ಛತ್ರಪತಿ ಶಿವಾಜಿ ಯುವ ಸಮೂಹಕ್ಕೆ ಸ್ಫೂರ್ತಿ

ನಗರದ ಕಲಾಮಂದಿರದಲ್ಲಿ ಆಯೋಜಿಸಿದ್ದ ಛತ್ರಪತಿ ಶಿವಾಜಿ ಜಯಂತಿಯನ್ನು ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಉದ್ಘಾಟಿಸಿದರು. ಡಾ.ಆರ್. ಚಲಪತಿ, ಶ್ರೀ ಗಜಾನನ ಸ್ವಾಮೀಜಿ, ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ,  ಡಾ.ಎಂ.ಡಿ. ಸುದರ್ಶನ್, ನಾಗೇಂದ್ರ ರಾವ್ ಅವತಾಡೆ, ಎಂ.ಎನ್. ತುಕರಾಮ್ ರಾವ್ ಗಾಡೇಕರ್, ಗಣೇಶ್ ರಾವ್ ಸಂಕಪಾಳ್ ಇದ್ದರು.
ನಗರದ ಕಲಾಮಂದಿರದಲ್ಲಿ ಆಯೋಜಿಸಿದ್ದ ಛತ್ರಪತಿ ಶಿವಾಜಿ ಜಯಂತಿಯನ್ನು ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಉದ್ಘಾಟಿಸಿದರು. ಡಾ.ಆರ್. ಚಲಪತಿ, ಶ್ರೀ ಗಜಾನನ ಸ್ವಾಮೀಜಿ, ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ, ಡಾ.ಎಂ.ಡಿ. ಸುದರ್ಶನ್, ನಾಗೇಂದ್ರ ರಾವ್ ಅವತಾಡೆ, ಎಂ.ಎನ್. ತುಕರಾಮ್ ರಾವ್ ಗಾಡೇಕರ್, ಗಣೇಶ್ ರಾವ್ ಸಂಕಪಾಳ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಅಭಿಮತ
ಮೈಸೂರು: ಛತ್ರಪತಿ ಶಿವಾಜಿ ಮಹಾರಾಜರು ಹಿಂದೂ ಧರ್ಮಕ್ಕೆ ನೀಡಿದ ಕೊಡುಗೆಗಳನ್ನು, ನಾವು ಸಮಾಜದಲ್ಲಿ ಮುಂದಿನ ಪೀಳಿಗೆಗೆ ಬಿತ್ತರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಹೇಳಿದರು.
ಜಿಲ್ಲಾಡಳಿತ ಮೈಸೂರು, ಕನ್ನಡ ಸಂಸ್ಕೃತಿ ಇಲಾಖೆ, ನಗರ ಪಾಲಿಕೆ ಹಾಗೂ ಛತ್ರಪತಿ ಶಿವಾಜಿ ಜಯಂತ್ಯುತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ನಗರದ ಕಲಾಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಾಲೆಗಳಲ್ಲಿ ಮಕ್ಕಳು ಶಿವಾಜಿ ಬಗ್ಗೆ ಹೆಚ್ಚೆಚ್ಚು ತಿಳಿದುಕೊಳ್ಳಬೇಕು. ಶಿವಾಜಿ ಅವರಲ್ಲಿ ರಾಷ್ಟ್ರ ಪ್ರೇಮ, ಧರ್ಮ ರಕ್ಷಣೆ, ಶೌರ್ಯ ಅಪಾರವಾಗಿತ್ತು. ಇದು ಇಂದಿನ ಯುವ ಸಮೂಹಕ್ಕೆ ಸ್ಫೂರ್ತಿಯಾಗಿದೆ ಎಂದರು.
ಛತ್ರಪತಿ ಶಿವಾಜಿ ವರ್ಚಸ್ಸು, ಶೌರ್ಯ ಕೇಳಿದರೆ ಸಾಕು ಮೈ ರೋಮಾಂಚನವಾಗುತ್ತದೆ. ಅವರ ಬಗ್ಗೆ ಅವರ ಪರಾಕ್ರಮದ ಬಗ್ಗೆ ಹೆಚ್ಚು ಚಲನಚಿತ್ರ ತಯಾರಾಗುತ್ತಿರುವುದು ಖುಷಿಯ ಸಂಗತಿ. ಯುವಸಮೂಹ ಅವರ ಆದರ್ಶಗಳನ್ನು ಪಾಲಿಸಬೇಕು ಎಂದು ಕಿವಿಮಾತು ಹೇಳಿದರು. ಎಂದರು.
