ಭೂ ಮಾಪನಾ ಇಲಾಖೆ ಅಧಿಕಾರಿಗಳಿಂದ ಗಿರಗೂರು ಗ್ರಾಮ ಠಾಣಾ ಜಾಗ ಸರ್ವೇ

ಗಿರಗೂರು ಗ್ರಾಮದ ಗ್ರಾಮಠಾಣಾ ಜಾಗ ಸರ್ವೇ ಕಾರ್ಯ ನಡೆಸಿ ಕಲ್ಲು ನೆಟ್ಟು ಬಣ್ಣ ಹಚ್ಚಲಾಯಿತು. ಅಧಿಕಾರಿಗಳಾದ ಸುನಿಲ್, ಮಂಜುನಾಥ್. ನಾರಾಯಣಸ್ವಾಮಿ, ನವೀನ್‌ರಾವ್ ಇದ್ದರು.
ಗಿರಗೂರು ಗ್ರಾಮದ ಗ್ರಾಮಠಾಣಾ ಜಾಗ ಸರ್ವೇ ಕಾರ್ಯ ನಡೆಸಿ ಕಲ್ಲು ನೆಟ್ಟು ಬಣ್ಣ ಹಚ್ಚಲಾಯಿತು. ಅಧಿಕಾರಿಗಳಾದ ಸುನಿಲ್, ಮಂಜುನಾಥ್. ನಾರಾಯಣಸ್ವಾಮಿ, ನವೀನ್‌ರಾವ್ ಇದ್ದರು.
Published on
ಬೈಲುಕುಪ್ಪೆ: ಒತ್ತುವರಿಯಾಗಿದೆ ಎನ್ನಲಾಗುತ್ತಿದ್ದ ಗಿರಗೂರು ಗ್ರಾಮಕ್ಕೆ ಸೇರಿದ ಗ್ರಾಮ ಠಾಣಾ ಜಾಗವನ್ನು ಭೂಮಾಪನಾ ಇಲಾಖೆ ಅಧಿಕಾರಿಗಳು ಇತ್ತೀಚೆಗೆ ಸರ್ವೇ ಮಾಡಿ ಕಲ್ಲು ನೆಟ್ಟರು.
ಕಾರ್ಯನಿರ್ವಹಣಾಧಿಕಾರಿ ನ್ಯಾಯಾಲಯ, ತಹಸೀಲ್ದಾರ್‌ಗೆ ಸರ್ವೇ ಕಾರ್ಯ ಕೋರಿದ ಮೇರೆಗೆ ತಹಸೀಲ್ದಾರ್ ಆದೇಶದಂತೆ ಭೂಮಾಪನ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಗ್ರಾಮಠಾಣಾ ಜಾಗ ಗುರುತಿಸಿ ಕಲ್ಲು ನೆಟ್ಟು ಬಣ್ಣ ಹಚ್ಚಿದರು.
ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಿರಗೂರು ಗ್ರಾಮಕ್ಕೆ ಸೇರಿದ ಗ್ರಾಮಠಾಣಾ ಜಾಗವನ್ನು ಸರ್ವೇ ಕಾರ್ಯ ನಡೆಸಿ, ಕಾರ್ಯನಿರ್ವಹಣಾಧಿಕಾರಿ ಸಮ್ಮುಖದಲ್ಲಿ ಹಾಗೂ ಕಂದಾಯ ಅಧಿಕಾರಿಗಳು ಭೂಮಾಪಕ ಇಲಾಖೆ ಸೇರಿದಂತೆ ನಿಯಮನುಸಾರವಾಗಿ ಸರ್ವೇ ಕಾರ್ಯ ನಡೆಸಲಾಯಿತು.
ಅಕ್ಕಪಕ್ಕದವರು ನಮಗೆ ಸೇರಿದ ಜಾಗ ಈಗಾಗಲೇ ಉಚ್ಚ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದೆ ಎಂದು ಕಾರ್ಯನಿರ್ವಣಾಧಿಕಾರಿ ಅವರಲ್ಲಿ ನಮಗೆ ರೋವರ್ ಸರ್ವೇ ಮಾಡಿಕೊಡಿ, ಒತ್ತುವರಿಯಾಗಿದ್ದರೆ ನಾವು ಬಿಟ್ಟುಕೊಡುತ್ತೇವೆ ಎಂದು ತಿಳಿಸಿದರು. ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಭೂಮಾಪನ ಇಲಾಖೆ ಅಧಿಕಾರಿಗಳು ಸರ್ವೇ ನಡೆಸಿ ಕಲ್ಲು ನೆಟ್ಟರು.
ಜೆಸಿಬಿ ಮೂಲಕ ಟ್ರಂಚ್ ತೆಗೆಯಲು ದಿನಾಂಕ ನಿಗದಿ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು. ತಾಲೂಕು ಭೂಮಾಪಕರಾದ ನಾರಾಯಣಸ್ವಾಮಿ, ಕೊಪ್ಪ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ ಹಾಗೂ ಸಿಬ್ಬಂದಿ, ಗ್ರಾಮ ಆಡಳಿತಾಧಿಕಾರಿ ನವೀನ್‌ರಾವ್, ಬೈಲುಕುಪ್ಪೆ ಎಎಸ್‌ಐ ಸೋಮಶೇಖರ್, ಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯ ಕೆ.ಕೆ. ನಾರಾಯಣ್, ಮಾಜಿ ಸದಸ್ಯ ಕೆ.ಕೆ.ರಾಮಸ್ವಾಮಿ, ಗಿರಗೂರು ಗ್ರಾಮದ ಕಿಜರ್, ಸತೀಶ್, ಸಣ್ಣಪ್ಪ, ಶಿವರಾಜ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net