ವಿವಿಧ ಜಿಲ್ಲೆಗಳ ವಿವಿಧ ಕ್ಷೇತ್ರದ ಸಾಧಕರಾದ ಮೈಸೂರಿನ ಜೆ.ಎಸ್.ಎಸ್. ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಎನ್. ಸಂತೋಷ್ ಕುಮಾರ್, ಸಾಹಿತಿ ಮತ್ತು ಉಪನ್ಯಾಸಕರಾದ ನಾಗಮಂಗಲದ ಡಾ. ನೀ.ಗೂ. ರಮೇಶ್ ಮತ್ತು ತಿಪಟೂರಿನ ಗಂಗಾಧರ ಎಸ್. ಕದ್ರಿ, ಮೈಸೂರಿನ ಕುವೆಂಪು ನಗರದ ಬಿಜಿಎಸ್ ಬಿ.ಇಡಿ. ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಹಾಗೂ ಪುಸ್ತಕ ಸಂಗ್ರಾಹಕ ಡಾ.ಹೆಚ್.ಬಿ. ಬೆಟ್ಟಸ್ವಾಮಿ, ನಂಜನಗೂಡಿನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್.ಎನ್. ಚಂದ್ರಶೇಖರ ಬಾಬು, ತಿಪಟೂರಿನ ಟೈಮ್ಸ್ ಪಿಯು ಕಾಲೇಜಿನ ಆಡಳಿತಾಧಿಕಾರಿ. ಕೆ.ಎಲ್. ಅನೂಪ್, ಹೆಚ್.ಡಿ. ಕೋಟೆಯ ಸೇಂಟ್ ಮೇರಿಸ್ ಪಿಯು ಕಾಲೇಜಿನ ಪ್ರಾಂಶುಪಾಲ ಸಂತೋಷ್ ಕುಮಾರ್, ಕೆ.ಆರ್. ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಎಂ. ಕೃಷ್ಣ ಬನ್ನಹಳ್ಳಿ, ಮಳವಳ್ಳಿಯ ಶಾಂತಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ಸಿ. ಅನಿತಾ ಅವರು ರಾಜ್ಯ ಮಟ್ಟದ 'ಸ್ವಾಮಿ ವಿವೇಕಾನಂದ ಸಮಾಜಸೇವಾ ಪ್ರಶಸ್ತಿ'ಗೆ ಆಯ್ಕೆಯಾಗಿರುವ ಗಣ್ಯ ಸಾಧಕರಾಗಿದ್ದು, ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸುವರು.