ಹೃದಯಾಘಾತ ತಡೆಗೆ ಜೀವನ ಶೈಲಿ ಬದಲಾಯಿಸಿಕೊಳ್ಳಲಿ:ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಬಿ.ದಿನೇಶ್ ಸಲಹೆ

ನಗರದ ಜಯದೇವ ಆಸ್ಪತ್ರೆಯ ಸಭಾಂಗಣದಲ್ಲಿ ಆಯೋಜಿಸಿದ್ದ ‘ಕಾರ್ಡಿಯೋ ಯೋಗ ಸಮ್ಮಿತ್’ ರಾಷ್ಟ್ರೀಯ ಸಮ್ಮೇಳನವನ್ನು ಡಾ.ಬಿ.ದಿನೇಶ್, ಡಾ.ಸುನೀಲ್ ಪನ್ವಾರ್ ಉದ್ಘಾಟಿಸಿದರು. ಡಾ.ಕೆ.ಎಸ್.ಸದಾನಂದ, ಡಾ.ಎಂ.ಎ.ಬಾಲಸುಬ್ರಹ್ಮಣ್ಯಂ, ಎನ್.ಕೇಶವಮೂರ್ತಿ, ಸಂದೇಶ್ ಮಹದೇವಪ್ಪ, ಡಾ.ರಾಘವೇಂದ್ರರಾವ್, ಡಾ.ಲಕ್ಷ್ಮೀನಾರಾಯಣ ಶೆಣೈ ಇತರರು ಇದ್ದರು.
ನಗರದ ಜಯದೇವ ಆಸ್ಪತ್ರೆಯ ಸಭಾಂಗಣದಲ್ಲಿ ಆಯೋಜಿಸಿದ್ದ ‘ಕಾರ್ಡಿಯೋ ಯೋಗ ಸಮ್ಮಿತ್’ ರಾಷ್ಟ್ರೀಯ ಸಮ್ಮೇಳನವನ್ನು ಡಾ.ಬಿ.ದಿನೇಶ್, ಡಾ.ಸುನೀಲ್ ಪನ್ವಾರ್ ಉದ್ಘಾಟಿಸಿದರು. ಡಾ.ಕೆ.ಎಸ್.ಸದಾನಂದ, ಡಾ.ಎಂ.ಎ.ಬಾಲಸುಬ್ರಹ್ಮಣ್ಯಂ, ಎನ್.ಕೇಶವಮೂರ್ತಿ, ಸಂದೇಶ್ ಮಹದೇವಪ್ಪ, ಡಾ.ರಾಘವೇಂದ್ರರಾವ್, ಡಾ.ಲಕ್ಷ್ಮೀನಾರಾಯಣ ಶೆಣೈ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಯದೇವ ಸಂಸ್ಥೆ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ಸಂಶೋಧನೆಗಳು ನಡೆಯುತ್ತಿವೆ. ಪ್ರಾಥಮಿಕ ಅಧ್ಯಯನಗಳ ಫಲಿತಾಂಶಗಳು ಆಶಾದಾಯಕವಾಗಿವೆ
  • ಯೋಗ ಮಾಡುವುದಕಷ್ಟೇ ಗಮನಕೊಡದೆ, ವಾರದಲ್ಲಿ ಐದು ದಿನ ಕನಿಷ್ಠ 40 ನಿಮಿಷಗಳ ಚುರುಕಿನ ನಡಿಗೆ ಅವಶ್ಯ

ಮೈಸೂರು:

ಜಯದೇವ ಸಂಸ್ಥೆ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ಹೃದಯ ವೈಫಲ್ಯ, ಹೃದಯಾಘಾತಕ್ಕೆ ಕಾರಣ ಮತ್ತು ಯೋಗದ ಪರಿಣಾಮ ಕುರಿತು ಹಲವು ಸಂಶೋಧನೆ ನಡೆಯುತ್ತಿವೆ ಎಂದು ಶ್ರೀಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಬಿ.ದಿನೇಶ್ ತಿಳಿಸಿದರು.

