ತಾರತಮ್ಯವಿಲ್ಲದೆ ಮಹನೀಯರ ಜಯಂತಿ ಆಚರಣೆ

 ಕೆ.ಆರ್.ನಗರ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಮಹರ್ಷಿ ಶ್ರೀ ಭಗೀರಥ ಜಯಂತಿ ಮತ್ತು ಶ್ರೀ ಶಂಕರಾಚಾರ್ಯ ಜಯಂತಿ ಆಚರಣೆ ಪೂರ್ವಭಾವಿ ಸಭೆಯಲ್ಲಿ ಶಾಸಕ ಡಿ.ರವಿಶಂಕರ್ ಮಾತನಾಡಿದರು. ತಹಸೀಲ್ದಾರ್ ಜಿ.ಸುರೇಂದ್ರಮೂರ್ತಿ, ಟಿಎಚ್‌ಒ ಎಚ್.ಎಲ್.ಶಂಕರಮೂರ್ತಿ, ತಾಪಂ ಇಒ ವಿ.ಪಿ.ಕುಲದೀಪ್ ಇದ್ದರು.
ಕೆ.ಆರ್.ನಗರ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಮಹರ್ಷಿ ಶ್ರೀ ಭಗೀರಥ ಜಯಂತಿ ಮತ್ತು ಶ್ರೀ ಶಂಕರಾಚಾರ್ಯ ಜಯಂತಿ ಆಚರಣೆ ಪೂರ್ವಭಾವಿ ಸಭೆಯಲ್ಲಿ ಶಾಸಕ ಡಿ.ರವಿಶಂಕರ್ ಮಾತನಾಡಿದರು. ತಹಸೀಲ್ದಾರ್ ಜಿ.ಸುರೇಂದ್ರಮೂರ್ತಿ, ಟಿಎಚ್‌ಒ ಎಚ್.ಎಲ್.ಶಂಕರಮೂರ್ತಿ, ತಾಪಂ ಇಒ ವಿ.ಪಿ.ಕುಲದೀಪ್ ಇದ್ದರು.
Published on
ಕೆ.ಆರ್.ನಗರ: ಸಮಾಜದ ಉದ್ಧಾರಕ್ಕೆ ಹಾಗೂ ಸಮ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಿದ ಮಹಾತ್ಮರ ಜಯಂತಿಗಳನ್ನು ಯಾವುದೇ ತಾರತಮ್ಯ ಮಾಡದೆ ಅದ್ದೂರಿಯಾಗಿ ಆಚರಣೆ ಮಾಡಲು ನಾನು ಸಿದ್ಧನಿದ್ದೇನೆ. ಇದಕ್ಕೆ ಸಮುದಾಯದವರ ಸಹಕಾರ ಅಗತ್ಯ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ಆಡಳಿತ ಸೌಧದದಲ್ಲಿ ಶನಿವಾರ ಮಹರ್ಷಿ ಶ್ರೀ ಭಗೀರಥ ಜಯಂತಿ ಮತ್ತು ಶ್ರೀ ಶಂಕರಾಚಾರ್ಯ ಜಯಂತಿ ಆಚರಣೆ ಸಂಬಂಧ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಎಲ್ಲ ಮಹನೀಯರ ಜಯಂತಿ ಆಚರಣೆಗೆ ಮುಂದಾಗಿದೆ. ವಿಜೃಂಭಣೆಯಿಂದ ಆಚರಿಸಲು ಆಯಾಯ ಸಮಾಜಗಳು ಸಂಘಟಿತರಾಗಿ ಸಹಕಾರ ನೀಡಬೇಕಾದುದ್ದು ನಮ್ಮ ಕರ್ತವ್ಯ ಎಂದರು.
ಎಲ್ಲ ಮಹಾತ್ಮರ ಜಯಂತಿಗಳನ್ನು ವರ್ಷದಲ್ಲಿ ಒಂದೇ ದಿನ ಆಚರಣೆ ಮಾಡಿ ಸಮಾಜಕ್ಕೆ ವಿಶೇಷವಾದ ಸಂದೇಶ ನೀಡಬೇಕೆಂಬ ಉದ್ದೇಶ ನನ್ನಾದಾಗಿದ್ದು ಇದಕ್ಕೆ ಸರ್ಕಾರ ಅನುಮತಿ ಬೇಕಿದೆ. ಎಲ್ಲರ ಅಭಿಪ್ರಾಯದಂತೆ ಏ.23ರಂದು ಭಗೀರಥ ಜಯಂತಿಯನ್ನು ತಾಲೂಕು ಆಡಳಿತದಿಂದ ತಾಲೂಕು ಕಚೇರಿಯಲ್ಲಿ ಸರಳ ಮತ್ತು ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಏ.21 ರಂದು ಶ್ರೀ ಶಂಕರಾಚಾರ್ಯರ ಜಯಂತಿಯನ್ನು ತಾಲೂಕು ಆಡಳಿತದಿಂದ ತಾಲೂಕು ಕಚೇರಿಯಲ್ಲಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಇದೇ ವೇಳೆ ವೈಷ್ಣವ ಸಂಘದವರು ಭಗವತ್ ಶ್ರೀ ರಾಮಾನುಜಾಚಾರ್ಯರ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಣೆ ಮಾಡುವಂತೆ ಸಂಘದ ಅಧ್ಯಕ್ಷ ಕೆ.ವಿ.ಲೋಕೇಶ್ ನೇತೃತ್ವದಲ್ಲಿ ಶಾಸಕರಿಗೆ ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಶಾಸಕರು ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ತಹಸೀಲ್ದಾರ್ ಜಿ.ಸುರೇಂದ್ರಮೂರ್ತಿ, ಟಿಎಚ್‌ಒ ಎಚ್.ಎಲ್.ಶಂಕರಮೂರ್ತಿ, ತಾಪಂ ಇಒ ವಿ.ಪಿ.ಕುಲದೀಪ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಹೇಶ್, ಪುರಸಭೆ ಮಾಜಿ ಸದಸ್ಯ ಎಸ್.ಯೋಗಾನಂದ, ಮುಖಂಡರಾದ ಮಹದೇವ್, ಟಿ.ಕೃಷ್ಣ, ಮೋಹನ್‌ಕುಮಾರ್, ಸಂದೀಪ್, ರಾಮಕೃಷ್ಣ, ಕೇಶವಮೂರ್ತಿ, ಅಶ್ವತ್ಥ ನಾರಾಯಣ, ನಾಗೇಶ್, ಕೃಷ್ಣಮೂರ್ತಿ, ರುಕ್ಮಾಂಗದ, ಎಂ.ಜೆ.ಕುಮಾರ್, ಆದರ್ಶ, ತಿಮ್ಮಶೆಟ್ಟಿ, ರಾಜಯ್ಯ, ಆನಂದ, ಗುರುಪ್ರಸಾದ್, ಪ್ರದೀಪ್, ಪಿ.ರಾಜು, ಯೋಗೇಶ್‌ಕುಮಾರ್, ಬೆಟ್ಟಪ್ಪ, ರವಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net