

ಪ್ರಮುಖ ಮುಖ್ಯಾಂಶಗಳು
ಸ್ವಿಗ್ಗಿ, ಜೊಮಾಟೋ, ಅಮೆಜಾನ್‌ನಂತಹ ಇ-ಕಾರ್ಮಸ್ ಸಂಸ್ಥೆಗಳ ಮೂಲಕ ವಸ್ತುಗಳನ್ನು ಮನೆ ಮನೆಗೆ ತಲುಪಿಸುವ ಡೆಲಿವರಿ ಕಾರ್ಮಿಕರಾಗಿ ದುಡಿಯಲು ಯುವ ಜನರು ಮುಂದಾಗುತ್ತಿದ್ದಾರೆ. ಅಲ್ಲಿ ಕಿರಿಕಿರಿ ಇಲ್ಲ. ತಿಂಗಳಿಗೆ ಕನಿಷ್ಠ 25ರಿಂದ 30 ಸಾವಿರ ರೂ. ದುಡಿಯುತ್ತಾರೆ. ಅಗತ್ಯ ಇರುವಾಗ ಕೆಲಸ ಮಾಡಿ ಉಳಿದ ಸಮಯದಲ್ಲಿ ವೈಯಕ್ತಿಕ, ತಾತ್ಕಾಲಿಕ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ಹೀಗಾಗಿ, ಈ ಕಡೆಗೆ ಹೆಚ್ಚಿನ ಯುವ ಜನರು ಆಕರ್ಷಿತರಾಗುತ್ತಿದ್ದಾರೆ. ಈ ರೀತಿಯ ವಾತಾವರಣ ಇತರ ಕೆಲಸದ ಸ್ಥಳಗಳಲ್ಲಿ ಕಾಣಸಿಗುತ್ತಿಲ್ಲ.