ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಬರುವವರು ಬಡವರು ಹಾಗೂ ಮಧ್ಯಮ ವರ್ಗದ ಜನರೇ ಅಧಿಕ. ಬಹುತೇಕ ಉಚಿತವಾಗಿ ದೊರೆಯುತ್ತದೆ ಎಂಬ ವಿಶ್ವಾಸದಲ್ಲಿ ಇಲ್ಲಿಗೆ ಬಂದರೆ ನಾಲ್ಕು ತಿಂಗಳಿಂದ ಎಕ್ಸರೇ ಮಷಿನ್ ಕೆಟ್ಟು ನಿಂತಿದ್ದರೂ ಇದುವರೆಗೂ ದುರಸ್ತಿಯಾಗದೆ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಕೈ, ಕಾಲು, ಮೂಳೆ ಮುರಿತ, ಸ್ನಾಯು ಸೆಳೆತ ಸೇರಿದಂತೆ ಪ್ರಮುಖ ಸಮಸ್ಯೆಗಳಿಗೆ ಎಕ್ಸರೇ ಅಗತ್ಯವಾಗಿದ್ದು ಸಾರ್ವಜನಿಕ ಆಸ್ಪತ್ರೆಯಲ್ಲಿ ಕೇವಲ 50 ರೂ.ಗಳಿಗೆ ಎಕ್ಸರೇ ಲಭ್ಯವಿದ್ದರೆ, ಖಾಸಗಿ ಸೆಂಟರ್‌ಗಳಲ್ಲಿ 500-600 ರೂ. ನೀಡಲೇಬೇಕು. ನೋವಿನಿಂದ ನರಳುತ್ತ ಸಾರ್ವಜನಿಕ ಆಸ್ಪತ್ರೆಗೆ ಬರುವ ರೋಗಿಗಳಿಗೆ ಉಚಿತ ಚಿಕಿತ್ಸೆಯೂ ಲಭ್ಯವಿಲ್ಲದೆ ಖಾಸಗಿ ಕೇಂದ್ರಗಳಿಗೆ ಹೋಗಲೇಬೇಕಾದ ಅನಿವಾರ್ಯ ಪರಿಸ್ಥಿತಿಯೂ ಇದೆ.