ರೈಲು ಸೇವೆಗಳಲ್ಲಿ ಬದಲಾವಣೆ

ರೈಲು
ರೈಲು
Published on

ಪ್ರಮುಖ ಮುಖ್ಯಾಂಶಗಳು

  • ಸುರಕ್ಷತಾ ಸಂಬಂಧಿತ ಕಾಮಗಾರಿಗಳ ಹಿನ್ನೆಲೆಯಲ್ಲಿ ರೈಲು ಸೇವೆಗಳಲ್ಲಿ ಬದಲಾವಣೆ
 ಮೈಸೂರು: ಸುರಕ್ಷತಾ ಸಂಬಂಧಿತ ಕಾಮಗಾರಿಗಳ ಹಿನ್ನೆಲೆಯಲ್ಲಿ ಹಾಸನ ಯಾರ್ಡ್‌ನಲ್ಲಿ ಕೆಳಕಂಡಂತೆ ರೈಲು ಸೇವೆಗಳಲ್ಲಿ ಬದಲಾವಣೆ ಮಾಡಲಾಗಿದೆ.
ರೈಲು ಸಂಖ್ಯೆ 16206 ಮೈಸೂರು-ತಾಳಗುಪ್ಪ ಎಕ್ಸ್‌ಪ್ರೆಸ್, ರೈಲು ಸಂಖ್ಯೆ 16205 ತಾಳಗುಪ್ಪ-ಮೈಸೂರು ಎಕ್ಸ್‌ಪ್ರೆಸ್ ಮತ್ತು ರೈಲು ಸಂಖ್ಯೆ 56267 ಅರಸೀಕೆರೆ-ಮೈಸೂರು ಪ್ಯಾಸೆಂಜರ್ ರೈಲುಗಳು ಏ.29, ಮೇ 4 ಮತ್ತು ಮೇ 6 ರಂದು ರದ್ದುಗೊಳ್ಳಲಿವೆ.
ರೈಲು ಸಂಖ್ಯೆ 16225 ಮೈಸೂರು-ಶಿವಮೊಗ್ಗ ಎಕ್ಸ್‌ಪ್ರೆಸ್ ರೈಲು ಏ.29, ಮೇ 4 ಮತ್ತು ಮೇ 6ರಂದು ಮೈಸೂರು ಮತ್ತು ಅರಸೀಕೆರೆ ನಡುವೆ ಭಾಗಶಃ ರದ್ದುಗೊಂಡಿದ್ದು, ಈ ರೈಲು ಅರಸೀಕೆರೆ ನಿಲ್ದಾಣದಿಂದ ತನ್ನ ನಿಗದಿತ ಸಮಯಕ್ಕೆ ಪ್ರಯಾಣ ಆರಂಭಿಸಲಿದೆ.
ಅದೇ ರೀತಿಯಲ್ಲಿ ರೈಲು ಸಂಖ್ಯೆ 56266 ಮೈಸೂರು-ಅರಸೀಕೆರೆ ಪ್ಯಾಸೆಂಜರ್ ರೈಲು ಮಾವಿನಕೆರೆ ಮತ್ತು ಅರಸೀಕೆರೆ ನಡುವಿನ ಸೇವೆ ಭಾಗಶಃ ರದ್ದುಗೊಳ್ಳಲಿದ್ದು, ಏ.29, ಮೇ 4 ಮತ್ತು ಮೇ 6ರಂದು ಮಾವಿನಕೆರೆ ನಿಲ್ದಾಣದಲ್ಲೇ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ.
ರೈಲು ಸಂಖ್ಯೆ 16515 ಯಶವಂತಪುರ-ಕಾರವಾರ ಎಕ್ಸ್‌ಪ್ರೆಸ್ ರೈಲು ಏ.29, ಮೇ 4 ಮತ್ತು ಮೇ 6 ರಂದು ಬೆಂಗಳೂರು ವಿಭಾಗದಲ್ಲಿ ಸುಮಾರು 65 ನಿಮಿಷಗಳ ವಿಳಂಬದೊಂದಿಗೆ ಸಂಚರಿಸಲಿದೆ ಎಂದು ಮೈಸೂರು ವಿಭಾಗದ ವಿಭಾಗೀಯ ಹಣಕಾಸು ವ್ಯವಸ್ಥಾಪಕ ಪೃಥ್ವಿ ಎಸ್. ಹುಲ್ಲತ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net