ಪ್ರತಿಯೊಬ್ಬರ ಮನೆಮನದಲ್ಲೂ ಶಿವಾಜಿ ನೆಲೆಸಿದ್ದಾರೆ. ನಾನು ಸಹ ಶಿವಾಜಿಯ ಅನುಯಾಯಿ. ನಾನು ಸೈನ್ಯದಲ್ಲಿ ನೀಡಿದ ದೇಶ ಸೇವೆಗೆ ಶಿವಾಜಿ ಸ್ಪೂರ್ತಿ. ಇವತ್ತು ಸಮಾಜದಲ್ಲಿ ಸಮುದಾಯಗಳು ಬೆಳೆಯಬೇಕಾದರೆ ಸಂಘಟನೆ ಹಾಗೂ ಒಗ್ಗಟು ಇರಬೇಕು ಎಂದು ಆಶಿಸಿದರು.
ಮೈಸೂರು ಭಾರತೀಯ ಸಂಸ್ಥಾನ ಶಾಸೀಯ ಕನ್ನಡ ಅಧ್ಯಯನ ಕೇಂದ್ರ ಹಿರಿಯ ಸಂಶೋಧಕರು ಡಾ.ಆರ್. ಚಲಪತಿ ಮಾತನಾಡಿ, ಭಾರತದ ಪರಂಪರೆಯಲ್ಲಿ ಹಲವಾರು ರಾಜರು ಅಳಿದು ಹೋಗಿದ್ದಾರೆ. ಆದರೆ, ಇವತ್ತಿಗೂ ಶಿವಾಜಿ ಅಜರಾಮರವಾಗಿ ಉಳಿದುಕೊಂಡಿದ್ದಾರೆ. ಇದಕ್ಕೆಲ್ಲ ಕಾರಣ ಆತ ಪ್ರಜೆಗಳ ರಾಜನಾಗಿದ್ದರು ಎಂದರು.
ಶಿವಾಜಿ ಸಾಮ್ರಾಜ್ಯ ಕಟ್ಟುವ ಹೊತ್ತಿಗೆ, ಭಾರತದ ಆಡಳಿತಗಳು ಛಿದ್ರವಾಗಿದ್ದು, ಅನ್ಯರ ಆಕ್ರಮಗಳು ಮಿತಿ ಮೀರಿದ್ದವು. ಸ್ವತಂತ್ರವಾಗಿ ಸಾಮ್ರಾಜ್ಯವನ್ನು ಕಟ್ಟಿ ಬದುಕಿನ 50 ವರ್ಷಗಳಲ್ಲಿ ಇಡೀ ದೇಶವೇ ಕೊಂಡಾಡುವ ದೊರೆಯಾಗಿದ್ದರು ಎಂದು ತಿಳಿಸಿದರು.
ಶ್ರೀ ಗಜಾನನ ಸ್ವಾಮೀಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್, ಛತ್ರಪತಿ ಶಿವಾಜಿ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ನಾಗೇಂದ್ರ ರಾವ್ ಅವತಾಡೆ, ಪ್ರಧಾನ ಕಾರ್ಯದರ್ಶಿ ಎಂ.ಎನ್. ತುಕರಾಮ್ ರಾವ್ ಗಾಡೇಕರ್, ಖಜಾಂಚಿ ಗಣೇಶ್ ರಾವ್ ಸಂಕಪಾಳ್, ಸಂಚಾಲಕ ಜ್ಞಾನಪ್ರಕಾಶ್ ಪರ್ಲಾ ಮತ್ತಿತರರಿದ್ದರು.
ಗಮನ ಸೆಳೆದ ಮೆರವಣಿಗೆ: ಇದಕ್ಕೂ ಮುನ್ನ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಿಂದ ಛತ್ರಪತಿ ಶೀವಾಜಿ ಮಹಾರಾಜರ 399ನೇ ಜಯಂತಿ ಅಂಗವಾಗಿ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಮೆರವಣಿಗೆಗೆ ಶಾಸಕ ಕೆ.ಹರೀಶ್‌ಗೌಡ ಚಾಲನೆ ನೀಡಿದರು. ಬಳಿಕ ದೇವಸ್ಥಾನದಿಂದ ಮೆರವಣಿಗೆ ಕೆ.ಆರ್. ವೃತ್ತ, ಡಿ. ದೇವರಾಜ ಅರಸು ರಸ್ತೆ, ಮೆಟ್ರೋಪಾಲ್ ವೃತ್ತ, ಮೂಲಕ ಸಾಗಿ ಕಲಾಮಂದಿರ ಆವರಣದಲ್ಲಿ ಸಂಪನ್ನಗೊಂಡಿತು. ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು, ವಾದ್ಯಗಳು ಸಾಗಿದವು. ಛತ್ರಪತಿ ಶಿವಾಜಿ ಅವರ ವೇಷಧಾರಿ ಎಲ್ಲರ ಗಮನ ಸೆಳೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net