ಕಾರಾಗೃಹದಲ್ಲಿ ಮಕ್ಕಳಿಂದ ನಾಟಕ ಪ್ರದರ್ಶನ

ಕೆ.ಆರ್.ನಗರ ದ ಉಪಕಾರಾಗೃಹದಲ್ಲಿ ಬಾ ಸೃಷ್ಟಿ ತಂಡದ ಪುಟಾಣಿಗಳು ಆಮೆಕಥೆ ಎನ್ನುವ ನಾಟಕ ಪ್ರದರ್ಶಿಸಿದರು.
ಕೆ.ಆರ್.ನಗರ ದ ಉಪಕಾರಾಗೃಹದಲ್ಲಿ ಬಾ ಸೃಷ್ಟಿ ತಂಡದ ಪುಟಾಣಿಗಳು ಆಮೆಕಥೆ ಎನ್ನುವ ನಾಟಕ ಪ್ರದರ್ಶಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಕೆರೆ ಮತ್ತು ನದಿಗಳ ಸಂರಕ್ಷಣೆ ಉದ್ದೇಶ
ಹುಣಸೂರು : ಸಮಾಜದಲ್ಲಿ ವಿವಿಧ ರೀತಿಯ ತಪ್ಪುಗಳನ್ನು ಮಾಡಿ ಜೈಲುಪಾಲದವರಿಗೆ ಪುಟಾಣಿ ಮಕ್ಕಳಿಂದ ಪರಿಸರ ಜಾಗೃತಿ ಕುರಿತಾದ ನಾಟಕ ಪ್ರದರ್ಶನ.. ನಾಟಕ ನೋಡಿ ಸಂತಸಗೊಂಡ ಕಾರಾಗೃಹವಾಸಿಗಳು..
ಇತ್ತೀಚಿಗೆ ಕೆ.ಆರ್.ನಗರದ ಉಪಕಾರಾಗೃಹದಲ್ಲಿ ಹುಣಸೂರು ತಾಲೂಕು ಮುಳ್ಳೂರು ಗ್ರಾಮದ ಬಾ ಸೃಷ್ಟಿ ತಂಡದ ಪುಟಾಣಿಗಳು ಆಮೆಕಥೆ ಎನ್ನುವ ನಾಟಕ ಪ್ರದರ್ಶಿಸಿದರು. ಮುಖ್ಯವಾಹಿನಿಯಲ್ಲಿರುವ ವೇಳೆ ನಮ್ಮೆಲ್ಲರ ಜವಾಬ್ದಾರಿಯನ್ನು ಮುಗ್ಧ ಮಕ್ಕಳು ನಾಟಕದ ಮೂಲಕ ಪ್ರದರ್ಶಿಸಿದ್ದನ್ನು ಕಂಡು ಕೆಲಕಾಲ ಆಲೋಚನೆಗೊಳಗಾದ ಕಾರಾಗೃಹವಾಸಿಗಳು. ಆಮೆಕಥೆ ನಾಟಕದಲ್ಲಿ ಕೆರೆ ಮತ್ತು ನದಿಗಳ ಸಂರಕ್ಷಣೆಯನ್ನು ಉದ್ದೇಶವಾಗಿರಿಸಿಕೊಂಡು ಮಾನವನು ಪ್ಲಾಸ್ಟಿಕ್ ಮತ್ತು ತ್ಯಾಜ್ಯ ವಸ್ತುಗಳನ್ನು ಹಾಕಿ ನೀರನ್ನು ಕಲುಷಿತ ಮಾಡಿ ಅಲ್ಲಿ ವಾಸಿಸುತ್ತಿರುವ ಜಲಚರ ಜೀವ ರಾಶಿಗಳು ಉಸಿರುಗಟ್ಟುವ ವಾತಾವರಣವನ್ನು ಸೃಷ್ಟಿಸಬಾರದು. ಕೆರೆ ಮತ್ತು ನದಿಗಳ ಸಂರಕ್ಷಣೆ ಮತ್ತು ಅಲ್ಲಿ ವಾಸಿಸುತ್ತಿರುವ ಜಲಚರ ಜೀವ ರಾಶಿಗಳ ಸಂರಕ್ಷಣೆ ಮಾಡಬೇಕೆಂಬ ಸಂದೇಶವನ್ನು ನಾಟಕ ನೀಡಿದೆ. ನಾಟಕದ ರಚನೆ ಐ.ಕೆ.ಬೋಳುವಾರು ಮಾಡಿದ್ದು, ಗೀತಾ ಮೋಹಿತೆ ನಿರ್ದೇಶನ, ಚೇತನ್ ಜಗತಾಪ್ ಸಹನಿರ್ದೇಶನ ಹಾಗೂ ಅನುಷ್ ಶೆಟ್ಟಿ ಸಂಗೀತ ನೀಡಿದ್ದಾರೆ.
ಕೆ .ಆರ್.ನಗರ ಉಪ ಕಾರಾಗೃಹದ ಅಧೀಕ್ಷಕ ಸಿ.ಜೆ.ರಘುಪತಿ, ಕಾರಾಗೃಹದ ಸಿಬ್ಬಂದಿ ವರ್ಗ ಹಾಜರಿದ್ದರು.
ಮುಳ್ಳೂರು ಶಾಲೆಯ ವಿದ್ಯಾರ್ಥಿಗಳಾದ ಮೇಘಬಾಯಿ, ಶರ್ಮಿಳಾ, ಚೈತ್ರಾ, ಕುಸುಮಾ, ಪೂರ್ವಜ್, ಎಂಎಸ್ ಚೈತ್ರಾ, ಸಗನ್, ಎಂ.ಎಸ್. ಮಾನಸ ಸಾನ್ವಿ, ಡಿಂಪಲ್ ಲಕ್ಷ್ಮಿ, ಧನುಷ್, ಲಕ್ಷ್ಮಣರಾವ್ ನಿಂಬಲ್ಕರ್,ರಾಹುಲ್ ರಾವ್ ನಿಂಬಾಲ್ಕರ್, ದಿವ್ಯಾ, ರೋಹಿತ್ ರಾವ್ ಜಗತಾಪ್ ಅಭಿನಯಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net