ವಿಷ್ಣು ಸ್ಮಾರಕದಲ್ಲಿ ವಿಷ್ಣು ಜನ್ಮದಿನದ ಸಂಭ್ರಮ....!

ಡಾ.ವಿಷ್ಣುವರ್ಧನ್
ಡಾ.ವಿಷ್ಣುವರ್ಧನ್
Published on

ಪ್ರಮುಖ ಮುಖ್ಯಾಂಶಗಳು

  • ಅಭಿಮಾನಿಗಳಿಂದ ವಿಷ್ಣು ಜನ್ಮದಿನಾಚರಣೆ
  • ಅಂದಾಜು 5 ಸಾವಿರ ಜನರಿಗ ಹೋಳಿಗೆ ಊಟ
  • ಅಭಿಮಾನಿಗಳು ಹಾಗೂ ಅಭಿಮಾನಿ ಸಂಘಟನೆಯಿಂದ ವಿಶೇಷ ಕಾರ್ಯಕ್ರಮ
ಮೈಸೂರು: ಮೈಸೂರು ತಾಲೂಕಿನ ಉದ್ಬೂರು ಗೇಟ್ ಸಮೀಪದ ಡಾ. ವಿಷ್ಣು ಸ್ಮಾರಕದಲ್ಲಿ ಸಾಹಸಸಿಂಹ, ಕರ್ನಾಟಕ ರತ್ನ ಡಾ.ವಿಷ್ಣುವರ್ಧನ್ ಅವರ 76ನೇ ಜನ್ಮದಿನವನ್ನು ಅಭಿಮಾನಿಗಳು ಸಡಗರದಿಂದ ಆಚರಿಸಿದರು. 
ಡಾ.ವಿಷ್ಣು ಸ್ಮಾರಕ ಸೇನಾ ಸಮಿತಿಯಿಂದ ಅಂದಾಜು 5 ಸಾವಿರ ಜನರಿಗ ಹೋಳಿಗೆ ಊಟ ವ್ಯವಸ್ಥೆ ಮಾಡಲಾಗಿತ್ತು. ದೂರದ ಊರುಗಳಿಂದ ಬಂದಿದ್ದ ಅಭಿಮಾನಿಗಳು, ಸಾರ್ವಜನಿಕರು ಒಟ್ಟಾಗಿ ಊಟ ಸವಿದು ಖುಷಿ ಪಟ್ಟರು.
ಇಲ್ಲಿ ದೌಡಾಯಿಸಿದ ನೂರಾರು ಅಭಿಮಾನಿಗಳಿಗೆ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರು ಅನ್ನದಾನ ಮಾಡುವ ಮೂಲಕ ಜನ್ಮದಿನೋತ್ಸವದ ಕಳೆ ಹೆಚ್ಚಿಸಿದರು. ಅಭಿಮಾನಿಗಳೊಂದಿಗೆ ಆತ್ಮೀಯವಾಗಿ ಬೆರೆತು ಶುಭಾಶಯ ಸ್ವೀಕರಿಸಿದ ಅವರು, ವಿಷ್ಣುವರ್ಧನ್ ಅವರ ಮೇಲಿನ ಅಭಿಮಾನ ಮತ್ತು ಪ್ರೀತಿಯನ್ನು ಸ್ಮರಿಸಿದರು.
ಇಲ್ಲಿ ಬೆಳಗ್ಗೆಯಿಂದಲೇ ಅಭಿಮಾನಿಗಳು ಹಾಗೂ ಅಭಿಮಾನಿ ಸಂಘಟನೆಯಿಂದ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಭಿಮಾನಿಗಳು ಪುಷ್ಪನಮನ ಸಲ್ಲಿಸಿ, ಕೇಕ್ ಕತ್ತರಿಸಿ, ವಿವಿಧ ಸೇವಾ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ತಮ್ಮ ನೆಚ್ಚಿನ ನಟನಿಗೆ ಗೌರವ ಅರ್ಪಿಸಿದರು. ಸಾಹಸಸಿಂಹನ ಭಾವಚಿತ್ರ ಹಾಗೂ ಪೋಸ್ಟರ್‌ಗಳನ್ನು ಹಿಡಿದು ಸಂಭ್ರಮಿಸಿದರು.
ಹುಟ್ಟುಹಬ್ಬವನ್ನು ಕೇವಲ ಸಂಭ್ರಮಕ್ಕೆ ಸೀಮಿತಗೊಳಿಸದೆ, ಸಾಮಾಜಿಕ ಕಳಕಳಿಯೊಂದಿಗೆ ಆಚರಿಸುವ ಸಲುವಾಗಿ ರಕ್ತದಾನ ಶಿಬಿರವನ್ನೂ ಹಮ್ಮಿಕೊಳ್ಳಲಾಗಿತ್ತು. ಹಲವರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು.
ಡಾ.ವಿಷ್ಣು ಸ್ಮಾರಕ ಸೇನಾ ಸಮಿತಿಯ ಗೌರವಾಧ್ಯಕ್ಷ ಎಂ.ಡಿ.ಪಾರ್ಥಸಾರಥಿ, ಶಾಂತಕುಮಾರಿ, ಬೆಂಕಿ ಮಹದೇವ್, ಎಸ್. ಸಂತೋಷ್, ಮಹದೇವಸ್ವಾಮಿ, ಎಸ್.ಆರ್. ರಾಜು, ಆನಂದ್ ಶೆಟ್ಟಿ ಇನ್ನಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net