ಅರ್ಥಪೂರ್ಣವಾಗಿ ಜಯಂತಿ ಆಚರಣೆ

ಸರಗೂರು ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ವಿಶ್ವಮಾನವ ಹಾಗೂ ಜಕಣಾಚಾರಿ ಜಯಂತಿ ಕುರಿತು ಪೂರ್ವಭಾವಿ ಸಭೆ ನಡೆಯಿತು.
ಸರಗೂರು ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ವಿಶ್ವಮಾನವ ಹಾಗೂ ಜಕಣಾಚಾರಿ ಜಯಂತಿ ಕುರಿತು ಪೂರ್ವಭಾವಿ ಸಭೆ ನಡೆಯಿತು.
Published on
ಸರಗೂರು: ಡಿ.29 ವಿಶ್ವಮಾನವ ಜಯಂತಿ ಹಾಗೂ ಜ.1 ರಂದು ನಡೆಯುವ ಶ್ರೀ ಅಮರಶಿಲ್ಪಿ ಜಕಣಚಾರಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ತಹಸೀಲ್ದಾರ್ ಮೋಹನಕುಮಾರಿ ತಿಳಿಸಿದರು.
ಪಟ್ಟಣದ ತಹಸಿಲ್ದಾರ್ ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಜಯಂತಿಯಂದು ವಿಶ್ವಮಾನವ ಹಾಗೂ ಶ್ರೀ ಅಮರಶಿಲ್ಪಿ ಜಕಣಾಚಾರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಗುವುದು. ಶಿಷ್ಟಾಚಾರದಂತೆ ಗಣ್ಯರು, ಉಪನ್ಯಾಸಕರ ಆಹ್ವಾನ ಹಾಗೂ ಹಿರಿಯ ನಾಗರಿಕರಿಗೆ ಗೌರವ ಸಮರ್ಪಣೆ ನಡೆಸುವ ಮೂಲಕ ಜಯಂತಿ ಆಚರಿಸಲಾಗುವುದು ಎಂದರು.
ಸಭೆಯಲ್ಲಿ ತಾಲೂಕು ವಿಶ್ವಕರ್ಮ ಸಮಾಜದ ಗೌರವಾಧ್ಯಕ್ಷ ರವಿ, ಅಧ್ಯಕ್ಷ ನಟರಾಜು ಮಾತನಾಡಿ, ಅಮರಶಿಲ್ಪಿ ಜಕಣಾಚಾರಿ ನಾಡಿನ ಐತಿಹಾಸಿಕ ವಾಸ್ತುಶಿಲ್ಪ ಪರಂಪರೆಗೆ ಅಪಾರವಾದ ಕೊಡುಗೆ ನೀಡಿದ್ದಾರೆ. ಇಂತಹ ಮಹಾನ್ ವ್ಯಕ್ತಿಯ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸುವ ನಿಟ್ಟಿನಲ್ಲಿ ಎಲ್ಲ ಸಮಾಜದವರು ಸಕ್ರಿಯವಾಗಿ ಭಾಗವಹಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಚೈತ್ರಾ ಸ್ವಾಮಿ, ತಾಲೂಕು ವಿಶ್ವಕರ್ಮ ಸಮಾಜದ ಖಜಾಂಜಿ ಎಸ್.ಎಂ.ಸಂತೋಷ್, ಕಸಾಪ ಅಧ್ಯಕ್ಷ ಎಂ.ಕೆಂಡಗಣ್ಣಸ್ವಾಮಿ, ಸಮಾಜದ ಹಿರಿಯ ಮುಖಂಡರಾದ ನಿಂಗಾಚಾರ್, ಗೋಪಾಲಕೃಷ್ಣ, ಬ್ರಾಹ್ಮಣ ಸಮಾಜದ ಅಧ್ಯಕ್ಷ ಶಾಂಬವಮೂರ್ತಿ, ಉಪ್ಪಾರ ಸಮಾಜದ ಅಧ್ಯಕ್ಷ ಮಲ್ಲೇಶ್, ನಿವೃತ್ತ ಶಿಕ್ಷಕರಾದ ರಾಮಲಿಂಗಪ್ಪ, ವಿಶ್ವೇಂದ್ರ, ಕರಾಟೆ ಮಾಸ್ಟರ್ ಟೈಲರ್ ಗೋವಿಂದರಾಜು, ಎಸ್.ಜಿ.ಕಾಳಸ್ವಾಮಿ, ಮುಸ್ಲಿಂ ಮುಖಂಡರಾದ ಸುಭಾನ್, ಗೋವಿಂದರಾಜು ಹಾಗೂ ಶಿರಸ್ತೆಧಾರ ಮನೋಹರ್, ಎಇಒ ಮಹದೇವಸ್ವಾಮಿ, ಕಂದಾಯ ಇಲಾಖಾ ಅಧಿಕಾರಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net