ಆಧುನಿಕತೆ ಭರಾಟೆಯಲ್ಲಿ ಮರೆಯಾಗುತ್ತಿದೆ ನಾಗರಿಕತೆ: ನಿವೃತ್ತ ಸಹ ಪ್ರಾಧ್ಯಾಪಕಿ ಡಾ.ಎಸ್.ಪಿ.ಉಮಾದೇವಿ ಬೇಸರ

ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ವಿಶ್ವ ಸ್ತನ್ಯಪಾನ ಕಾರ್ಯಕ್ರಮವನ್ನು ಡಾ.ಎಸ್.ಪಿ.ಉಮಾದೇವಿ ಉದ್ಘಾಟಿಸಿದರು. ಡಾ. ಸಿ.ಪಿ.ಮಧು, ಡಾ.ಡಿ.ನಾರಾಯಣಪ್ಪ, ಡಾ.ಪಿ.ಶಿವು, ಡಾ.ಡಿ.ಶ್ರೀನಿವಾಸಮೂರ್ತಿ, ಡಾ.ಎಸ್. ಮಮತಾ, ಡಾ. ಎ. ಸೋನಿಯಾ ಮಂದಪ್ಪ, ಅಂಶು ಅಗರವಾಲ್, ಡಾ.ಅನುಷಾ, ಡಾ. ದೀಪ್ತಿ ತಾಂಡವೇಶ್ವರ್ ಇದ್ದರು.
ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ವಿಶ್ವ ಸ್ತನ್ಯಪಾನ ಕಾರ್ಯಕ್ರಮವನ್ನು ಡಾ.ಎಸ್.ಪಿ.ಉಮಾದೇವಿ ಉದ್ಘಾಟಿಸಿದರು. ಡಾ. ಸಿ.ಪಿ.ಮಧು, ಡಾ.ಡಿ.ನಾರಾಯಣಪ್ಪ, ಡಾ.ಪಿ.ಶಿವು, ಡಾ.ಡಿ.ಶ್ರೀನಿವಾಸಮೂರ್ತಿ, ಡಾ.ಎಸ್. ಮಮತಾ, ಡಾ. ಎ. ಸೋನಿಯಾ ಮಂದಪ್ಪ, ಅಂಶು ಅಗರವಾಲ್, ಡಾ.ಅನುಷಾ, ಡಾ. ದೀಪ್ತಿ ತಾಂಡವೇಶ್ವರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹಿಂದಿನವರ ಜ್ಞಾನ ಇವತ್ತಿನವರ ವಿಜ್ಞಾನವಾಗಿದೆ. ಆದರೆ ಹಿಂದಿನವರು ಹಾಕಿಕೊಟ್ಟ ದಾರಿಯನ್ನು ಮರೆಯಲಾಗುತ್ತಿದೆ
  • ಹಿಂದೆ ನಮ್ಮ ಪೂರ್ವಜರು ಮಕ್ಕಳಿಗೆ ಎರಡು ವರ್ಷಗಳವರೆಗೂ ಎದೆಹಾಲುನ್ನು ಉಣಿಸುತ್ತಿದ್ದರು

ಮೈಸೂರು:

ಆಧುನೀಕತೆಯ ಭರಾಟೆಯಲ್ಲಿ ನಾವು ನಾಗರಿಕತೆಯನ್ನೇ ಮರೆಯುತ್ತಿದ್ದೇವೆ. ಹಿಂದಿನವರ ಜ್ಞಾನ ಇವತ್ತಿನ ವಿಜ್ಞಾನ ಎನ್ನುವುದು ಸಾಬೀತಾಗಿದೆ ಎಂದು ಜೆಎಸ್‌ಎಸ್ ಮಹಿಳಾ ಕಾಲೇಜಿನ ನಿವೃತ್ತ ಸಹ ಪ್ರಾಧ್ಯಾಪಕಿ ಡಾ.ಎಸ್.ಪಿ.ಉಮಾದೇವಿ ಹೇಳಿದರು.

ಜೆಎಸ್‌ಎಸ್ ಆಸ್ಪತ್ರೆಯ ಮಕ್ಕಳ ಚಿಕಿತ್ಸಾ ವಿಭಾಗ, ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್, ಮೈಸೂರು, ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರಜ್ಞರ ಸಂಘ ಮೈಸೂರು ಹಾಗೂ ಇನ್ನರ್ ವೀಲ್ (ಗೋಲ್ಡ್)ನಿಂದ ನಗರದ ಜೆಎಸ್‌ಎಸ್ ಆಸ್ಪತ್ರೆಯ ಶ್ರೀರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ಯೋಜಿಸಿದ್ದ ವಿಶ್ವ ಸ್ತನ್ಯಪಾನ ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿದರು.
