭೀರ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಪರಿಣಾಮ ಬೀರುತ್ತದೆ. ಸ್ನೇಹಿತರ ಒತ್ತಡವೇ ಯುವ ಜನರು ಮಾದಕ ದ್ರವ್ಯಗಳತ್ತ ಆಕರ್ಷಿತರಾಗಲು ಮುಖ್ಯ ಕಾರಣ. 
ಯುವಜನರು ಇಂತಹ ಪ್ರಚೋದನೆ ತಿರಸ್ಕರಿಸಬೇಕು ಮತ್ತು ಮಾದಕದ್ರವ್ಯ ಬಳಕೆಗೆ ಪ್ರೇರೇಪಿಸುವ ಅಥವಾ ಮಾರಾಟದಲ್ಲಿ ತೊಡಗಿರುವವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
 ಮಾದಕದ್ರವ್ಯ ತಡೆಗೆ ನಿರಂತರ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ ಸಮಾಜವನ್ನು ಡ್ರಗ್ಸ್ ಮುಕ್ತಗೊಳಿಸುವುದು ಪೊಲೀಸರ ಜವಾಬ್ದಾರಿ ಮಾತ್ರವಲ್ಲ.
 ಆರೋಗ್ಯ ಮತ್ತು ಶಿಕ್ಷಣ ಇಲಾಖೆಗಳು, ಸಮುದಾಯ ಸಂಸ್ಥೆಗಳು ಹಾಗೂ ಸಾರ್ವಜನಿಕರು ಜಾಗೃತಿ ಮೂಡಿಸಲು ಒಟ್ಟಾಗಿ ಶ್ರಮಿಸಬೇಕು. ಶಾಲೆ ಮತ್ತು ಕಾಲೇಜುಗಳು ಯುವಕರಿಗೆ ಮಾದಕ ದ್ರವ್ಯದ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಬೇಕು ಎಂದು ಹೇಳಿದರು.
ಬಿಎಚ್‌ಐಒ ಮುಖ್ಯ ವೈದ್ಯಕೀಯ ಆಂಕಾಲಜಿಸ್ಟ್ ಡಾ.ಅವಿನಾಶ್ ಮಾತನಾಡಿ, ಮಾದಕದ್ರವ್ಯಗಳ ವಿರುದ್ಧದ ಹೋರಾಟವು ಕೇವಲ ಒಂದು ದಿನದ ಕಾರ್ಯಕ್ರಮಕ್ಕೆ ಸೀಮಿತವಾಗದೆ ಸಾಮಾಜಿಕ ಚಳವಳಿಯಾಗಬೇಕು ಎಂದು ಹೇಳಿದರು. 
ಹಿರಿಯ ವಿಕಿರಣ ಆಂಕಾಲಜಿಸ್ಟ್ ಡಾ.ವಿನಯ್‌ಕುಮಾರ್ ಮುಟ್ಟಗಿ ಮಾತನಾಡಿ, ವ್ಯಸನವು ಹೆಚ್ಚಾಗಿ ಚಿಕ್ಕ ವಯಸ್ಸಿನಲ್ಲೇ ಆರಂಭವಾಗುವುದರಿಂದ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಜಾಗೃತಗೊಳಿಸುವುದು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ನೆರವಾಗುತ್ತದೆ ಎಂದರು.
ಜಿಲ್ಲಾ ಮಾನಸಿಕ ಆರೋಗ್ಯ ಅಧಿಕಾರಿ ಡಾ.ನಾಗೇಶ್ ಆರಾಧ್ಯ ಮಾತನಾಡಿ, ಶೈಕ್ಷಣಿಕ ಅಥವಾ ಆರ್ಥಿಕ ಹಿನ್ನೆಲೆಯ ಹಿತಾಸಕ್ತಿಯಿಲ್ಲದೆ ವ್ಯಸನವು ಯಾರನ್ನಾದರೂ ಆವರಿಸಬಹುದು. ಜಿಲ್ಲಾ ಮಾನಸಿಕ ಆರೋಗ್ಯ ತಂಡವು ಉಚಿತ ಚಿಕಿತ್ಸೆ ಮತ್ತು ಕೌನ್ಸೆಲಿಂಗ್ ನೀಡುತ್ತಿದ್ದು, ಮಾನಸಿಕ ಸಂಕಟದಲ್ಲಿರುವವರು 14416 ಸಹಾಯವಾಣಿಯನ್ನು ಸಂಪರ್ಕಿಸಬಹುದು ಎಂದರು.
ಡಾ. ಅಭಿಲಾಷ್, ಡಾ. ಸಂತೋಷ್, ಸಿಒಒ ಗೌತಮ್ ಧಮೇರ್ಲ, ಸಮಾಜ ಸೇವಕ ವಿರಾಜ್, ವಿವೇಕ್, ಫಾದರ್ ಪ್ರಸಾದ್, ಫಾದರ್ ರೋಷನ್, ಸೇಂಟ್ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ರವಿ ಹಾಗೂ ರೆಡ್ ಎಫ್‌ಎಂ ತಂಡದ ಸದಸ್ಯರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net