ಮಹಾಪುರುಷರ ಹಾಗೂ ಸಮಾಜ ಸುಧಾರಕರ ಜಯಂತಿಗಳನ್ನು ಒಟ್ಟಿಗೆ ಆಚರಿಸಿ: ಪಿ.ಪ್ರಶಾಂತ ಗೌಡ
ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ಬಿ.ಇ.ಗಿರೀಶ್ ಗೌಡ, ಜಯಪ್ಪ ಹೊನ್ನಾಳಿ, ಪ್ರೇಮಾ ಶಂಕರೇಗೌಡ, ಡಾ.ಎಚ್.ಡಿ.ಸರಿತಾ, ಸುಶೀಲ, ಕೆ.ಮಧು ಅವರಿಗೆ ‘ನಾಡಪ್ರಭು ಕೆಂಪೇಗೌಡರ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪಿ.ಪ್ರಶಾಂತ ಗೌಡ, ಡಾ.ಎಸ್.ಪಿ.ಯೋಗಣ್ಣ, ಡಾ.ಕೆ.ಲೀಲಾ ಪ್ರಕಾಶ್, ಡಾ.ಬಿ.ಆರ್.ನಟರಾಜ ಜೋಯ್ಸ, ಅಂಬಳೆ ಶಿವಣ್ಣ, ಮೂಗೂರು ನಂಜುಂಡಸ್ವಾಮಿ, ಬಸವರಾಜೇಂದ್ರ ಸ್ವಾಮಿ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಜಯಂತಿ
ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ಸಾಧಕರಿಗೆ ಕೆಂಪೇಗೌಡರ ಪ್ರಶಸ್ತಿ ಪ್ರದಾನ
ಮೈಸೂರು: ಯಾವುದೇ ಮಹಾಪುರುಷರ ಹಾಗೂ ಸಮಾಜ ಸುಧಾರಕರ ಜಯಂತಿಯನ್ನು ಒಂದು ಸಮುದಾಯಕ್ಕೆ ಮಾತ್ರ ಸೀಮಿತಗೊಳಿಸದೆ, ಸಮಾಜದ ಎಲ್ಲ ವರ್ಗದ ಜನರು ಒಟ್ಟಾಗಿ ಆಚರಿಸಬೇಕು ಎಂದು ನಗರಪಾಲಿಕೆ ಮಾಜಿ ಸದಸ್ಯ ಪಿ.ಪ್ರಶಾಂತ ಗೌಡ ಹೇಳಿದರು.
ಶ್ರೀ ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ನಗರದ ನಮನ ಕಲಾ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಜಯಂತಿ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಾಪುರುಷರು ಯಾವುದೇ ಒಂದು ಜಾತಿ ಅಥವಾ ಸಮುದಾಯಕ್ಕೆ ಸೀಮಿತರಲ್ಲ. ಅವರ ಚಿಂತನೆಗಳು ಇಡೀ ಸಮಾಜದ ಅಭಿವೃದ್ಧಿಗೆ ದಾರಿದೀಪವಾಗಿದ್ದು, ಅವರ ಆದರ್ಶಗಳನ್ನು ಅನುಸರಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಮಹರ್ಷಿ ವಾಲ್ಮೀಕಿ, ಕನಕದಾಸರು, ಬಸವಣ್ಣ ಹಾಗೂ ನಾಡಪ್ರಭು ಕೆಂಪೇಗೌಡ ಸೇರಿದಂತೆ ಎಲ್ಲ ಮಹಾಪುರುಷರ ಆದರ್ಶ, ತತ್ವ ಮತ್ತು ಮೌಲ್ಯಗಳನ್ನು ಪೋಷಕರು ತಮ್ಮ ಮಕ್ಕಳಿಗೆ ಪರಿಚಯಿಸಿ, ಅವರ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಬೇಕು ಎಂದು ಅವರು ತಿಳಿಸಿದರು.
ನಾಡಪ್ರಭು ಕೆಂಪೇಗೌಡ ಅವರ ದೂರದೃಷ್ಟಿ, ಆಡಳಿತ ಕೌಶಲ್ಯ ಮತ್ತು ಜನಪರ ಚಿಂತನೆಗಳು ಇಡೀ ಸಮಾಜಕ್ಕೆ ಆದರ್ಶವಾಗಿವೆ. ಬೆಂಗಳೂರಿನ ನಿರ್ಮಾತೃ ಎಂದು ಗುರುತಿಸಿಕೊಂಡಿರುವ ನಾಡಪ್ರಭು ಕೆಂಪೇಗೌಡರು ಅಭಿವೃದ್ಧಿ, ಉತ್ತಮ ಆಡಳಿತ ಮತ್ತು ಜನಸೇವೆಯ ಮೂಲಕ ಇತಿಹಾಸದಲ್ಲಿ ಅಳಿಯದ ಛಾಪು ಮೂಡಿಸಿದ್ದಾರೆ. ಅವರ ಆದರ್ಶ, ಮೌಲ್ಯಗಳು ಹಾಗೂ ಸಮಾಜಮುಖಿ ಚಿಂತನೆಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದರು.
ಸಾಧಕರಿಗೆ ಪ್ರಶಸ್ತಿ ಪ್ರದಾನ:
ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ಸಮಾಜ ಸೇವಾ ಬಿ.ಇ.ಗಿರೀಶ್ ಗೌಡ, ಸಾಹಿತಿ ಜಯಪ್ಪ ಹೊನ್ನಾಳಿ, ಪ್ರೇಮಾ ಶಂಕರೇಗೌಡ, ಡಾ.ಎಚ್.ಡಿ.ಸರಿತಾ, ಸುಶೀಲ, ಕೆ.ಮಧು ಅವರಿಗೆ ‘ನಾಡಪ್ರಭು ಕೆಂಪೇಗೌಡರ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸುಯೋಗ ಆಸ್ಪತ್ರೆ ಅಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ, ಸಾಹಿತಿ ಡಾ.ಕೆ.ಲೀಲಾ ಪ್ರಕಾಶ್, ಸಂಧ್ಯಾ ಸುರಕ್ಷಾ ಟ್ರಸ್ಟ್ ಅಧ್ಯಕ್ಷ ಡಾ.ಬಿ.ಆರ್.ನಟರಾಜ ಜೋಯ್ಸ, ಕಲಾವಿದ ಅಂಬಳೆ ಶಿವಣ್ಣ, ಮೈಸೂರು ಶರಣ ಮಂಡಳಿ ಅಧ್ಯಕ್ಷ ಮೂಗೂರು ನಂಜುಂಡಸ್ವಾಮಿ, ಬಸವರಾಜೇಂದ್ರ ಸ್ವಾಮಿ ಇತರರಿದ್ದರು.