ಬೆಂಗಳೂರಿನ ಆಯುಷ್ ಇಲಾಖೆ, ಮೈಸೂರಿನ ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರ, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದಿಂದ ನಗರದ ಜಯದೇವ ಆಸ್ಪತ್ರೆಯ ಸಭಾಂಗಣದಲ್ಲಿ ಆಯೋಜಿಸಿದ್ದ ‘ಕಾರ್ಡಿಯೋ ಯೋಗ ಸಮ್ಮಿತ್’ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿಯೂ ಹೃದಯಾಘಾತ ಪ್ರಕರಣ ಹೆಚ್ಚಾಗುತ್ತಿವೆ. ಹಾಗಾಗಿ ಜಯದೇವ ಸಂಸ್ಥೆ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ಸಂಶೋಧನೆಗಳು ನಡೆಯುತ್ತಿವೆ. ಪ್ರಾಥಮಿಕ ಅಧ್ಯಯನಗಳ ಫಲಿತಾಂಶಗಳು ಆಶಾದಾಯಕವಾಗಿವೆ ಎಂದು ತಿಳಿಸಿದರು.
ಹೃದಯಾಘಾತ ತಡೆಗಟ್ಟಲು ಜೀವನ ಶೈಲಿ ಬದಲಿಸಿಕೊಳ್ಳಬೇಕಿದೆ. ವ್ಯಾಯಾಯ ಮಾಡಿದರೆ ಹೃದಯದ ಆರೋಗ್ಯ ಚನ್ನಾಗಿರುತ್ತದೆ ಎಂದು ಅತಿಯಾದ ವ್ಯಾಯಾಮ ಬಾರದು. ಅಲ್ಲದೆ ಯೋಗ ಮಾಡುವುದಕಷ್ಟೇ ಗಮನಕೊಡದೆ, ವಾರದಲ್ಲಿ ಐದು ದಿನ ಕನಿಷ್ಠ 40 ನಿಮಿಷಗಳ ಚುರುಕಿನ ನಡಿಗೆ ಅವಶ್ಯ. ಜತೆಗೆ ಪ್ರತಿದಿನ ತಾಜಾ ಹಾಗೂ ಪೌಷ್ಟಿಕ ಆಹಾರ, 6ರಿಂದ 8 ಗಂಟೆಗಳ ಗುಣಮಟ್ಟದ ನಿದ್ದೆ, ಮಾನಸಿಕ ಒತ್ತಡ ಸಮರ್ಪಕ ನಿರ್ವಹಣೆಯಿಂದ ಹೃದಯವನ್ನು ಆರೋಗ್ಯವಾಗಿಟ್ಟುಕೊಳ್ಳಬಹುದು ಎಂದು ಸಲಹೆ ನೀಡಿದರು.
ಹೃದಯಾಘಾತ ಮತ್ತು ಹೃದಯ ಸ್ತಂಭನ ಎರಡೂ ವಿಭಿನ್ನ ಸ್ಥಿತಿಗಳಾಗಿವೆ. ಹೃದಯಾಘಾತವಾದರೆ ಮೊದಲ ಮೂರು ಗಂಟೆಗಳೊಳಗೆ ಆಸ್ಪತ್ರೆಗೆ ದಾಖಲಾದರೆ ಬದುಕುಳಿಯುವ ಸಾಧ್ಯತೆ ಹೆಚ್ಚು. ಹೃದಯ ಸ್ತಂಭನ ಸಂಭವಿಸಿದರೆ ತಕ್ಷಣ ಸಿಪಿಆರ್ ನೀಡುವುದು ಅತ್ಯಂತ ಮುಖ್ಯ. ಅಪಘಾತ ಅಥವಾ ತುರ್ತು ಪರಿಸ್ಥಿತಿಯಲ್ಲಿ ವಿಡಿಯೋ ಚಿತ್ರೀಕರಣ ಮಾಡುವ ಬದಲು ಸಿಪಿಆರ್ ಕಲಿತು ಜೀವ ಉಳಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಎಂದರು.