ವಿಶ್ವ ಸ್ತನ್ಯಪಾನ ವಾರ-2026ರ ಧ್ಯೇಯವ್ಯಾಕ್ಯ ಸುಸ್ಥಿರ ಜೀವನದ ಆರಂಭಕ್ಕಾಗಿ ತಾಯಿಯ ಎದೆಹಾಲು, ಉತ್ತಮ ಪದ್ಧತಿಯನ್ನು ಇನ್ನಷ್ಟು ಬಲಪಡಿಸೋಣ ಎನ್ನುವುದು ಅರ್ಥಪೂರ್ಣ ಉದ್ದೇಶ ಹೊಂದಿದೆ. ಆಧುನೀಕತೆಯ ಭರಾಟೆಯಲ್ಲಿ ನಾವು ನಾಗರಿಕತೆಯನ್ನು ಮರೆಯುತ್ತಿದ್ದೇವೆ, ಹಿಂದಿನವರ ಜ್ಞಾನ ಇವತ್ತಿನವರ ವಿಜ್ಞಾನವಾಗಿದೆ. ಆದರೆ ಹಿಂದಿನವರು ಹಾಕಿಕೊಟ್ಟ ದಾರಿಯನ್ನು ಮರೆಯಲಾಗುತ್ತಿದೆ ಎಂದರು.
ಮನೆಮದ್ದು ಭಾರತೀಯ ಸಂಸ್ಕೃತಿ ಮತ್ತು ನಾಗರಿಕತೆಯಿಂದ ಬಂದಿದೆ. ಆದ್ದರಿಂದ ಹಿಂದೆ ನಮ್ಮ ಪೂರ್ವಜರು ಮಕ್ಕಳಿಗೆ ಎರಡು ವರ್ಷಗಳವರೆಗೂ ಎದೆಹಾಲುನ್ನು ಉಣಿಸುತ್ತಿದ್ದರು. ಇದರಿಂದ ಮಕ್ಕಳ ದೇಹದಲ್ಲಿ ಪೌಷ್ಟಿಕತೆ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಾಗಿತ್ತು. ಅಲ್ಲದೆ ಹಾಲುಣಿಸುವ ಸಂದರ್ಭದಲ್ಲಿ ತಾಯಿ ಮತ್ತು ಮಗುವಿನ ದೈಹಿಕ ಮತ್ತು ಭಾವನಾತ್ಮಕ ಬೆಸುಗೆ ಜತೆಗೆ ಹಾಲುಣಿಸುವುದರಿಂದ ತಾಯಿಗೆ ಆತ್ಮತೃಪ್ತಿ ಸಿಗುತಿತ್ತು ಎಂದರು.
ಜೆಎಸ್‌ಎಸ್ ಆಸ್ಪತ್ರೆಯ ನಿರ್ದೇಶಕಿ ಡಾ.ಸಿ.ಪಿ.ಮಧು ಮಾತನಾಡಿ, ಪ್ರತಿ ವರ್ಷ ನಾವು ಸ್ತನಪಾನ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದರೂ ಅಂಕಿಅಂಶಗಳ ಪ್ರಕಾರ ಸಾಧನೆಯಲ್ಲಿ ನಾವು ಹಿಂದುಳಿದಿದ್ದೇವೆ. ಸ್ತನ್ಯಪಾನ ಸಪ್ತಾಹಕ್ಕೆ ಸಮುದಾಯ ಮತ್ತು ಕುಟುಂಬದ ಬೆಂಬಲ ಬಹಳ ಮುಖ್ಯ. ಆದ್ದರಿಂದ ಈಗ ಎಲ್ಲ ಕಡೆ ತಾಯಂದಿರು ತಮ್ಮ ಮಗುವಿಗೆ ಹಾಲುಣಿಸಲು ವೃತ್ತಿನಿರತ ಮಹಿಳೆಯರಿಗೆ ಕರ್ತವ್ಯ ನಿರ್ವಹಿಸುವ ಕಚೇರಿಗಳಲ್ಲಿ ಹಾಲುಣಿಸುವ ಕೇಂದ್ರಗಳನ್ನು ತೆರೆಯಲಾಗಿದೆ. ಉದ್ಯೋಗಸ್ತ ಮಹಿಳೆಯರು ಮತ್ತು ಗ್ರಾಮೀಣ ಭಾಗದಲ್ಲಿ ಇನ್ನು ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಅಭಿಪ್ರಾಯಪಟ್ಟರು.
