ಶಿಬಿರವನ್ನು ಶಿವಾಜಿ ಸೂರತ್ಕಲ್ ಮತ್ತು ಶಿವಾಜಿ ಸೂರತ್ಕಲ್-2 ಚಿತ್ರಗಳಿಂದ ಖ್ಯಾತರಾಗಿರುವ ಕನ್ನಡ ಚಲನಚಿತ್ರ ನಿರ್ದೇಶಕ ಆಕಾಶ್ ಶ್ರಿವತ್ಸ ನಡೆಸಿಕೊಡಲಿದ್ದಾರೆ. ಮೈಸೂರಿನಲ್ಲೇ ನೆಲೆಸಿರುವ ಯೋಗ ಶಿಕ್ಷಕಿ ಮತ್ತು ನಟಿ ಸ್ಯಾಂಡಿ ಹಿಗ್ಗಿನ್ಸ್ ನೇತೃತ್ವ ವಹಿಸಲಿದ್ದಾರೆ. ಸಿನೆಮಾ ಆಸನ ಶಿಬಿರ ಸಿನಿಮಾ ನಿರ್ಮಾಣ, ಯೋಗಾಭ್ಯಾಸ, ಇದರೊಡನೆ ನೇರ ರಾಗ ಸಂಯೋಜನೆ ಜೋಡಿಸಿ, ಭಾವನೆ, ಲಯ ನೆಲೆಯಲ್ಲಿ ಸೃಜನಶೀಲತೆ ಅನ್ವೇಷಿಸುವ ಉದ್ದೇಶ ಹೊಂದಿದೆ. ಪ್ರಾಚೀನ ಜ್ಞಾನ ಮತ್ತು ಆಧುನಿಕ ಸಿನಿಮಾ ನಡುವೆ ಸೇತುವೆಯಾಗಿಸಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.