ಬೈಲುಕುಪ್ಪೆ ಗ್ರಾಮ ಠಾಣಾ ಜಾಗ ಸರ್ವೇ

ಬೈಲುಕುಪ್ಪೆ ಗ್ರಾಮ ಪಂಚಾಯಿತಿಗೆ ಸೇರಿದ ಗ್ರಾಮ ಠಾಣಾ ಜಾಗವನ್ನು ಸರ್ವೇ ಮಾಡಲಾಯಿತು. ನಾರಾಯಣಸ್ವಾಮಿ, ನವೀನ್ ರಾವ್, ಬೋರೇಗೌಡ, ಭೈರವ ಇದ್ದರು.
ಬೈಲುಕುಪ್ಪೆ ಗ್ರಾಮ ಪಂಚಾಯಿತಿಗೆ ಸೇರಿದ ಗ್ರಾಮ ಠಾಣಾ ಜಾಗವನ್ನು ಸರ್ವೇ ಮಾಡಲಾಯಿತು. ನಾರಾಯಣಸ್ವಾಮಿ, ನವೀನ್ ರಾವ್, ಬೋರೇಗೌಡ, ಭೈರವ ಇದ್ದರು.
Published on
ಬೈಲುಕುಪ್ಪೆ: ಬೈಲುಕುಪ್ಪೆ ಗ್ರಾಮ ಠಾಣಾ ಜಾಗವನ್ನು ಗ್ರಾಮಸ್ಥರ ದೂರಿನ ಮೇರೆಗೆ ಗ್ರಾಮ ಪಂಚಾಯಿತಿಯಿಂದ ಮಂಗಳವಾರ ಸರ್ವೇ ನಡೆಸಿದರು.
ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೆಯೂರು ಗ್ರಾಮಕ್ಕೆ ಹೋಗುವ ಮುಖ್ಯ ರಸ್ತೆ ಪಕ್ಕದಲ್ಲಿರುವ ಗ್ರಾಮ ಠಾಣಾ ಜಾಗ 1.3 ಎಕರೆ ಇದ್ದು, ಆ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದರು. ಸರ್ವೇ ಕಾರ್ಯ ನಡೆಸುವಂತೆ ಗ್ರಾಮಸ್ಥರು ತಿಂಗಳ ಹಿಂದೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರಘು, ಅಭಿವೃದ್ಧಿ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದ್ದರು. ಈ ಮೇರೆಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬೋರೇಗೌಡ ತಹಸೀಲ್ದಾರ್‌ಗೆ ಸರ್ವೇ ನಡೆಸಿಕೊಡುವಂತೆ ಅರ್ಜಿ ನೀಡಿದ್ದರು.
ತಹಸೀಲ್ದಾರ್ ನಿಸರ್ಗಪ್ರಿಯ ಅರ್ಜಿ ಪರಿಶೀಲಿಸಿ ಸರ್ವೇ ನಡೆಸುವಂತೆ ಸೂಚಿಸಿದ್ದರು. ಅದರಂತೆ ಸ್ಥಳಕ್ಕೆ ತಾಲೂಕು ಭೂಮಾಪಕ ನಾರಾಯಣಸ್ವಾಮಿ, ಆಡಳಿತ ಅಧಿಕಾರಿ ನವೀನ್ ರಾವ್ ಆಗಮಿಸಿ ಗ್ರಾಮ ಪಂಚಾಯಿತಿ ಸಿಬ್ಬಂದಿ, ಗ್ರಾಮಸ್ಥರ ಸಮ್ಮುಖದಲ್ಲಿ ಸರ್ವೇ ಕಾರ್ಯ ನಡೆಸಿ ಕಲ್ಲು ನೆಟ್ಟು ಗ್ರಾಮ ಪಂಚಾಯಿತಿ ವಶಕ್ಕೆ ನೀಡಿದರು.
ಗ್ರಾಮಸ್ಥರಾದ ಮಂಜುನಾಥ್, ಬಸವಣ್ಣ, ಲೋಕೇಶ್, ಗ್ರಾಮ ಪಂಚಾಯಿತಿ ಸಿಬ್ಬಂದಿ ಭೈರವ, ಲೋಕಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net