ಕೃತಕ ಬುದ್ಧಿಮತ್ತೆ (ಎಐ) ಸೇರಿದಂತೆ ಸಂಶೋಧನೆಯಾಗುತ್ತಿರುವ ಅತ್ಯಾಧುನಿಕ ತಂತ್ರಜ್ಞಾನದ ಪ್ರಯೋಜನಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು. ಆಗ ಎಲ್ಲರಿಗೂ ಗುಣಮಟ್ಟದ ಆರೋಗ್ಯ ಕೊಡಲು ಸಾಧ್ಯ. ಜಯದೇವ ಸಂಸ್ಥೆ ತನ್ನ ಸೇವೆಯನ್ನು ವಿಸ್ತರಿಸುತ್ತಿದ್ದು, 2026ರ ಅಂತ್ಯದೊಳಗೆ ಹೊಸ ಆಸ್ಪತ್ರೆ ಹಾಗೂ ವಿಸ್ತರಣೆಯಿಂದ ಸುಮಾರು ಒಂದು ಸಾವಿರ ಹಾಸಿಗೆಗಳನ್ನು ಅಳವಡಿಸಲಾಗುವುದು. ಈ ಸಾಲಿನ ಡಿಸೆಂಬರ್ ಅಂತ್ಯಕ್ಕೆ ಮೈಸೂರಿನಲ್ಲಿ 200 ಹಾಸಿಗೆಗಳ ಆಸ್ಪತ್ರೆ, ಬೆಂಗಳೂರಿನ ವಿಜಯನಗರ ಮತ್ತು ಶಿವಾಜಿನಗರದಲ್ಲಿ ಉಪಕೇಂದ್ರಗಳು ಹಾಗೂ ಹುಬ್ಬಳ್ಳಿಯಲ್ಲಿ 450 ಹಾಸಿಗೆಗಳ ಹೃದ್ರೋಗ ಆಸ್ಪತ್ರೆಯನ್ನು ಸೇವೆಗೆ ನೀಡಲಾಗುವುದು ಎಂದು ತಿಳಿಸಿದರು.
ಆಯುಷ್ ಇಲಾಖೆ ಆಯುಕ್ತ ಡಾ. ಸುನೀಲ್ ಪನ್ವಾರ್ ಉದ್ಘಾಟಿಸಿದರು. ಜಯದೇವ ಆಸ್ಪತ್ರೆಯ ಮೈಸೂರಿನ ಅಧೀಕ್ಷಕ ಡಾ.ಕೆ.ಎಸ್. ಸದಾನಂದ, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಆರೋಗ್ಯ ಇಲಾಖೆ ನಿವೃತ್ತ ಸಲಹೆ ಡಾ.ಎಂ.ಎ. ಬಾಲಸುಬ್ರಹ್ಮಣ್ಯಂ, ಮೈಸೂರು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಎನ್.ಕೇಶವಮೂರ್ತಿ, ಕರ್ನಾಟಕ ಅಂಚೆ ವೃತ್ತದ ನಿರ್ದೇಶಕ ಸಂದೇಶ್ ಮಹದೇವಪ್ಪ, ಸಿಸಿಆರ್‌ವೈಎನ್‌ನ ಡಾ.ರಾಘವೇಂದ್ರರಾವ್, ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕ ಡಾ.ಲಕ್ಷ್ಮೀನಾರಾಯಣ ಶೆಣೈ, ವೈದ್ಯರಾದ ಡಾ.ಹರ್ಷ ಬಸಪ್ಪ, ಡಾ.ದೇವರಾಜ್, ಡಾ.ಸಂತೋಷ್, ಡಾ.ಮಂಜುನಾಥ್, ಹಿರಿಯ ಶುಶ್ರೂಷಕರಾದ ಹರೀಶ್‌ಕುಮಾರ್, ಉಮಾ, ಲೋಬೋ, ಪಿಆರ್‌ಒಗಳಾದ ವಾಣಿ ಮೋಹನ್, ಚಂಪಕಮಾಲಾ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net