ಜೆಎಸ್‌ಎಸ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಡಿ.ನಾರಾಯಣಪ್ಪ ಮಾತನಾಡಿ, ಐದು ವರ್ಷದ ಹಿಂದೆ ಭಾರತದಲ್ಲಿ ಸ್ತನ್ಯಪಾನ ಪ್ರಮಾಣವು ಸಮೀಕ್ಷೆಯ ಪ್ರಕಾರ ಶೇ.63.7 ರಷ್ಟು ಇತ್ತು. ಇತ್ತೀಚಿನ ವರದಿಗಳ ಪ್ರಕಾರ ಈ ಪ್ರಮಾಣವು ಕಡಿಮೆಯಾಗಿದ್ದು ಈಗ ಶೇ.56 ರಷ್ಟಿದೆ, ಆದ್ದರಿಂದ ಗರ್ಭಿಣಿಯಲ್ಲಿರುವಾಗಲೇ ಸ್ತನ್ಯಪಾನದ ಬಗ್ಗೆ ಜಾಗೃತಿ ಮತ್ತು ಮನವರಿಕೆ ಹಾಗೂ ಮಹತ್ವವನ್ನು ತಿಳಿಸಬೇಕು ಎಂದರು.
ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ (ಐಎಪಿ) ಮೈಸೂರು ಜಿಲ್ಲೆಯ ಅಧ್ಯಕ್ಷ ಡಾ.ಪಿ.ಶಿವು ಮಾತನಾಡಿ, ಪ್ರಾಣಿಗಳು ತನ್ನ ಮರಿಗಳಿಗೆ ಶೇ100 ರಷ್ಟು ಹಾಲನ್ನು ಕುಡಿಸುತ್ತವೆ. ಆದರೆ ಬುದ್ಧಿವಂತರಾದ ಮನುಷ್ಯರು ತಮ್ಮ ಮಕ್ಕಳಿಗೆ ಹಾಲುಣಿಸಲು ಹಿಂದೆಟ್ಟು ಹಾಕುತ್ತಿದ್ದಾರೆ. ಆಗಾಗಿ ನಾವು ಪ್ರಾಣಿಗಳಿಗಿಂತಲೂ ಕಡೆಯಾಗಬಾರದು. ತಾಯಿಯು ತನ್ನ ಮಗುವಿಗೆ ಕನಿಷ್ಟ 6 ತಿಂಗಳ ಕಾಲ ಎದೆಹಾಲನ್ನು ನೀಡಬೇಕು ಎಂದು ಮನವಿ ಮಾಡಿದ್ದರು.
ಜೆಎಸ್‌ಎಸ್ ಆಸ್ಪತ್ರೆಯ ಮಕ್ಕಳ ವಿಭಾಗದ ವೈದ್ಯೆ ಡಾ.ದೀಪ್ತಿ ತಾಂಡವೇಶ್ವರ್, ಜೆಎಸ್‌ಎಸ್ ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಡಿ.ಶ್ರೀನಿವಾಸಮೂರ್ತಿ, ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥೆ ಡಾ.ಎಸ್.ಮಮತಾ, ಮೈಸೂರು ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ಸಂಘದ ಅಧ್ಯಕ್ಷೆ ಡಾ.ಎ.ಸೋನಿಯಾ ಮಂದಪ್ಪ, ಇನ್ನರ್‌ವೀಲ್ ಕ್ಲಬ್ ಆಫ್ ಮೈಸೂರು (ಗೋಲ್ಡ್) ಅಧ್ಯಕ್ಷೆ ಅಂಶು ಅಗರವಾಲ್, ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಕಾರ್ಯದರ್ಶಿ ಡಾ.ಅನುಷಾ, ಜೆಎಸ್‌ಎಸ್ ಆಸ್ಪತ್ರೆಯ ನರ್ಸಿಂಗ್ ಸೇವೆಗಳ ಮುಖ್ಯಸ್ಥೆ ಜಾನೆಟ್ ಮಥಿಯಾಸ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net